ನರನಾಗ್ಹುಟ್ಟಿದ್ದೀ ಮರುಳೆ
ಅರಿವು ಎಲ್ಲಿಟ್ಟಿದ್ದೀ ಪ
ವರವೇದಸ್ಮøತಿಶಾಸ್ತ್ರರಿದುನೋಡದೆ
ವರವರ ಒದರುವಿ ಮರೆವಿನೊಳಗೆ ಬಿದ್ದು ಅ.ಪ
ಮನಗಳು ಸ್ಥಿರಮಾಡಿ ಬರಿದ್ವಾಕ್ಕೆಣೆಸುವಿ ಸಟ್ಟೆಮಾಡಿ
ಮನಕೆ ಬಂದಂತಾಡಿ ನರಕದ ಕುಣಿಗೆ ಬೀಳುವಿ ಖೋಡಿ
ಜನನಮರಣವೆಂಬ ಕುಣಿಕೆಯೊಳಗೆ ಸಿಕ್ಕು
ಘನತರ ನೋಯ್ವುವ ನೆನೆಸಿಕೊಳ್ಳದೆ 1
ಕುಜನ ಸಂಗೀಡ್ಯಾಡೊ ಸುಮನದಿ ಸುಜನರೊಡಗೂಡೊ
ನಿಜಮತಿಯೊಳು ಕೂಡೊ ನಿಶ್ಚಲದಿ ನಿಜವನ್ನು ಹುಡಿಕ್ಯಾಡೊ
ಗಜಿಬಿಜಿಯೊಳು ಬಿದ್ದು ಗಿಜಿಗಿಜಿಯಾಗದೆ
ತ್ಯಜಿಸೆಲೋ ಸಂಶಯ ನಿಜವು ತಿಳಿಯುತಿದೆ 2
ಪಕ್ಷಪಾತವನ್ನು ನೀಗಿ ಜ್ಞಾನಚಕ್ಷು ತೆರೆದು ಇನ್ನು
ಸಾಕ್ಷಿಯಾಗಿ ನೀನು ಮಹದಪರೋಕ್ಷವನ್ನು ಕಾಣು
ಶಿಕ್ಷೆ ಪಡೆಯದೆ ಮಹಮೋಕ್ಷ ಪಡೆಯೊ ಜಗ
ದ್ರಕ್ಷ ಶ್ರೀರಾಮನ ಸೂಕ್ಷ್ಮದಿ ತಿಳಿದು 3