ಶ್ರೀಹರಿಶರಣರು ನಮ್ಮವರು ಭವ
ಶರಧಿಯ ಜಿಗಿದರು ನಮ್ಮವರು ಪ
ಪರಮನ ಚರಣದಿ ಅರಿವಿಟ್ಟುರತರ
ದುರಿತದಿಂದುಳಿದರು ನಮ್ಮವರು ಅ.ಪ
ನಿತ್ಯತೃಪ್ತರು ನಮ್ಮವರು ಜಗ
ಮಿಥ್ಯೆಂದರಿತರು ನಮ್ಮವರು
ನಿತ್ಯ ಸರ್ವೋತ್ತಮ ಹರಿಯೆಂಬ
ವೃತ್ತಿ ಬಲಿಸಿದರು ನಮ್ಮವರು 1
ಸತ್ತು ಚಿತ್ತರು ನಮ್ಮವರು ಮಹ
ನಿತ್ಯ ಮುಕ್ತರು ನಮ್ಮವರು
ಮುಕ್ತಿದಾಯಕನಂ ಗುರ್ತಿಟ್ಟರಿಯುವ
ಸತ್ವ ಕಾಲಗಳು ನಮ್ಮವರು 2
ನಿರ್ಮಲಾತ್ಮಕರು ನಮ್ಮವರು ನಿಜ
ಧರ್ಮ ನಿರತರೈ ನಮ್ಮವರು
ಬೊಮ್ಮನಯ್ಯನ ಮರ್ಮ ತಿಳಿದು ದು
ಷ್ಕರ್ಮವ ಗೆಲಿದರು ನಮ್ಮವರು 3
ದೋಷದೂರರು ನಮ್ಮವರು ನಿ
ರಾಸೆ ತಾರರು ನಮ್ಮವರು
ಹೇಸಿದೈವಗಳ ಆಶಿಸಿ ಬೇಡದ
ಕೇಶವನ ದಾಸರು ನಮ್ಮವರು 4
ಭಜನಾನಂದರು ನಮ್ಮವರು ಸ್ಥಿರ
ನಿಜ ಪದವರಿದರು ನಮ್ಮವರು
ಕುಜನ ಕುಹಕಿಗಳ ಗಜಿಬಿಜಿಗಳುಕದೆ
ಸುಜನರೆನಿಸಿದರು ನಮ್ಮವರು 5
ಭೂರಿ ಶೀಲರು ನಮ್ಮವರು ದುಷ್ಟ
ಕೇರಿಯ ಮೆಟ್ಟರು ನಮ್ಮವರು
ಸಾರಸಾಕ್ಷನ ಸವಿಸಾರವರಿದು ಪಾದ
ಸೇರಿಕೊಂಡಿರುವರು ನಮ್ಮವರು 6
ಸದಮಲಾನಂದರು ನಮ್ಮವರು ದು
ರ್ಮದವ ನೂಕಿದರು ನಮ್ಮವರು
ಅಧಮತನದಲಿಂದೊದರುವ ಹೊಲೆಯರ
ಎದೆಯ ತುಳಿವರೈ ನಮ್ಮವರು 7
ಮೋಸಕೆ ಸಿಲ್ಕರು ನಮ್ಮವರು ಯಮ
ಪಾಶವ ಗೆಲಿದರು ನಮ್ಮವರು
ಈಶನ ತಿಳಿದರು ನಮ್ಮವರು 8
ಸುಗಣ ಸಂತರು ನಮ್ಮವರು ಮಹ
ಭಗವದ್ಭಕ್ತರು ನಮ್ಮವರು
ರಘು ಶ್ರೀರಾಮ ಜಗಸರ್ವೋತ್ತಮೆಂದು
ಪೊಗಳುತ ನಲಿವರು ನಮ್ಮವರು 9