ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಎಲೆ ಎಲೆ ಮನ ಉಳಿ ಉಳಿ ಸಿರಿ ವಲ್ಲಭನ ಭಜನೆಯೋಳ್ನಲಿ ನಲಿ ಪ ಮಲಿನ ಮಲದಭಾಂಡ ತೊಳಿತೊಳಿ ಈ ಹೊಲೆಮಯ ಸಂಸಾರ ತುಳಿ ತುಳಿ ಅ.ಪ ಶಮೆಶಾಂತಿ ಖಡ್ಗವ ಹಿಡಿಹಿಡಿ ಕಾಲ ಯಮನ ಭಟರ ಭೀತಿ ಕಡಿ ಕಡಿ ಕ್ರಮದಿ ಬಿಡದೆ ಸತ್ಯ ನುಡಿ ನುಡಿಮಹ ಪಡಿ ಪಡಿ ವಿಮಲ ಸನ್ಮಾರ್ಗದಿ ನಡಿ ನಡಿ ರಮಾರಮಣನ ಪಾದಕಮಲ್ಹಿಡಿ ಹಿಡಿ1 ಮಾನಾಪಮಾನ ಸಮ ತಿಳಿ ತಿಳಿ ನಿಜ ಸುಳಿ ಸುಳಿ ನಾನಾ ಕಲ್ಪನೆ ಕಳಿ ಕಳಿ ಸ್ಥಿರ ಧ್ಯಾನ ದಾಸರೊಳು ಹೊಳಿ ಹೊಳಿ ಹೀನ ಭವಾಂಬುಧಿಬಂಧ ಗೆಲಿ ಗೆಲಿ ಹರಿ ಅಮೃತ ಸದಾ ಮೆಲಿ ಮೆಲಿ 2 ಗಜಿಗಜಿ ಮಾಯ ಮುಸುಕು ತೆಗಿ ತೆಗಿ ನೀ ಕುಜನ ಕುಹಕಸಂಗ ಒಗಿ ಒಗಿ ಸುಜನ ಸುಸಂಗವ ಬಗಿ ಬಗಿ ಬಾಳು ಭಜನಾನಂದಕೆ ತಲೆದೂಗಿದೂಗಿ ಭಜಿಸಿ ಶ್ರೀರಾಮಪಾದ ಲಗಿಲಗಿ ಹಿಗ್ಗಿ ನಿಜಮುಕ್ತಿ ಸಾಮ್ರಾಜ್ಯದಿ ಜಿಗಿ ಜಿಗಿ 3
--------------
ರಾಮದಾಸರು