ಮಂಗಳಂ ಶ್ರೀ ನರಸಿಂಹಗೆ ಜಯಮಂಗಳಂ ಪ್ರಹ್ಲಾದವರನಿಗೆ ಪ.
ತರಳನು ಮೊರೆಯಿಡೆ ಭರದಿಕಂಬದಿಂಬಂದು
ದುರುಳನ ಸದೆವಡೆದು ಕರುಳನು ಧರಿಸಿ
ಸಿರಿಯೊಡಗೂಡಿದ ನರಕೇಸರಿಗೇ 1
ತ್ರಿಜಗತ್ಪಿತ ನಿನ್ನ ನಿಜಪಾದಾಂಬುಜವ
ಭಜಿಸುವೆ ನೋಡೆನ್ನ ಗಜರಾಜವರದ
ಸುಜನರ ಸಂಗತಿದೊರೆವಂತೆ ಕರುಣಿಸು
ಗಜಾರಣ್ಯಕ್ಷೇತ್ರ ವಿರಾಜಿತನೆ 2
ದೋಷ ನಿವಾರಣ ಶೇಷಗಿರಿಯಲ್ಲಿ
ಕೇಶವ ಕಮಲಾಕ್ಷ ಶ್ರೀ ಶ್ರೀನಿವಾಸನಿಗೆ 3