ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ ಜಯ ನಾಗಾಭರಣಾ ಜಯ ಏಕದಂತ ಜಯ ಜಯ ಪ
ಮತಿಯ ಕೊಡು ಪಾರ್ವತಿಯ ನಿಜ ತನುಜನೆಬಿಡದೆ ನಿನ್ನನು ನಾನು ನುತಿಸುವೆ ಕ್ಷಿತಿಯೊಳಗೆಶ್ರೀ ಲಕುಮಿ ಪತಿಯ ಕೊಂಡಾಡಿ ಸದ್ಗತಿಯಪಡೆಯುವದಕ್ಕೆ ಸಾರಥಿಯಾಗು ದೇವಾ 1
ಆಕಾಶದಭಿಮಾನಿ ಅಂಗಜನ ಚಾಪನಿರಾಕರಿಸಿ ಬಿಸುಟ ಲಂಬೋದರನೆಏಕ ಪಿಂಗಾದಿಗಳ ಪ್ರಿಯ ಹಸ್ತಚತುಷ್ಟಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ 2
ಸೀತಾರಮಣನಿಂದ ಪೂಜಿತನಾಗಿವನಧಿ ತೀರದಲ್ಲಿ ಮೆರೆವ ಗಣೇಶಾಸೇತುಮಾಧವ ವಿಜಯವಿಠ್ಠಲರೇಯನದೂತನು ನೀನೆ ಪಾಶಾಂಕುಶಧರನೆ 3