ಗಣೇಶ ಪ್ರಾರ್ಥನೆ
ಭುಜಗಭೂಷಣ ಕರುಣಾ ಗಜಾನನಾ ಪ
ಅಂಬರಕಭಿಮಾನಿ ಶಂಭುದೇವನ ಸುತ
ಇಂಬು ತೋರಿಸೊ ನೀ ವಿಶ್ವಂಭರನ ಸ್ಮರಣೆಗೆ 1
ದಾಸವರ್ಯನೆ ವೇದವ್ಯಾಸರಿಗತಿಪ್ರಿಯ
ದಾಸನೆಂದೆನಿಸೆನ್ನ ಶೇಷಮೂರುತಿಯೆ 2
ಮತಿಯ ಪಾಲಿಸು ಶ್ರೀಪತಿಯ ಸ್ತುತಿಗೆ ವಿಘ್ನ
ತತಿಯ ತಾರದೆ ಶುಭಮತಿ ಇತ್ತು ಸಲಹೊ 3
ತತುವರೊಳಗೆ ಅತುಳ ಮಹಿಮನೆಂದು
ಪ್ರಥಮ ಕಾರ್ಯದಿ ನಿನ್ನ ನುತಿಸಿ ಬೇಡುವರೊ 4
ಶ್ರುತಿಪ್ರತಿಪಾದ್ಯ ಶ್ರೀ ವೆಂಕಟೇಶನ ದೂತ
ಹಿತರೆನಗಿಲ್ಲ ನೀ ಗತಿ ಎಂದು ನಂಬಿದೆ 5