ಒಟ್ಟು 37 ಕಡೆಗಳಲ್ಲಿ , 13 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಪ್ರಾರ್ಥನೆ ಭುಜಗಭೂಷಣ ಕರುಣಾ ಗಜಾನನಾ ಪ ಅಂಬರಕಭಿಮಾನಿ ಶಂಭುದೇವನ ಸುತ ಇಂಬು ತೋರಿಸೊ ನೀ ವಿಶ್ವಂಭರನ ಸ್ಮರಣೆಗೆ 1 ದಾಸವರ್ಯನೆ ವೇದವ್ಯಾಸರಿಗತಿಪ್ರಿಯ ದಾಸನೆಂದೆನಿಸೆನ್ನ ಶೇಷಮೂರುತಿಯೆ 2 ಮತಿಯ ಪಾಲಿಸು ಶ್ರೀಪತಿಯ ಸ್ತುತಿಗೆ ವಿಘ್ನ ತತಿಯ ತಾರದೆ ಶುಭಮತಿ ಇತ್ತು ಸಲಹೊ 3 ತತುವರೊಳಗೆ ಅತುಳ ಮಹಿಮನೆಂದು ಪ್ರಥಮ ಕಾರ್ಯದಿ ನಿನ್ನ ನುತಿಸಿ ಬೇಡುವರೊ 4 ಶ್ರುತಿಪ್ರತಿಪಾದ್ಯ ಶ್ರೀ ವೆಂಕಟೇಶನ ದೂತ ಹಿತರೆನಗಿಲ್ಲ ನೀ ಗತಿ ಎಂದು ನಂಬಿದೆ 5
--------------
ಉರಗಾದ್ರಿವಾಸವಿಠಲದಾಸರು
(ಪಡುಬಿದ್ರೆಯ ಗಣೇಶ) ಮಾಡೆನ್ನೊಳು ಕರುಣ ಗಜಾನನ ಪ. ಮೂರ್ಖನೆನ್ನುತಲೆನ್ನ ಧಿಕ್ಕರಿಸದಿರು ಶಕ್ರವಿನುತ ಚರಣ ಗಜಾನನ 1 ಹರಿನಾಭೀ ಕಮಲಾಕಾಶಾತ್ಮನೆ ಗಿರಿಜಾಂಕಾಭರಣ ಗಜಾನನ 2 ಭಾರತಾರ್ಥ ತತ್ವಾರ್ಥ ಪ್ರಬೋಧನೆ ಸೂರಿಜನೋದ್ಧರಣ ಗಜಾನನ 3 ಕಡಲಶಯನ ಲಕ್ಷ್ಮೀನಾರಾಯಣ ಸಖ ಪಡುಬಿದ್ರೆನಿಕೇತನ ಗಜಾನನ 4
--------------
ತುಪಾಕಿ ವೆಂಕಟರಮಣಾಚಾರ್ಯ
ಅಮೃತ ಗಜಾನನ ಯನ್ನಾಲಯದಿ ತಗದಾ ಆನನಾ ಪ ತನುಜನ ತನ್ವೀ ತನುವಿನ ಘನತರ ಬಾಧೆಯು ಅನುದಿನಾದವರಾ ತೊಳಲಿಸೆ ಅನಷ್ಟೇಕದಂತ ತನು ರಕ್ಷಿಸಿ ತನ್ನ ಜನರೆಂದೆಣಿಸೆಮ್ಮ ಮನದಿ ನೆಲಸೀದಾ 1 ಸಂತತಾನಂತ ಚೀಂತೆಯು ಅಂತರ ದುಗುಡವು ಎಂತು ಕಂಗೆಡಿಸಿ ನೋಳ್ಪವು ಸುತಗಜಾನನ ಸಂತ ಮಹಿಮ ಎನ್ನಂತ ತಿಳಿದು ತಾ ಚಿಂತೆಯ ತವಿಸಿದಾ 2 ಶಿರಿಯನ್ನಾ ಗುರುತಾವರಿಯಳು ಮೆರದಿ ಹರನು ಬಂದು ನಿರುತ ನಿನ್ನನಾ ಸ್ತುತಿಪೆನು ಪರಿಪರಿನುತಿಪುದ ನರಿತು ಗಜಮುಖನು ನರಸೀಂಹವಿಠ್ಠಲಗೆರಗಿ ಹರಸೀದಾ 3
--------------
ನರಸಿಂಹವಿಠಲರು
ಕಾತ್ಯಾಯನಿ ವರಸುತನೇ ಸತತ ಶುಭದಾಯಕನೇ ಮಂಗಳವನು ಕೊಡು ನಮಿಸುವೆನೊ ನಾನು ಪ ಸಿದ್ಧಿವಿನಾಯಕ ವಿದ್ಯಾಪ್ರದಾಯಕ ಸದ್ಬುದ್ಧಿಯ ಕೊಡೋ ಹರನ ಮುದ್ದುತನಯನೆ 1 ಮೂಷಕವಾಹನನೇ ದೋಷವಿದೂರನೇ ಶ್ರೀಶ ಹನುಮೇಶ ವಿಠಲೋಪಾಸಕನೇ 2 ಗೌರೀಸುತ ಗಜಾನನಾ ನಮೋ ನಮೋ ಪಾರ್ವತೀ ಪತಿಯ ಪ್ರಾಣಪದಕನೇ ನಮೊ 3 ಏಕದಂತಾನೇಕ ಚರಿತನೇ ನಮೋ ನೀ ಕೃಪಾದಿ ನೋಡೋ ವಕ್ರತುಂಡನೆ ನಮೋ 4 ಬಟ್ಟಮುತ್ತಿನ್ಹಾರ ಪದಕಧಾರನೇ ನಮೋ ಧಿಟ್ಟ ಶ್ರೀ ಹನುಮೇಶವಿಠಲ ಪ್ರಿಯನೇ ನಮೋ 5
--------------
ಹನುಮೇಶವಿಠಲ
ಗಜಾನನಂ ಲೋಕನುತಂ | ಸ್ಮರಾಮಿ ಗೌರಿಕೃತ ಸುತಂ ಸನ್ನುತ ಭಕ್ತಾಶಯದಂ ಪ ಸನಕಾದಿ ಸ್ತುತಂ ಹಿತಂ | ಶುಭಪ್ರದರತಂ ಮತಂ ಅ.ಪ ಕಲ್ಪಭೂಜಂ ಸಾನುಜಂ | ಪಾಶಧರ ಸಾಮಜಂ ಪ್ರಸನ್ನ ಚತುರ್ಭುಜಂ | ಕಾರ್ತಿಕೇಯ ಮಹಾಗ್ರಜಂ ಪರಶಿವ ಕಾಮಿತ ತನುಜಂ | ಫಣಿಬಂಧಯುತಂ ಸೇವ್ಯ ಮಹಾಗಣೇಶ ಪಿತರಜಂ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗಜಾನನಾ ಗಜಾನನಾ ಸ್ವಾಮಿ ನಿನ್ನವನಾ ಪಾರ್ವತಿ ನಂದನಪೂರ್ವ ಚರಿತ ಘನ ನಿರ್ವಿಘ್ನ ದಾಯಕ ಗಜಾನನಾ ಮೂಷಕವಾಹನ ದೋಷಕರಿಪುಕುಲ ನಾಶಿಕ ವಿಗ್ರಹಗಜಾನನಾ ಮದನಾರಿ ಮನೋಭವ ರದಸಾಮಲೇಕದಂತದಯ ಸದನಾ ಲಂಬೊದರ ಗಜಾನನಾ ಕರುಣಾಪೂರಿತ ಸರ್ವಾ ಭರಣಾ ಭೂಷಿತ ಭಯ ಹರಣಾ ತ್ರಿ ಜಗನುತ ಗಜಾನನಾ ಹೊಂದಿದ ಶರಣರಿಗೆಂದೆಂದು ವಿದ್ಯಗಳ ತಂದಿದಿರಿಡುತಿಹ ಗಜಾನನಾ ತಂದೆ ಮಹಿಪತಿ ನಂದÀನ ಸಾರಥಿ ಇಂದೆನ್ನನುದ್ಧರಿಸು ಗಜಾನನಾ.
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗಣನಾಥ ನಿನ್ನ ನೆನೆವೆ ಗುರುವೆ ಗಣನಾಥ ನಿನ್ನ ನೆನೆವೆ ಪ. ಪ್ರಣತಾರ್ತಿ ಭವಭಂಜನ ನಿರಂಜನ ಗುಣ ಪಾರಾವಾರ ತ್ರಿನಯನ ಕುಮಾರ1 ಘನಯೊಗಸಾಧ್ಯ ಜ್ಞಾನ ವಿದ್ಯಾ ಭೂರಿದ 2 ಇನತೇಜ ಗಜಾನನ ಲಕ್ಷ್ಮೀನಾರಾ- ಯಣಕಿಂಕರ ಫಣಿಪಾಲಂಕಾರ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಗಣನಾಥ ನಿನ್ನ ನೆನೆವೆ ಗುರುವೆ ಗಣನಾಥ ನಿನ್ನ ನೆನೆವೆ ಪ. ಪ್ರಣತಾರ್ತಿ ಭವಭಂಜನ ನಿರಂಜನ ಗುಣ ಪಾರಾವಾರ ತ್ರಿನಯನ ಕುಮಾರ 1 ಘನಯೊಗಸಾಧ್ಯ ಜ್ಞಾನ ವಿದ್ಯಾ ಭೂರಿದ 2 ಇನತೇಜ ಗಜಾನನ ಲಕ್ಷ್ಮೀನಾರಾ- ಯಣಕಿಂಕರ ಫಣಿಪಾಲಂಕಾರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗಣಪತಿ ಸ್ತುತಿ ಭಜಿಸುವೆ ತವ ಚರಣ ಗಜಾನನ ಪ ಸಿಂಧುವ ಮಥಿಸುವಾಗ ಸುರಾಸುರರ್ ಮಂದರ ಗಿರಿಯ ಬಲ್ಪಿಂದ ಮಳ್ಗಿಸುತವ - ರಿಂದ ಮೊದಲ ಪೂಜೆವೊಂದಿದ ವಿಘ್ನೇಶ 1 ಭೂಷಣ ರವಿಶತಭಾಸ ಲಂಬೋದರ 2 ಧರಿಸುತಲನುದಿನ ಮೆರೆವನೆ ಪಾವಂಜಿ ಪುರದಧೀಶನ ದಾಸರ್ಗುರು ಹಿತಗೈವನೆ 3
--------------
ಬೆಳ್ಳೆ ದಾಸಪ್ಪಯ್ಯ
ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ ಜಯ ನಾಗಾಭರಣಾ ಜಯ ಏಕದಂತ ಜಯ ಜಯ ಪ ಮತಿಯ ಕೊಡು ಪಾರ್ವತಿಯ ನಿಜ ತನುಜನೆಬಿಡದೆ ನಿನ್ನನು ನಾನು ನುತಿಸುವೆ ಕ್ಷಿತಿಯೊಳಗೆಶ್ರೀ ಲಕುಮಿ ಪತಿಯ ಕೊಂಡಾಡಿ ಸದ್ಗತಿಯಪಡೆಯುವದಕ್ಕೆ ಸಾರಥಿಯಾಗು ದೇವಾ 1 ಆಕಾಶದಭಿಮಾನಿ ಅಂಗಜನ ಚಾಪನಿರಾಕರಿಸಿ ಬಿಸುಟ ಲಂಬೋದರನೆಏಕ ಪಿಂಗಾದಿಗಳ ಪ್ರಿಯ ಹಸ್ತಚತುಷ್ಟಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ 2 ಸೀತಾರಮಣನಿಂದ ಪೂಜಿತನಾಗಿವನಧಿ ತೀರದಲ್ಲಿ ಮೆರೆವ ಗಣೇಶಾಸೇತುಮಾಧವ ವಿಜಯವಿಠ್ಠಲರೇಯನದೂತನು ನೀನೆ ಪಾಶಾಂಕುಶಧರನೆ 3
--------------
ವಿಜಯದಾಸ
ನೋಡಿ ಧನ್ಯನಾದೆನಾ ಗಜಾನನಾ ಪುನೀತನಾ ಪಾಡಿ ಭಜನೆ ಮಾಡಿ ಇಡುವೆ ಅಡಿಗಳಲ್ಲಿ ಶಿರವಾ ಪ ಭಾರತಾರ್ಥ ಬರೆದ ದೇವ ಮಿತ್ರನಾ ಸುಪುತ್ರನಾ ಮಾರನಾಸ್ತ್ರ ಗೆಲಿದ ನಿಟಿಲನೇತ್ರನಾ ವಿರಕ್ತನ 1 ಸಕಲ ಶಾಸ್ತ್ರ ತಿಳಿಸೋ ಏಕದಂತನೇ ಬಲವಂತನ ಮುಕುತಿ ಮಾರ್ಗವ ತೋರೋ ವಕ್ರತುಂಡ ವಿಘ್ನದಂತನೇ 2 ಜ್ಞಾನವಿತ್ತು ನುಡಿದು ನುಡಿಸೋ ನೀನೆ ನಿಂದು ವದನದಿ ಮನವಾ ಹನುಮೇಶವಿಠಲನೊಳು ನಿಲಿಸೋ ಬೇಗದಿ 3
--------------
ಹನುಮೇಶವಿಠಲ
ಪ್ರಣಾಮ ಗಣರಾಯಾ ಪ್ರ'ೀಣಾ ಪಪ್ರಥಮ ಪ್ರಣಾಮವ ಮೂಡಿ ಬೇಡುವೆ'ಘ್ನರಾಜ ನೀ ನೀಡೆಮಗಭಯಾಅ.ಪಪಾಶಾಂಕುಶಧರ ಮೂಷಕವಾಹನಕೇಶರಗಂಧ 'ಭೂತಾಂಗನೇಶೇಷೋದರ ಉಮೇಶನಂದನಾಯಶವ ನೀಡು ಸತ್ಕಾರ್ಯಗಳಲ್ಲಿ 1ಏಕ'ಂಶತಿ ಮೋದಕ ಪ್ರೀಯಾಏಕದಂತ ಗಜವದನ ಉದಾರಾಕಾಕುಬುದ್ಧಿಗಳ ಬಿಡಿಸಿ ಬೇಗನೇಶ್ರೀಕಾಂತನಲಿ ಏಕಾಂತಭಕುತಿ ಕೊಡು 2ಸಿದ್ಧಿ 'ನಾಯಕಾ 'ದ್ಯಾಸಮುದ್ರಾಬುದ್ಧಿ ಪ್ರದಾಯಕ ಮುದ್ದು ಗಜಾನನಾಶುದ್ಧ ಜ್ಞಾನ ವೈರಾಗ್ಯ ಭಕುತಿಕೊಟ್ಟುಉದ್ಧರಿಸೈ ಭೂಪತಿ'ಠ್ಠಲಪ್ರಿಯಾ 3
--------------
ಭೂಪತಿ ವಿಠಲರು
ಬಾಲಗಜಾನನ ಬಾ ಗುಣಸದನ ಪಾಲಿತ ತ್ರಿಭುವನ ಬಾಲ ಜಗಜ್ಜೀವನ ಪ. ರಾಧಾದೇವಿಯಾರಾಧಿಸಿದಳು ನಿನ್ನ ಆದಿಯೊಳ್ ಕೈಕೊಂಬೆ ಮೋದದಿಂದ ಪೂಜನ 1 ವಿಘ್ನವಿಭಂಜನ ವಿಧಿಸುರ ರಂಜನ ಅಗ್ನಿ ಗರ್ಭನಗ್ರಜ ಅಖುವಾಹನ ಮೋಹನ 2 ಪ್ರಿಯ ಶ್ರೀ ಲಕ್ಷುಮಿನಾರಾಯಣಶರಣ ಕಾಯೊ ಕಾಮಿತಫಲದಾಯಕ ಸುಮನ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಂದೇ ಶ್ರೀ ಗೌರಿನಂದನ ಸುರನರ ವೃಂದವಂದಿತಚರಣ ಗಜಾನನ ಪ. ಶಂಕರೋಲ್ಲಾಸ ಪಾಶಾಂಕುಶಧರ ಕರ ಪಂಕಜ ಸುವಿರಾಜ ರವಿತೇಜ 1 ಜಂಭಾರಿಸಂನುತ ಜಾಹ್ನವೀಧರಸುತ ಲಂಬೋದರ ಸುಂದರ ಕೃಪಾಕರ 2 ಸುಕ್ಷೇಮಧಾಮ ಶ್ರೀ ಲಕ್ಷ್ಮೀನಾರಾಯಣನ ಪಕ್ಷೈಕಪಾವನ ಸುಧೀಷಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಿಘ್ನೇಶ ಪಾಹಿಮಾಂ ವಿಘ್ನ ನಿವಾರಕ ನಿರ್ವಿಘ್ನದಾಯಕ ಪ ಭಗ್ನದಂತಾಕಾಶಾಭಿಮಾನಿ ಮಗ್ನಂ ಕೃತ್ವಾವೋ ಮನ ಅಗ್ನಿ ನೇತ್ರಸುತ ತವ ಪದದೆ ಅ.ಪ ಕುಕ್ಷಿ ಮಹಾಲಂಬೋದರ ಇಕ್ಷುಚಾಪಹರ ಅಕ್ಷತ ಶೋಭಿತ ಗಜಪಾಲ ರಾಕ್ಷಸ ಮದಹರ ಅಂಕುಶಪಾಶ ಕಿನ್ನರ ವಂದಿತ ಚರಣ 1 ಗಜಾನನ ಮನೋಹರ ಗಾತ್ರ ಅಜಿನ ಬದ್ಧ ಪ್ರಲಂಬ ಪವಿತ್ರ ಭಜಕೇಷ್ಟದ ಪರಮ ಸೂತ್ರ ಸುಜನ ಪಾಪ ಪರ್ವತ ವೀತಿ ಹೋತ್ರ 2 ಮೂಷಕ ಗಮನ ವಾಯಭುಗ್ ಭೂಷ ಆದಿಪೂಜ್ಯ ವಿತತ ಮಹಿಮ ಏಕದಂತ ಗಂಧಲೇಪಿತ ವಕ್ಷ ಪತಿತ ಪಾವನ ವಿಶ್ವೋಪಾಸ್ಯ 3 ವ್ಯಾಸೋಕ್ತ ಪುರಾಣ ಲಿಖಿತನೆ ಶೂರ ವಿಂಶತ್ಸೇಕ ಮೋದಕ ಭಕ್ಷ ಕಟಿ ವಿರಾಜಿತ ಕ್ಲೇಶನಾಶನ ಸುಂದರ ಆಶಾಪಾಶ ರಹಿತ ಭೂತ ಗಣೇಶ 4 ಹಾಟಕ ಮಣಿಮಯ ಮಕುಟ ತಟಿತ್ತೇಜ ನಿತ್ಯವಹಿರೂಪ ಪಟಪಟ ಶಬ್ದಘಟಿತ ಗಜಕರ್ಣ ನಿಟಿಲಾಕ್ಷ್ಯವಂದ್ಯ ವಿಜಯರಾಮಚಂದ್ರ ವಿಠಲ ಪೂಜಕ ಶತಸ್ಥ 5
--------------
ವಿಜಯ ರಾಮಚಂದ್ರವಿಠಲ