ಸೂತ್ರನಾಮಕ | ಸುಂದರನೇಕ | ಸೂತ್ರನಾಮಕ ಪ
ಸತ್ಪಾತ್ರ ವಿನುತ ಶುಭಗಾತ್ರ ಪವಿತ್ರ ಅ.ಪ.
ರಾಮಪದ ಭೃಂಗಾ | ರಾವಣ ಮದಭಂಗ | ಗಜಸಿಂಗಾತಾಮಸ ಕುಲಕೆ ನೀ ಧೂಮಕೇತು ಬುಧಸೌಮನಸಾಗ್ರಣಿ ಕಾಮಿತ ಫಲದಾ 1
ಪಾಂಡುನಂದನಾ | ಪಾಲಿಸು ಯನ್ನಾ | ಖಂಡ ಪಾವನಾಅಂಡಜಾಧಿಪನ ಕಂಡು ಭಜಿಸಿ ದೋ-ರ್ದಂಡ ಖಳ ಕುಲ ಚಂಡ ಪ್ರಚಂಡಾ 2
ಜ್ಞಾನದಾಯಕಾ | ಆನಂದತೀರ್ಥ | ದೀನ ಪೋಷಕಭಾನುಕೋಟಿ ತೇಜ ವ್ಯಾಸ ವಿಠಲನಧ್ಯಾನದೊಳಿಹ ಮಮ ಮಾನಸ ಹಂಸಾ 3