ಲಕ್ಷ್ಮೀದೇವಿ
13 ಭಾಗ್ಯವ ಕೊಡು ತಾಯೆ ಪ
ಭಾರ್ಗವಿ ನಿನ್ನಯ| ಪದಯುಗಕೆರಗುವೆ|
ಭಾಗ್ಯದ ಲಕ್ಷ್ಮೀ ಸೌ| ಭಾಗ್ಯದ ನಿಧಿಯೇ ಅ. ಪ
ಸಾಗರಸಂಜಾತೆ| ದೇವಿ| ನಾಗವರದಪ್ರೀತೆ ||
ಯೋಗಿಜನಾವಳಿ| ಮಾನಸಪೂಜಿತೆ |
ಅಗಣಿತಗುಣಮಣಿ| ತ್ರಿಜಗದ್ವಂದಿತೆ 1
ಸುರುಚಿರಸುಮಗಾತ್ರೆ | ದೇವಿ| ಹಿಮಕರನಿಭವಕ್ತ್ರೆ ||
ಕಿನ್ನರ | ಸುರಮುನಿ ಪೂಜಿತೆ |
ಕಾಮಿತವೀಯುವ || ಕರುಣಾಕರೆಯೆ 2
ಜನನಿಯೆ ನಿರತವು ನೀ | ಪ್ರೇಮವ | ನಿರಿಸುತಲೆನ್ನೊಳು ನೀ |
ಕನಕದ ವೃಷ್ಟಿಯ | ಕರೆಯುತಲನುದಿನ |
ಮನ್ಮನದಿಷ್ಟವು | ಸಿದ್ಧಿಸುವಂದದ 3
ಅಹಿಪತಿ ಶಯನನಿಗೆ | ಮೋಹದ | ಮಹಿಷಿಯು ನೀನಾಗೆ ||
ಮಹಿಮಾಕರೆ ನೀ | ಮಹಿಯೊಳಗನಿಶವು |
ಇಹಪರ ಸುಖವನು | ಭವಿಸುವ ತೆರದಾ 4
ಅಜಭವಸುರವಿನುತೆ | ದೇವಿ | ಸುಜನಾವಳಿಪ್ರೀತೆ ||
ಗಜವಾಹಿನಿ ವರ | ಮದಗಜಗಮನೆಯೆ |
ವಿಜಯವಿಠಲಪ್ರಿಯೆ ಶ್ರೀ ಗಜಲಕ್ಷ್ಮಿಯೆ 5
ಶುಭ | ಮಂಗಳೆ ಸುಪವಿತ್ರೆ ||
ಮಂಗಳಾಂಗಿ ನರ | ಸಿಂಗನ ರಮಣಿಯೆ |
ಮಂಗಳಕಾರ್ಯಗ | ಳನುದಿನವೆಸಗುವ 6
ಪಂಕಜದಳನೇತ್ರೆ | ದೇವಿ | ಕಿಂಕರನುತಿಪಾತ್ರೆ ||
ಶಂಖಚಕ್ರಾಂಕಿತ | ಶ್ರೀ ವೈಕುಂಠನ |ಅಂಕದಿ ಮೆರೆವಖಿ | ಳಾಂಕ ಮಹಿಮಳೇ 7