ಚಿಂತಿಪೆನೊಂದೊಂದು
ನಾನಿಂತು ಬೇಡುವೆನು ಪ
ನರಜನ್ಮಕೆ ಬರುವುದು ತಾ ದುರ್ಲಭವು
ವರಕುಲ ದುರ್ಮಿಳವು ದೊರೆವುದೆ ಭಾಗ್ಯವು
ಧರೆಯೊಳು ಬಂದೀ ಗುರುಕುಲದೊಳು ಪುಟ್ಟಿ
ಗುರುವರಪೂಜ್ಯ ಪರಾತ್ಮನ ಪೂಜಿಪೆ 1
ನಿಜರೂಪ ತೋರಿದಿ ಪ್ರಲ್ಹಾದನಿಗೆ
ಗಜವರನೆನಹೀಗೆ
ವಿಜಯನ ರಾಣಿಗೆ ದ್ರುಪದಾತ್ಮಜೆಗೆ
ಭಜಕರ ನಿಚಯಕ್ಕೆ
ಕುಜಪ್ರದ ಮೂರ್ತಿಗೆ
ಅಜರಾಮರಿಗೆ ನಿಜಪದ ತೋರೆಂದು ಭಜಿಸಿ ಬೇಡುವೆನು 2
ಗಂಗೋದಕದೊಳು ಮೀಯಲು ಪಾವನವು
ಮಂಗಲ ತುಲನೇಯು
ಸಿಂಗಾರದೊಳಧಿಕಾಚ್ಯುತ ಭೂಷಣೆಯು
ನಿನ್ನಾದೇ ವರವು
ಬಂಧುರದೇಹವ ತಾಳಿದೆನಗೆ ನೀ
ಸಂಗಸುಖವನೀಯೋ ನರಸಿಂಹವಿಠಲ3