ಸರಿಯೆ ಮರೆವುದು ಮುರಹರ ಪ
ಚರಣ ಸೇವಕರ ದಾಸನ ಮುರಹರ ಅ.ಪ
ಶರಣಾಗತಜನ ಭರಣನೆಂದರಿತು ನಾ
ಚರಣ ಕಮಲಗಳಿಗೆರಗಿದೆನೊ
ಕರುಣಾಮಯ ಕಾರಣ ಕಾರಣ
ಹರಣ ಮಾಡದೆ 1
ಗಜವರನನು ಕಾಯ್ದ ನಿಜಚರಿತೆಯ ಸದಾ
ಭಜಿಸುತಿರುವೆನೊ ಅಜಜನಕ
ಸುಜನೋದ್ಧಾರ ತ್ಯಜಿಸದಿರೆಲೊ ಎನ್ನ
ಭುಜಪುಂಗರಿಪು ಧ್ವಜ ಹರಿ ಎನ್ನನು 2
ಎನ್ನಲಿ ದಯದಿ ಪ್ರಸನ್ನನಾಗೊ
ನಿನ್ನ ಸೇವಕನನು ಧನ್ಯನ ಮಾಡದೆ 3