ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತನೀಗ ಪ್ರಣವ ಪಾದ್ಯನೊ | ಭೂತ ಪ್ರೇತ ಪ್ರಮಥ ತತಿಗೆ | ನಾಥನೆನಿಪ ನಮಗೆ ನಿರುತ | ವಾಕನೊಳಗೆ ಹರಿಯ ತೋರುವ ಪ ಗಜದನುಜ ವಿನಾಶನೀತ | ಗಜವದನನ ಪೆತ್ತನೀತ | ಗಜನ ಸದದನೀತ ಪೆತ್ತಂ | ಗಜನ ಗೆದ್ದ ಗಂಭೀರನೀತ | ಗಜರಿಪುರಥ ರಮಣನೀತಾ ನಂ | ಗಜಮಾರಗೊಲಿದನೀತ | ಗಜ ವರದನ ಭಕ್ತರಘವೆಂಬೊ | ಗಜಕೆ ಕೇಸರಿಯಾಗಿಪ್ಪನೀತಾ 1 ದ್ವಿಜರಾಜ ಜುಟನೀತಸೋತ್ತಮ | ದ್ವಿಜಗೆ ಪಾಲಿಪನೀತ ಸತತಾ | ದ್ವಿಜ ಪನ್ನಗನ್ನ ಸಮಗುಣನೀತಾ | ದ್ವಿಜ ಕುಲದಲ್ಲಿ ಉದ್ಭವನೀತ | ದ್ವಿಜನ ಶಾಪವ ಕೈಕೊಂಡನೀತ | ದ್ವಿಜ ಭೂಷಣ ಯಾಗದಲಿ ಸೂರ್ಯನ | ಧ್ವಜವ ಕಿತ್ತಿದನೀತ ಕೈಲಾಸ | ದ್ವಿಜವಾಗಿವುಳ್ಳ ಉಗ್ರೇಶನೀತ2 ತ್ರಿಗುಣಾಕಾರ ನೀತ ಮೂರು | ಜಗವದಲ್ಲಣನೀತ ಮೇರು | ನಗಚಾಪನೀತ ನಾರಾಯಣಾಸ್ತ್ರದಿ | ನಗರನುರುಪಿ ಬಿಟ್ಟನೀತ | ಬಗೆಬಗೆಯ ಜೀವಿಗಳಿಗೆ ಬಿಡದೆ | ಅಗಣಿತ ಭೋಗ ಪ್ರದಾತನೀತ | ಮೃಗಲಾಂಛನದ ಮೊಗನಗೆ ಈತ | ನಿಗಮಾಶ್ರವದಗಧಿಕನೀತಾ 3 ಭಸುವ ರಾವಣ ಮಾಗಧ ಕಶ್ಯಪ | ಅಸುರಗಣಕೆ ವರವಿತ್ತನೀತ | ಪಶುವದನ ಪರಮೇಶ್ವರನೀತ | ವಿಷವ ಭಂಜನಭವ ಶಿವನೀತ | ಬಿಸಿಜ ಸಂಭವ ನಂದನನೀತ | ಅಸಮವೀರ ವೈಷ್ಣವನೀತ | ವಸುಧಿಯೊಳಗೆ ಶರಣ ಜನಕೆ | ವಶವಾಗಿಯಿಪ್ಪ ಉಗ್ರೇಶನೀತಾ 4 ಹೇಮಕೂಟಾದ್ರಿ ನಿಲಯನೀತ | ರಾಮದೇವ ವಾಸವಂದ್ಯ | ಸೋಮವರ್ಣನೀತ ಸಕಲ | ಕಾಮಿತಾರ್ಥವ ಕೊಡುವನೀತ | ಯಾಮ ಯಾಮಕೆ ಮನದೊಳು ನಿಂದು | ಕ್ಷೇಮ ಮಾರ್ಗಕ್ಕೆ ಪ್ರೇರಕÀನೀತ | ರಾಮ ವಿಜಯವಿಠ್ಠಲನಂಘ್ರಿ | ನಾಮನೆನಿಸಿ ಕೊಂಡಾಡುವನೀತಾ5
--------------
ವಿಜಯದಾಸ
ಗಣೇಶ ವಂದಿಸುವೆ ಕರದ್ವಂದ್ವ ಜೋಡಿಸಿ ಪ ವಂದಿಸುವೆ ಒಂದೆ ಮನದಲಿ ನಂದಿವಾಹನ ಕಂದ ಗಣಪಗೆಬಂದ ಭಯಗಳ ಹಿಂದೆ ಮಾಡುತ ಸಿಂಧುಶಯನನ ತೋರಿಸೆಂದು ಅ.ಪ. ಅನುದಿನ ಪಾಶ ಅಂಕುಶದಾರನೇ 1 ವಾಕು ಲಾಲಿಸಬೇಕೊ ಪ್ರಭುವೇಕಾಕುಜನ ಸಹವಾಸದಿಂದಲಿ ನೂಕಿಸೆನ್ನನು ಏಕದಂತನೆಏಕಭಾವದಿ ಭಜಿಪ ಭಕುತರೋಳ್ಹಾತನೆನ್ನಗಜವದನನೆ ಬಾ ತೈಜ ವಿಶ್ವಭಾಜಕನೆ ತೋರೋ ಪಾದಭುಜ ಚತುಷ್ಟನೆ ತ್ರಿಜಗವಂದ್ಯನೆ ಭಜಿಪ ಭಕುತರ ಅಘವ ಕಳೆವನೆನಿಜೆ ಸುಜನರ ...ಭುಜಗ ಭೂಷಣ ಕಾಮನನುಜನೆ 2 ವಾರಿಬಂಧನ ಪೂರ್ವದಿ ಶ್ರೀ ರಾಮಚಂದ್ರನು ಪ್ರೀತಿಲಿ ಪೂಜಿಸಿದದುರುಳ ರಾವಣ ಮೆರೆದು ಕೆಟ್ಟನು ಧರೆಯಗೆದ್ದನುಜರಿದು ಚಂದ್ರನುವಿದ್ಯ ಪ್ರದಾಯಕನೆ ಮನ ತಿದ್ದು ಬೇಗನೆ ಬಿದ್ದು ಬೇಡುವೆ ಸಾಧುವಂದ್ಯನೆಮಧ್ವ ಮತದೊಳು ಶ್ರದ್ಧೆ ಪುಟ್ಟಿಸೊ ಮಧ್ವವಲ್ಲಭತಂದೆ ವರದ ವಿಠಲ ಪ್ರಿಯ ಸಿದ್ಧಿದಾಯಕ
--------------
ಸಿರಿಗುರುತಂದೆವರದವಿಠಲರು
ಗಣೇಶ ಹಿತಮತಿಯ ಪಾಲಿಸೊ ಪ ಗತಿಯ ಕಲ್ಪಿಸಿ ಸಿರಿಪತಿಯ ಪಾದದಿ ಅ.ಪ ಗಜವದನನೆ ಎನ್ನ ನಿಜಭಕುತಿಯೊಳ್ನಿನ್ನ ಭಜನೆ ಮಾಡುವಂಥ ನಿಜವ ಪಾಲಿಸಿ 1 ಹರಣ ಮಾಡಿ ನಿನ್ನ ಸ್ಮರಣೆಯ ಕೊಟ್ಟು 2 ದೀನನಾಗಿ ನಾ ನಿನ್ನ ಸನ್ನಿಧಾನಕೆ ಬಂದೆ ಜ್ಞಾನವಿತ್ತು ಕಾಯೋ ಈಗ ಪ್ರಾಣನಾಥ ವಿಠಲನಲ್ಲಿ 3
--------------
ಬಾಗೇಪಲ್ಲಿ ಶೇಷದಾಸರು
ಜಯಜಯ ಜಲದುರ್ಗೆ ತ್ರಿಜಗನ್ಮಯೆ ಸದ್ಗುಣವರ್ಗೆ ಪ. ದಯಾಸಾಗರೆ ದಾರಿದ್ರ್ಯದುಃಖ ಭವ- ಭಯನಾಶಿನಿ ಮಣಿಮಯಕೃತಭೂಷಿಣಿಅ.ಪ. ಗಜವದನನ ಮಾತೆ ಸುಜನ- ವ್ರಜಸತ್ಫಲದಾತೆ ಕುಜನಭಂಜನಿ ನಿರಂಜನಿ ಶೈಲಾ- ತ್ಮಜೆ ಮಹೋಜೆ ನೀರಜದಳಲೋಚನಿ1 ಇಂದ್ರಾದ್ಯಮರನುತೆ ಪೂರ್ಣಾ ನಂದೆ ನಂದಜಾತೆ ಚಂದ್ರಾಸ್ಯೇ ಯೋಗಿವೃಂದವಂದಿತೆ ಮೃ- ಗೇಂದ್ರವಾಹಿನಿ ಮದಾಂಧರಿಪು ಮಥನಿ2 ಅಂಗಜಶತರೂಪೆ ಸದಯಾ- ಪಾಂಗೆ ಸುಪ್ರತಾಪೆ ಗಂಗಾಧರವಾಮಾಂಗಶೋಭೆ ಸಾ- ರಂಗನೇತ್ರೆ ಶ್ರೀರಂಗಸಹೋದರಿ3 ದಾಸಜನರ ಪೋಷೆ ರವಿಸಂ- ವಾಸುದೇವನ ಸ್ಮರಣಾಸಕ್ತಿಯ ಕೊಡು ಭಾಸುರಜ್ಞಾನಪ್ರಕಾಶವಿಲಾಸಿನಿ4 ಸೌಖ್ಯವು ಭಕ್ತರ್ಗೆ ಸಲಿಸಲು ಸೌಖ್ಯವು ನೀ ಭರ್ಗೆ ಲಕ್ಕುಮಿನಾರಾಯಣನ ಭಗಿನಿ ನಿ- ರ್ದುಃಖಪ್ರದಕಟಿಲಾಖ್ಯಪುರೇಶ್ವರಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಜಯಜಯ ಜಲದುರ್ಗೆ ತ್ರಿಜಗನ್ಮಯೆ ಸದ್ಗುಣವರ್ಗೆ ಪ.ದಯಾಸಾಗರೆ ದಾರಿದ್ರ್ಯದುಃಖ ಭವ-ಭಯನಾಶಿನಿ ಮಣಿಮಯಕೃತಭೂಷಿಣಿ ಅ.ಪ.ಗಜವದನನ ಮಾತೆ ಸುಜನ-ವ್ರಜಸತ್ಫಲದಾತೆಕುಜನಭಂಜನಿ ನಿರಂಜನಿ ಶೈಲಾ-ತ್ಮಜೆ ಮಹೋಜೆ ನೀರಜದಳಲೋಚನಿ 1ಇಂದ್ರಾದ್ಯಮರನುತೆ ಪೂರ್ಣಾನಂದೆ ನಂದಜಾತೆಚಂದ್ರಾಸ್ಯೇ ಯೋಗಿವೃಂದವಂದಿತೆ ಮೃ-ಗೇಂದ್ರವಾಹಿನಿ ಮದಾಂಧರಿಪು ಮಥನಿ 2ಅಂಗಜಶತರೂಪೆ ಸದಯಾ-ಪಾಂಗೆ ಸುಪ್ರತಾಪೆಗಂಗಾಧರವಾಮಾಂಗಶೋಭೆ ಸಾ-ರಂಗನೇತ್ರೆ ಶ್ರೀರಂಗಸಹೋದರಿ 3ದಾಸಜನರ ಪೋಷೆ ರವಿಸಂ-ಕಾಶೆ ತ್ರಿಜಗದೀಶೆವಾಸುದೇವನ ಸ್ಮರಣಾಸಕ್ತಿಯ ಕೊಡುಭಾಸುರಜ್ಞಾನಪ್ರಕಾಶವಿಲಾಸಿನಿ 4ಸೌಖ್ಯವು ಭಕ್ತರ್ಗೆ ಸಲಿಸಲುಸೌಖ್ಯವು ನೀ ಭರ್ಗೆಲಕ್ಕುಮಿನಾರಾಯಣನ ಭಗಿನಿ ನಿ-ರ್ದುಃಖಪ್ರದಕಟಿಲಾಖ್ಯಪುರೇಶ್ವರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ