ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣರೆಳಕಂದಿ ನೀನ್ಯಾಕೆ ಕರುಣಿಸಲೊಲ್ಲಿ | ದುರಿತ ಭಯ ಪರಿಹರಿಸಿ ಸಲಹೆನ್ನ ತಂದೆ ಪ ಬಂದರ ವಿಭೀಷಣಗ ಅಭಯಕರವಿತ್ತೇ | ಬಂಧನಕ್ಕೋಳಗಾದ ಗಜರಾಜನನು ನೆಗಹಿ | ಛಂದದಭಿಮಾನುಳಿಹಿ ದ್ರೌಪದಿಯ ಕಾಯ್ದೆ 1 ಕಲುಷವಾರಿಸಿ ಮುನಿ ಸತಿಯ ನೀನುದ್ದರಿಸಿ | ಒಲಿದು ಧ್ರುವಗಾನಂದ ಪದವಿತ್ತೆ ಧರಿಲಿ | ಸಿಲುಕಿರಲು ಲಾಕ್ಷಗೃಹದಿ ಪಾಂಡವರನುಳುಹಿ | ಲಲನೆ ಗರ್ಭದಿ ಪರೀಕ್ಷಿತನ ಕಾಯ್ದೆ ಸ್ವಾಮಿ 2 ಅವರ ದಾಸಾನುದಾಸರ ಭಾಗ್ಯವೆಮಗಿಲ್ಲಾ | ತವನಾಮಧಾರಕೆನಿಸಿದ ಬಿರುದಿಗಿಂದು | ಕುವಲಯ ಶ್ಯಾಮ ಗುರು ಮಹಿಪತಿ ಸುತ ಪ್ರಭುವೆ | ಯಮನ ಬಾಧೆಯ ಬಿಡಸೋ ಬ್ಯಾಗೊದಿಗಿ ಬಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರಿದ್ದರೇನಯ್ಯ ನೀನಲ್ಲದೆನಗಿಲ್ಲಕಾರುಣ್ಯ ನಿಧಿ ಹರಿಯೆ ಕೈಯ ಬೆಡಬೇಡ ಪದುರುಳಕೌರವನಂದು ದ್ರುಪದಜೆಯ ಸೀರೆಯನುಕರದಿಂದ ಸೆಳೆಯುತಿರೆ ಪತಿಗಳೆಲ್ಲ ||ಗರಹೊಯ್ದರಂತಿದ್ದರಲ್ಲದೇ ನರಹರಿಯೆಕರುಣದಿಂ ನೀನಲ್ಲದಾರು ಕಾಯ್ದವರು 1ಅಂದು ನೆಗಳಿನ ಬಾಧೆಯಿಂದ ಗಜರಾಜನನುತಂದೆ ನೀ ವೈಕುಂಠದಿಂದ ಬಂದು ||ಇಂದಿರೇಶನೆ ಚಕ್ರದಿಂದ ನೆಗಳಿನ ಬಾಯಸಂಧಿಯನು ಸೀಳಿ ಪೊರೆದೆಯೆಲೊ ನರಹರಿಯೇ 2ಅಜಮಿಳನು ಕುಲಗೆಟ್ಟು ಕಾಲದೂತರು ಬರಲುನಿಜಸುತನ ಕರೆಯಲವನತಿ ವೇಗದಿ ||ತ್ರಿಜಗದೊಡೆಯನೆಪುರಂದರವಿಠಲ ಕರುಣದಲಿನಿಜದೂತರನು ಕಳುಹಿ ಕಾಯ್ದೆ ಗಡ ಹರಿಯೇ 3
--------------
ಪುರಂದರದಾಸರು
ದೇವದೇವೇಶ ಶ್ರೀ ಹರಿಯಲ್ಲದೆ ಪ.ಆವ ತಂದೆಯು ಸಲಹಿದನು ಪ್ರಹ್ಲಾದನಆವ ತಾಯಿ ಸಲಹಿದಳು ಧ್ರುವರಾಯನಆವ ಸುತ ಸಲಹಿದನು ಆ ಉಗ್ರಸೇನನಜೀವರಿಗೆ ಪೋಷಕನು ಹರಿಯಲ್ಲದೆ 1ಆವ ಬಂಧುವು ಸಲಹಿದನು ಗಜರಾಜನನುಆವಪತಿ ಕಾಯ್ದ ದ್ರೌಪದಿಯಮಾನ ||ಆವ ಸೋದರರು ಸಲುಹಿದರು ವಿಭೀಷಣನಜೀವರಿಗೆ ದಾತೃ ಶ್ರೀ ಹರಿಯಲ್ಲದೆ 2ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆಆವ ರಕ್ಷಕ ಪಕ್ಷಿಜಾತಿಗಳಿಗೆಆವ ಪೊಷಕನು ಗರ್ಭದಲ್ಲಿದ್ದ ಶಿಶುಗಳಿಗೆದೇವ ಶ್ರೀ ಪುರಂದರವಿಠಲನಲ್ಲದಲೆ 3
--------------
ಪುರಂದರದಾಸರು