ವೇದವಿದಿತ ಶೌರೀ ಮುರಾರೀ ಮಧು ಕೈಟಭವೈರೀ ಪ
ಭೋಗಿ ಶಯನ ಮಾಯ ಶ್ರೀಗುರು ಚಿನ್ಮಯ
ನಾಗಭೂಷಣಹೃದಯಾ ಸದಯಾ ಅ.ಪ
ನಡುಗಡಲಿನೊಳೆನ್ನ ಬಿಡಬೇಡ ಸಲಹೆನ್ನ
ಅಡಿಗೆರಗುವೆ ನಿನ್ನ ಶ್ರೀಶ ಮೋಹನ್ನಾ
ಕಡುಬಾಲ ಧ್ರುವ ತನ್ನದೃಢದಿ ನೆನೆಯೆ ನಿನ್ನ
ಪಡೆದನು ಪದವಿಯ ತಾ ವಿನೀತ 1
ಅಜಮಿಳವರದನೆ ಗಜರಾಜಗೊಲಿದನೆ
ಸುಜನ ಸಮ್ಮಾನಿತನೆ ಮಾಂಗಿರಿಯರಸನೆ
ಅಜಸುರ ವಿನುತನೆ ರಾಮದಾಸಾರ್ಚಿತನೆ
ಭಜಕ ವಾರಿಧಿಸೋಮ ವಿರಾಮಾ 2