ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ ಯನ್ನ ಧೊರೆಯೆ ನಿನ್ನಮರೆಯ ಹೊಕ್ಕೆನೊ ಸಿರಿಯರಮಣ ಪ ಸಕಲ ಲೋಕಗಳನುನೀನೇ ಸೃಜಿಸುವಾತನು ಸುಖದಿ ಪ್ರಾಣಿಗಳನು ನೀನೆ ಸಲಹುವಾತಾನು ಪ್ರಕಟವಾದ ಜಗವ ನೀನೆ-ಪ್ರಳಯಗೈವನು ನಿಖಿಲ ಜೀವಸಾಕ್ಷಿಯಾಗಿ ನಿತ್ಯನೀನೆನಿಯಮಿಸುವನು 1 ಸ್ಥೂಲಸೂಕ್ಷ್ಮರೂಪನೀನೆ ಮೂಲಪುರುಷನು ಲೀಲೆಯನ್ನು ಪ್ರಕಟಗೈವ ಕಾಲರುಪನು ನೀಲ ಲೋಹಿತಾದಿ ವಿಬುಧಜಾಲ ವಂದ್ಯನು ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2 ಪರಮ ಪುರುಷ ಪಂಕಜಾಕ್ಷ-ಪತಿತ ಪಾವನ ಶರಧಿಶಯನ ಸಕಲಲೋಕ ಸಂವಿಭಾವನ ವಿಶ್ವ ಮೋಹನ ದುರಿತ ಗಜಮೃಗಾಧಿರಾಜವರದ ವಿಠಲ ವಿಹಗಯಾನ 3
--------------
ಸರಗೂರು ವೆಂಕಟವರದಾರ್ಯರು