ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮೃತ ಗಜಾನನ ಯನ್ನಾಲಯದಿ ತಗದಾ ಆನನಾ ಪ ತನುಜನ ತನ್ವೀ ತನುವಿನ ಘನತರ ಬಾಧೆಯು ಅನುದಿನಾದವರಾ ತೊಳಲಿಸೆ ಅನಷ್ಟೇಕದಂತ ತನು ರಕ್ಷಿಸಿ ತನ್ನ ಜನರೆಂದೆಣಿಸೆಮ್ಮ ಮನದಿ ನೆಲಸೀದಾ 1 ಸಂತತಾನಂತ ಚೀಂತೆಯು ಅಂತರ ದುಗುಡವು ಎಂತು ಕಂಗೆಡಿಸಿ ನೋಳ್ಪವು ಸುತಗಜಾನನ ಸಂತ ಮಹಿಮ ಎನ್ನಂತ ತಿಳಿದು ತಾ ಚಿಂತೆಯ ತವಿಸಿದಾ 2 ಶಿರಿಯನ್ನಾ ಗುರುತಾವರಿಯಳು ಮೆರದಿ ಹರನು ಬಂದು ನಿರುತ ನಿನ್ನನಾ ಸ್ತುತಿಪೆನು ಪರಿಪರಿನುತಿಪುದ ನರಿತು ಗಜಮುಖನು ನರಸೀಂಹವಿಠ್ಠಲಗೆರಗಿ ಹರಸೀದಾ 3
--------------
ನರಸಿಂಹವಿಠಲರು
ಭಿಕ್ಷವ್ಯಾತಕ್ಕೊ ಫಾಲಾಕ್ಷ ನಿನಗೆ ಪ ಲಕ್ಷುಮೀಪತಿಯಂಥ ಸಖನಿದ್ದ ಬಳಿಕ ಅ.ಪ. ರಜತಾದ್ರಿ ಅರಮನೆಯು ಹೇಮನಿಗಿಯೇ ಧನುವುಗಜಗಮನ ಸುರನಿಕರ ಪರಿವಾರವು |ಭುಜಗೇಂದ್ರ ಭೂಷಣ ನಿಜರಾಣಿ ಅನ್ನಪೂರ್ಣೇಗಜಮುಖನು ಕುಮಾರ ಗಂಡುಮಕ್ಕಳು ಇರಲು 1 ಬೇಡುವುದ ಬಿಟ್ಟು ನಿನ್ನೆತ್ತು ಯಮನಿಗೆ ಕೊಟ್ಟುಮಾಡಬಾರದೆ ಮುಯ್ಯ ಅವನ ಕೋಣ |ಜೋಡು ಮಾಡಿಕೊಂಡು ಬಾತಿ ಮುಟ್ಟು ತ್ರಿಶೂಲಬೇಡಿದ್ದು ಬೆಳೆಯದೆ ಬರಿದೆ ಧಾವತಿಗೊಂಬಿ 2 ರೊಕ್ಕ ರೂಪಾಯಿಗಳು ಬೇಕೆಂಬಿಯ ಸಾಲತಕ್ಕೊಬಾರದೆ ಗೆಳೆಯ ಧನಪನಲ್ಲಿ |ಶುಕ್ರ ಒಕ್ಕಣ್ಣ ಮೋಹನ ವಿಠಲ ಇಕ್ಕಣ್ಣಮುಕ್ಕಣ್ಣ ನೀನಾಗಿ ಮುಂಜಿ ಮಂತ್ರವ ಪಿಡಿದಿ 3
--------------
ಮೋಹನದಾಸರು
ಶಿವ-ಪಾರ್ವತಿ ಅಗಜೆ ನಿನ್ನೊಗತನಕೆ ಜಗ ನಗುವುದೇ ನಗರಾಜ ಈ ಮನೆಯ ಹೊಗಿಸಿದನೆ ಅಕಟಕಟ ಪ ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡ ತೊಟ್ಟ ತೊಗಲುಡುಗೆ ತಲೆಯೋಡು ಕೈಯ ಭೂತೇಶ ಬಲು ಸಿಟ್ಟಿನವನಂಗಸಂಗ ಬಯಸಬಹುದೆ 1 ಆರುಮೊಗದವನೊಬ್ಬ ಆರ್ತಜನು ಮೊಲೆಪಾಲು ಕಾರಿ ಕಡುಮುನಿದು ಕಂಡರೆ ಸೇರರು ಊರಿಗುಪಕಾರಿ ಒಡಲಹರಕ ಗಜಮುಖನು ನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ 2 ಶಿವಶಕ್ತಿ ನಿನ್ನಂಥ ಸೌಭಾಗ್ಯವಂತೆಯಳ ಭುವನದೊಳಗಾವಲ್ಲಿ ಕಾಣೆನಿನ್ನು ಕವಿಜನಗಳೇನೆಂದು ಬಣ್ಣಿಸಿದರೊ ತಿಳಿಯೆ ಭವದೂರ ಶ್ರೀದವಿಠಲರಾಯ ಬಲ್ಲ 3
--------------
ಶ್ರೀದವಿಠಲರು