ನೆನೆವವಗೆ ಹರಿಯುಂಟು ನೆನೆಯದವಗೆ ಮದ ವೆಂಟು ಪ
ನೆನೆವ ಮನವಿರಲುಂಟು ಮುನಿಸುತನ ನಂಟು ಅ.ಪ
ನೆನೆವ ಧೃವನೂ ಗೆದ್ದ ಶುಕಮಹಾಮುನಿಗೆದ್ದ
ನೆನೆವ ಹನುಮನೂ ಗೆದ್ದ ಶರಭಂಗ ಮುನಿಗೆದ್ದ
ನೆನೆವ ಗಜಪತಿಗೆದ್ದ ವಾಲಿತನಯನೂ ಗೆದ್ದ
ಕನಕದಾಸನು ಗೆದ್ದ ಇದು ಸರ್ವಸಿದ್ಧ 1
ಧುರದಿ ರಾವಣ ಬಿದ್ದ ವರವಿಭೀಷಣ ಗೆದ್ದ
ದುರುಳ ಕಶಿಪೂ ಬಿದ್ದ ಪ್ರಹ್ಲಾದ ಶಿಶುಗೆದ್ದ
ಹಿರಿಯವಾಲಿಯುಬಿದ್ದ ಸುಗ್ರೀವ ಗೆದ್ದ 2
ಸುಲಭನೊ ಮಾಂಗಿರಿಯ ರಂಗ ಜಗದಾನಂದ
ಫಲವ ಕೊಟ್ಟಳಿಗೊಲಿದ ವಿಷಧರೆಯ ಸದೆದ
ಬಲು ಮೆರೆದ ಕೌರವನ ಕುಲವಿನಾಶವ ಗೈದ
ಚೆಲುವ ಮಾಂಗಿರಿರಂಗ ಶರಣರಿಗೆ ವರದ3