ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರ್ಥಸಾರಥಿ ಪಾಲಿಸೆನ್ನ ಶ್ರೀಹರಿಯೆ ಪ ಅಂದು ಗಜನು ತಾನು ಬಂದು ತಾ ಬಂಧು ಬಳಗವ ಕೂಡಿ ಸೊಂಡಿ- ಲಿಂದ ನೀರನು ಕಲಕಲಾಕ್ಷಣ ಒಂದು ಮಕರ್ಹಲ್ಲಿಂದ ಪಿಡಿಯೆ ಮು- ಕುಂದ ನೀನೆ ಗತಿಯೆಂದರಾಕ್ಷಣ ಬಂದು ಒದಗಿದ್ಯೊ ಸಿಂಧುಶಯನನೆ 1 ದುರುಳಾಸುರನು ತನ್ನ ಕರುಳ ತನ ಕರುಳನಿಟ್ಟುರಿಯಲ್ಲಿ ಗರಳ ಹಾಕಿ ಬಾಧಿಸಲು ಖಳನು ಕಾರಣ ಕಂಬದಲಿ ಬಂದೆಳೆದು ಅವನುರ ಕರುಳ ಮಾಲೆಯ ಕರಾಳವದನವ ತೆರೆದು ತನ್ನಯ ಕೊರಳಲ್ಲಿರಿಸಿದ ಕೋಮಲಾಂಗನೆ 2 ಪಿತನ ತೊಡೆಯಲಿದ್ದ ಸುತನ ಕಂಡು ಸುತನ ಸುರುಚಿಯು ತಾನಾಗ ಹಿತದಂತ್ವಾಕ್ಯಗಳನು ನುಡಿಯಲು ಅತಿಬ್ಯಾಗದಲಜಸುತನ ನುಡಿ ಕೇ ಳುತಲಿ ತಪವನು ಚರಿಸಲಾಕ್ಷಣ ಪತಿತಪಾವನ ಪರಮ ಕರುಣದಿ ಸುತ ಧ್ರುವಗೆ ಸುಖವಿಟ್ಟ ಶ್ರೀಹರಿ3 ಬಾಡಿ ಬಳುಕುವ ದ್ವಿಜನ ನೋಡಿ ತಾ ನೋಡಿ ತಂದವಲಕ್ಕಿ ಬೇಡಿ ಆಡಿ ಭಕ್ತನ ಕೂಡ ನಯನುಡಿ ಮಾಡಿ ಕರುಣವ ತನ್ನ ದಯ ಸೂ- ರ್ಯಾಡಿ ಸಖಗೀಡಿಲ್ಲದರ್ಥವ ನೀಡಿದ್ಯೊ ಬಹು ರೂಢಿಗಧಿಕನೆ 4 ಕಡುಚÉಲ್ವೆಕರೆಯಲುಟ್ಟುಡುಗೆ ಉಟ್ಟ ಉಡುಗೆ ಸೆಳೆಯಲು ಕೃಪ್ಣೆ(ಯಿ)ದ್ದೆಡೆಗೆ ನಡೆದಸುರ ಪಿಡಿದೆಳೆಯೆ ಸೀರೆಯ ಕಡೆಯ ಕಾಣದೆ ಖಳನು ಧರೆಯೊಳು ಯುಡುಗೆಗಕ್ಷಯ ನುಡಿದ ಕೃಷ್ಣನೆ 5 ಸಿಂಧುಶಯನಾರವಿಂದನಯನಾರ- ವಿಂದ ನಯನ ಅಸುರರಿಗತಿ ಭಯಂಕರನಾ- ಗೆಂದಿಗಾದರು ನಿನ್ನ ನಾಮಸುಧೆ ಯಿಂದ ಸುಖ ಸುರಿವಂತೆ ಮಾಡು ಮು- ಕುಂದ ಭೀಮೇಶಕೃಷ್ಣ ನಿನ್ನ ಪ- ದಾಂಬುಜವ ತೋರಾನಂದದಿಂದಲಿ 6
--------------
ಹರಪನಹಳ್ಳಿಭೀಮವ್ವ
ರಂಗ ಬಾರನ್ಹ್ಯಾಗೆ ಮಾಡಲಂಬುಜಾಕ್ಷಿಯೆ ರಂಗ ಬಾರನ್ಹ್ಯಾಗೆ ಮಾಡಲೆ ಪ ತಾಪ ಹೋಗದು ಶೀತ ಕಳೆವೊ ಸೂರ್ಯನಂತೆ ದ್ವಾರಾವತಿಯ ನಿಲಯನಮ್ಮ 1 ಅಕ್ಕ ರುಕ್ಮಿಣಿಯಲ್ಲಿ ನಕ್ಷತ್ರಮಧ್ಯಚಂದ್ರನಂತೆ ಪೊಕ್ಕಳಿಂದಲಜನ ಪಡೆದ ಚಕ್ರಧಾರಿ ಅಕ್ಕರ ಪಡುವೊ 2 ಕರೆದುತಾಹೋರೊಬ್ಬರಿಲ್ಲ ಕರುಣಾನಿಧಿಯೆಂಬುವುದು ಸಲ್ಲ ತರುಣಿ ಸತ್ಯಭಾಮೆಗಧಿಕ ತಿಳಿದು ತನ್ನ ರುಕ್ಮಿಣಿಯಲ್ಲಿರುವ 3 ಉಂಗುರದ ಹರಳಿನಂತೆ ಹೊಂದಿಕೊಂಡು ರುಕ್ಮಿಣಿಯನ್ನು ಇಂದಿರೇಶ ಬಿಟ್ಟಿನ್ನೊಬ್ಬರ ಮಂದಿರಕ್ಕೆ ಬಂದಿಹನ್ಹ್ಯಾಗೆ 4 ಮಂದಮತಿಯು ಆದನೇನೆ ತಂದೆಯಾದ ಸತ್ರಾಜಿತನು ತಂದುಕೊಟ್ಟನೆನ್ನ ಈ ಸುಂದರಳಾದ ಸೌ(ಸವ?) ತಿ ಕೆಳಗೆ 5 ಅಕ್ರೂರಜಮಿಳಂಬರೀಷ ಚಿಕ್ಕಧ್ರುವ ಪ್ರಹ್ಲಾದ ಗಜನು ಭಕ್ತಿಯಿಂದ ಕರೆಯೆ ಕಣ್ಣೆತ್ತಿ ನೋಡನವರನೀಕಾಲಕ್ಕೆ 6 ಗಾಯನದಿ ಗಂಧರ್ವ ಬಂದು ನಾರದ ಸುದಾಮ ಬಂದು ಬೇಡಿಕೊಂಡು ಕರೆಯಲವರ ನೋಡಿ ಮುಂದಕೆ ಬರುವನಲ್ಲ 7 ಸೋಳ ಸಾವಿರ ಸತಿಯರೆಲ್ಲ ಭಾಳ ಚಿತ್ರಭೂಷಿತರಾಗಿ ಏಳು ಕೃಷ್ಣೇಳೆಂದು ನಾಲ್ಕು ತೋಳು ಪಿಡಿದು ಕರೆವೋಣೇನೆ 8 ನೀಲ ಜಾಂಬವಂತಿ ಹಚ್ಚಿದ್ಹಗಲು ಬತ್ತಿಯಂತೆ ಸುತ್ತುಗಟ್ಟಿ ಕರೆವೋಣೇನೇ 9 ಪುತ್ಥಳ್ಯಂತ ರುಕ್ಮಿಣಿ ತೊಡೆಯಲಿಟ್ಟು ಕುಳಿತನಿಂದಿರೇಶ ಬಿಟ್ಟರಾಕೆ ನಮ್ಮನು ಕಣ್ಣೆತ್ತಿ ನೋಡೋದಷ್ಟೆ ಹೊರತು 10 ಗೊಲ್ಲ ಸತಿಯರೆಲ್ಲ ತಮ್ಮಲ್ಲಿ ದಧಿಬೆಣ್ಣೆಗಳ ತಂದು ಮೆಲ್ಲು ಕೃಷ್ಣಯೆಂದು ಕರೆಯೆ ಫುಲ್ಲನೇತ್ರ ತೆಗೆದುಕೊಂಡ11 ಕುಬ್ಜೆ ಕರದಿ ಗಂಧ ಹಚ್ಚೇನೆಂದು ಕರೆಯೆ ಬೆನ್ಹತ್ತಿ ಬರುವನೇನೆ ಕೃಷ್ಣ 12 ಸಾಸಿರ್ಹೆಡೆಯ ಮಂಚವಿಳಿದು ಸರಸವಾದ ವಚನದಿಂದ ಭೀಷ್ಮೆ ಭಿಡಿಯವೇನೆ ಭೀಮೇಶಕೃಷ್ಣನ ಕರೆವೋದಕ್ಕೆ13
--------------
ಹರಪನಹಳ್ಳಿಭೀಮವ್ವ
ವಂದಿಸುವೆನು ನಿನ್ನ ಅರವಿಂದಲೋಚನ- ದಿಂದ ನೋಡೊ ನೀ ಎನ್ನ ವಂದಿಸುವೆ ಅರವಿಂದಲೋಚನ- ದಿಂದ ನೋಡೊ ದಯಾಸಿಂಧು ಎನಿಸುವೆ ನಂದನಂದನನಾದ ಶ್ರೀ ಮುಕುಂದ ನೀ ಮುಚು- ಕುಂದ ವರದ ವಂದಿಸುವೆನು ನಿನ್ನ ಪ ಅಂಬರೀಷನು ಏನೋ ಮುಚುಕುಂದ ಮುನಿವರ- ನೆಂದು ರಕ್ಷಿಸುವೇನೊ ದ್ವಿಜ ತಂದವಲಕ್ಕಿ ತಿಂದ ಭಿಡೆಯಗಳೇನೊ ನೀನೆ ಸುರಧೇನು ಕಂದ ಧ್ರುವಪ್ರಹ್ಲಾದ ಕರೆಯಲು ಬಂದು ಭರದಿಂದವರ ಸಲಹಿದೆ ಮಂದಮತಿ ನಾ ಮ- ತ್ತೊಂದನರಿಯದೆ ವಂದಿಸುವೆ ನಿನ್ನ 1 ಗಜನು ಅಜಮಿಳನೇನೊ ಪಾದಾಂಬುಜ ಸ್ತುತಿಸ- ಲಜಸುತನು ನಾರದನೇನೊ ನಿಜ ಭಕುತಿಯಿಂದಿರಲ್ವಿದುರ ಉದ್ಧವನೇನೊ ನದಿಯಲ್ಲಿ ನಿನ್ನ ನಿಜಸ್ವರೂಪವ ತೋರಲಿಕ್ಕೆ ನಿನ್ನ ಬಾಂಧವಕ್ರೂರನೇ ನಾ ಕೇಳು ಘನ್ನ ಮಹಿಮ ಪ್ರಸನ್ನನಾಗಲಿಕ್ವಂದಿಸುವೆನು ನಿನ್ನ 2 ಸತ್ವರೊಳು ನಾನಲ್ಲ ಅಹಲ್ಯೆ ದ್ರೌಪದಿ ಭಕ್ತಿ ಮೊದಲೆನಗಿಲ್ಲ ಪಾಂಡವರ ದುರಿತಾಪತ್ತು ಕಳೆದ್ಯೊ ನೀಯೆಲ್ಲ ಕೇಳೆನ್ನ ಸೊಲ್ಲ ಭಕ್ತಾಧೀನನೆ ಭಯನಿವಾರಣ ಇಷ್ಟು ಭವಭಯ ಬಿಡಿಸಿ ಭೀಮೇಶಕೃಷ್ಣ ನಿನ್ನದಯ- ವಿಟ್ಟುಕರುಣಿಸೊ ವಂದಿಸುವೆನು ನಿನ್ನ 3
--------------
ಹರಪನಹಳ್ಳಿಭೀಮವ್ವ
ಲಿಂಗ ಬಂದ ನೋಡೊ ಶಂಕರ ಲಿಂಗ ಬಂದ ನೋಡೊ |ಅಂಗಜನುರುಹಿದ ಮಂಗಳ ಮೂರುತಿ |ತಿಂಗಳ ಸೂಡಿದ ಕಂಗಳ ಮೂರುಳ್ಳಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಸುರಗಂಗಾಧರನೂ ಪಾರ್ವತಿವರ ಪರಮೇಶ್ವರನೂ |ಪರಮಪುರುಷಪರಾತ್ಪರಪರತರ | ಸ್ಥಿರಚರವಣು ತೃಣ ಭರಿತ ಸದಾಶಿವ1ಗಜಚರ್ಮಾಂಬರನೂಪುರಹರಭುಜಗಭೂಷಹರನೂ | ಅಜಸುರ ವಂದಿತತ್ರಿಜಗವ್ಯಾಪಕ |ಸುಜನರಿಗಿತ್ತ ಸುನಿಜಪದ ಮಹಘನ2ಆರು ಚಕ್ರ ಮೀರಿ ಸಹಸ್ರಾರ ಮನೆಯನ್ನೇ ಸೇರಿ |ಸಾರಾಸಾರ ವಿಚಾರ ರಹಸ್ಯವ-ಪಾರಪರಾತ್ಪರಗುರುತರ ಶಂಕರ3
--------------
ಜಕ್ಕಪ್ಪಯ್ಯನವರು