ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಜಿಸುವೆ ಕೇಶವ ದೇವನ ಗಜನನು ಸಲಹಿದ ರಂಗನ ಪ ತರಳ ಧೃವನಿಗೆ ರಾಜ್ಯವನಿತ್ತ ಶರಣರ ಸಲಹುವ ರಂಗನ 1 ರಾವಣರಾಕ್ಷಸನಾಶ ಶ್ರೀ ಕೃಷ್ಣನ ದೇವಕಿನಂದನ ರಂಗನ 2 ಭವರೋಗವ ಪರಿಹರಿಸುವ ದೇವನ ಪವನಜವಂದಿತ ರಂಗನ 3 ಸುಜನರ ಪಾಲಿಸಿ ಕುಜನರ ತರಿಯುವ ಭಜಕರ ಪೊರೆಯುವ ರಂಗನ 4 ಪನ್ನಗಶಯನನ ಶ್ರೀ ಮಾಧವನ ಚನ್ನಿಗಕೇಶವ ರಂಗನ 5
--------------
ಕರ್ಕಿ ಕೇಶವದಾಸ
ವೃಂದಾವನದಲಿ ನಿಂದಿಹನ್ಯಾರೆ ಪೇಳಮ್ಮಯ್ಯ ಪ ಕುಂದು ರಹಿತ ಬಹು ಸುಂದರ ಹರಿಪದದ್ವಂದ್ವ ಭಜಕ ಯತಿ ಪುಂಗ ಕಾಣಮ್ಮ ಅ.ಪ. ಮಂಗಳ ಪಂಪಾ ಕ್ಷೇತ್ರ ಸನಿಯ ಮುನಿಪುಂಗರು ಯಾರೇ ಪೇಳಮ್ಮಯ್ಯ |ಅಂಗಜನನು ಬಲು ಹಿಂಗಳೆಧರಿ ಪದಭೃಂಗರೇನಿಪರ್ಯಾರೇ ಪೇಳಮ್ಮಯ್ಯ |ತುಂಗಭದ್ರ ಸುತರಂಗಿಣಿ ಮಧ್ಯಗಮಂಗಳಾಂಗ ವ್ಯಾಸೇಂದ್ರ ಕಾಣಮ್ಮ 1 ಮಾಯಾಮತ ವಿಧ್ವಂಸಕರೆನಿಸುವನ್ಯಾಯಾಮೃತ ರಚಕರ ನೋಡಮ್ಮಮ್ಮ |ಸಾಯಣಾದಿ ಕುಭಾಷ್ಯದಲಿಹ ಅನ್ಯಾಯವ ಜರಿದ ನೋಡಮ್ಮಮ್ಮ |ಕಾಯಜ ಪಿತನನ ಹೇಯನೆಂದು ಬಹುಗಾಯನ ಮಾಡ್ದ ಮಹಾತ್ಮ ಕಾಣಮ್ಮ 2 ಪದುಮನಾಭ ಕವೀಂದ್ರ ವಾಗೀಶರಮಧ್ಯದಲಿಹರ ನೀ ನೋಡಮ್ಮಯ್ಯ |ಸುಧೀಂದ್ರ ಶ್ರೀನಿವಾಸರು ರಾಮತೀರ್ಥರಮಧ್ಯದಲಿಹರ ನೀ ನೋಡಮ್ಮಯ್ಯ |ಯದುರಿಲಿ ಪ್ರಾಣ ಸುಪಾಶ್ರ್ವದಿ ರಘುವರ್ಯಗೋವಿಂದ ತೀರ್ಥರ ನೋಡಮ್ಮಮ್ಮ 3 ಆರು ಕೋಣೆಗಳ ಮೇಲಾಕಾರ್ವೊಲಯದಿ ಧೀರ ವಾನರರಾ ನೋಡಮ್ಮಯ್ಯಮೂರು ಕೋಟಿ ಜಪದಾಧಾರದಿ ಸಮೀರ ನಿಂದಿಹ ನೋಡಮ್ಮಯ್ಯ |ಧೀರ ನಿಲಿಸಿದಾಧಾರ ಭಕ್ತಿ ಯಂತ್ರೋದ್ಧಾರರ ನೀ ನೋಡಮ್ಮಮ್ಮ 4 ಬೋಧ ಗುರು ಗೋವಿಂದ ವಿಠಲನಪಾದ ಸೇವಕ ವ್ಯಾಸಾರ್ಯ ಕಾಣಮ್ಮ 5
--------------
ಗುರುಗೋವಿಂದವಿಠಲರು
ಸಾಕು ಸಾಕು ಬಿಡು ಬಡಿವಾರಾ ನಮ್ಮ ಶ್ರೀಕರ ದಾಸರ ಬಿಡಲಾರಾ ಪ. ಚಂಚಲಾಕ್ಷಿಯೊಳ್ ಚದುರತೆ ತೋರುತ ಮಂಚದ ಮೇಲ್ಕುಳ್ಳಿರಲಂದು ಮಿಂಚಿದ ಮೊರೆ ಕೇಳಿ ಮದಗಜನನು ಕಾಯ್ದ ಪಂಚ ಬಾಣ ಪಿತ ವಂಚಿಸನೆಂದಿಗು 1 ಶಂಭುಮುನಿಯು ಕೋಪಾಡಂಬರವನು ತೋರಿ ಅಂಬರೀಷಗೆ ಶಾಪವ ಕೊಡಲು ನಂಬಿದ ಭಕ್ತ ಕುಟುಂಬಿ ಸುದರ್ಶನ ನೆಂಬಾಯುಧದಿಂದ ಸಂಬಾಳಿಸಿದನು 2 ಎಲ್ಲ ವೇದಶಿರಗಳಲಿ ನೋಡೆ ಸಿರಿ- ನಲ್ಲ ವೆಂಕಟಗಿರಿವರ ಹರಿಗೆ ಎಲ್ಲವು ಸರಿಮಿಗಿಲಿಲ್ಲದೆ ತೋರುವ ಖುಲ್ಲ ದೈವಗಣವಿಲ್ಲೆ ಸೇರುವವು 3
--------------
ತುಪಾಕಿ ವೆಂಕಟರಮಣಾಚಾರ್ಯ