ಸ್ವಾಮಿ ನೀನೇ ತಂದೆ ನೀನೇ ಯೆನ್ನಯ ಬಂಧು
ಪ್ರೇಮದಿಂದಲಿ ಯೆನ್ನ ಸಲಹಯ್ಯ ಬಂದೇ ಪ
ಐದು ಹುಲಿಗಳು ಬಂದು ಗಾರುಮಾಡುತಲೆನ್ನ
ಕೈದಿನಲ್ಲಿಟ್ಟಿಹವು ಬಿಡಿಸಯ್ಯ ಹರಿಯೇ
ಕೈದಿನಲ್ಲಿಟ್ಟೆನ್ನ ಕೆಲಸಕ್ಕೆ ಎಳತಂದು
ಬÁಧೆಯ ಕೊಡುತಿಹವು ಬಿಡಿಸಯ್ಯ ಹರಿಯೇ 1
ಭವವೆಂಬ ಮೃಗರಾಜ ಬಗೆಯುತ್ತ ದೇಹದ
ಜವದಿಂದ ತಿನ್ನುವಾ ಬಿಡಿಸಯ್ಯ ಹರಿಯೇ
ಅವನಿಯೊಳು ಹುಟ್ಟು ಸಾವೆಂಬ ಗಜನಕ್ರಗಳು
ತಿವಿದೆನ್ನ ಹೆಳೆಯುದರು ಬಿಡಿಸಯ್ಯ ಹರಿಯೇ 2
ಆರು ವೈರಿಗಳೆÀನ್ನ ಕಾಯವನು ಪಿಡಿದೊಯ್ದು
ಯೆರಿಸೀ ಸುಡುತಿಹರು ಬಿಡಿಸಯ್ಯ ಹರಿಯೇ
ಮಾರಿ ವಶಮಾಡುವದು ಬಿಡಿಸಯ್ಯ ಹರಿಯೇ 3
ಅನ್ಯರನು ಕಾಣೆ ನಾದೇವ ನಿನ್ನುಳಿದೀಗ
ನೀನೆನ್ನ ಅಪರಾಧ ಕ್ಷಮಿಸೋ ಮರೆಹÉೂಕ್ಕೇ
ಗಮನ ಶ್ರೀ ಚನ್ನಕೇಶವನೆ
ಸನ್ನುತದಾಸನನು ಬಾಲನೆಂತೆಣಿಸೋ 4