ಕೃಷ್ಣ ಸ್ತುತಿ
ಮಾಂಗಿರಿಯೊಡೆಯ ಗೋಪಾಲನೇ ಮಧುರ ಪ
ಗೋಪಾಲನ ಮಾಂಗಿರಿಯೇ ಮಧುರ ಅ.ಪ
ಪರಿ ಗೋಪಾಲನ ಗಜಗಮನವು ಮಧುರ 1
ಗೋಪಾಲನ ಮುರಳೀರವ ಮಧುರ
ಗೋಪಾಲನ ರಸಗಾನವೆ ಮಧುರ 2
ಗೋಪಾಲನ ಸಸುನಗೆಯತಿ ಮಧುರ
ಗೋಪಾಲನ ಕಲಾನರ್ತನ ಮಧುರ 3
ಗೋಪಾಲನ ಝಣ ಝಣರವ ಮಧುರ
ಗೋಪಾಲನ ಕೋಲಾಟವು ಮಧುರ 4
ಗೋಪಾಲನ ನಡುಗೆಜ್ಜೆಯು ಮಧುರ
ಗೋಪಾಲನ ಕರದಭಯವು ಮಧುರ 5