ಭುಜಗ ಭೂಷಣ ಪಾಹಿ ಪ
ಗಜ ಅಜಿನಾಂಬರ ಅ.ಪ.
ಗಿರಿಜೆಯ ಮನೋಹರ | ಸುರಪತಿ ಗುರುವರಕರುಣದಿಂದಲಿ ತವ | ಚರಣ ಸ್ಮರಣೆ ಕೊಡು 1
ಪಂಚಸುವದನನೇ | ಸಂಚಿತಪ ಕೆಡಿಪನೇಪಂಚ ಬಾಣನ ಪಿತ | ಮಂಚ ಪದಾರ್ಹನೆ 2
ತ್ರಿಶೂಲ ಡಮರುಗಾ | ಭಸುಮಾದಿ ಭೂಷಿತಾದಶ ಶಿರ ಮದಹರ | ನಿಶಿಚರ ಗುರುವರ3
ಪಕ್ಷೀಂದ್ರ ವಂದ್ಯರಾ | ಅಕ್ಷಾರಿ ಹರಿವರಾಕುಕ್ಷ್ಯುದ್ಭವ ಹರ | ದಕ್ಷಾದ್ವರ ಹರ 4
ವಿಷಧಿಯೋಳುದಿಸಿದಾ | ವಿಷಗಣ ಭುಜಿಸಿದಾವಿಷಕಂಠನೆನಿಸಿದ | ನಿಶಿಚರ ವರಪ್ರದ 5
ಗಗನೇಶಾ ಜನಕಾ | ಮೃಗಾಂಕ ಶ್ರೀ ಶುಕಾನಗಪಗೆ ಪೋಷಕ | ಷಣ್ಮುಖ ಜನಕಾ 6
ತ್ರೈರೂಪಾ ತ್ರಿನಯನಾ | ಗುರು ಗೋವಿಂದ ವಿಠಲನಾನಿರುತದಿ ಸ್ಮರಣಾ | ಭರಣ ಶೋಭನ 7