ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೆಲ್ಲನೇಳಯ್ಯ ಮಣಿವೆ ಪ ನಲ್ಲುಲಿಗಳಿಂದ ಶುಕಪಿಕಗಳೆಚ್ಚರಿಸುತಿವೆ ಅ.ಪ ಅರುಣ ವರ್ಣದ ಗಗನಯೆಂಬ ಹರಿವಾಣವನು ಕರದಿ ಪಿಡಿದೆತ್ತೆ ನಿನಗಾರತಿಯ ಗೈಯಲು ತರಣಿ ನಿಂದಿರ್ಪ ತುಂಬುರು ನಾರದರು ಮುದದಿ ಪರಮಾತ್ಮ ಸುಪ್ರಭಾತಗಳ ಪೇಳುವರು 1 ಭೃತ್ಯ ದಿಕ್ಪಾಲಕರು ಅತ್ಯಧಿಕ ಭಕ್ತಿಯಿಂ ಕರವೆತ್ತಿ ಮುಗಿದು ನಿತ್ಯಕಾರುಣ್ಯ ಪರಿಪೂರ್ಣ ಸದ್ಭಕ್ತಗಣ ನುತ್ಯ ನೀನೇಳೆಂದು ನುತಿಸುತಿಹರು 2 ನಿನ್ನ ನಾಮವ ಭಜಿಸಿ ಪಾದಪೂಜೆಯ ಗೈದು ನಿನ್ನ ಕಾರುಣ್ಯ ದರ್ಶನಕೆ ಕಾದಿರುವಾ ಪನ್ನರೆಲ್ಲರ್ಗೆ ದರ್ಶನವ ನೀನೀಯಲು ಇನ್ನೇಕೆ ತಡ ಏಳು ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್