ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಮೂರು ಜನ್ಮನಾಕಾಶನಂದಾ ವಸುಧಾನಾಗ್ರಜಾ ನಿಜಾನ್ ಪದ್ಮಾವತೀ ಪದ್ಮಭವಾ ವನಕ್ರೀಡಾರತ್ಯಾವತಾತ್ ವಚನ ಸಂದರ್ಶನಾದದ್ದು ತಂದೆಯ ಕಥೆಸ್ಮøತಿಗೆ ತಂದು ಅದು ವಿಸ್ತಾರದಿಂದ ಪೇಳುವೆನು ಸುಧರ್ಮನೆಂದು ಇರವನು ಅವಗೆ ಮುಂದೆ ಇಬ್ಬರು ಸುತರು ಚಂದದಲಿ ಆಕಾಶನೆಂದು ತೊಂಡಮಾನಸೆನಿಸುವನು 1 ವ್ಯಾಕುಲದಿ ಹೀಗೆ ಇಲ್ಲೆಂದು ಶೋಕದಲಿ ಕಣ್ಣೀರು ಹಾಕಿ ಸ್ಮರಿಸಿದ ದೇವಲೋಕ ಗುರುವ ಯಾಕೆ ಸ್ಮರಿಸಿದೆ ಎನ್ನನೀಕಾಲದಲಿ ಏನುಬೇಕು ಬೇಡಲೋನೀನು ನಾ ಶೋಕವನು ನುಡಿದಾ2 ಪಾಪಿಷ್ಠ ಏನು ಇದ್ದೇನು ನಾನು ಮಾಡಿದ ಪೇಳೋ ಹೀನಬುದ್ಧಿ ಕೊಲಿಸಿದೆನೇನು ಏನು ಕಾರಣ ಸಂತಾನ ಕಣ್ಣಿಲಿ ಕಾಣೆ ನಾನು ಅಯ್ಯಯ್ಯೊ 3 ಮಕ್ಕಳಾಡಿದರೆ ಬಹಳಕ್ಕರತೆ ಜೀವಕ್ಕೆ ಮಕ್ಕಳಿಲ್ಲದೆ ಮತ್ತೆ ಮಿಕ್ಕರಸ ಮಕ್ಕಳಿÀಂದಲೆ ಹಬ್ಬ ಹುಣ್ಣಿಮೆಯು ಉಲ್ಲಾಸ ಮಕ್ಕಳಿಂದಲೆ ಮುಂಜಿ ಮದುವೆಯ ಧರೆಯೊಳಗಿಲ್ಲ ಮಕ್ಕಳಿಂದಲೆ ಇಹವು ಮಕ್ಕಳಿಂದಲೆ ಪರವು ಮಕ್ಕಳಿಲ್ಲೆನ್ನ ಭಾಗ್ಯಕ್ಕೆ ಅಯ್ಯಯ್ಯ 4 ನೋಡಿಲ್ಲ ಮಕ್ಕಳಾಡಿದ ಮಾತು ನಕ್ಕು ಕೇಳಿಲ್ಲ ನಾ ಮಕ್ಕಳಿಂದಲೆ ಕೂಡಿ ಅಕ್ಕರದಿ ಉಣಲಿಲ್ಲ ಮಕ್ಕಳನು ಎತ್ತಿ ಮುದ್ದಿಕ್ಕಿದವನಲ್ಲ ಮಕ್ಕಳಿಲ್ಲದ ಮನುಜ ಲೆಕ್ಕದಾವದರೊಳಗೆ ಬೆಕ್ಕು ಮೊದಲಾದಂಥ ಮಿಕ್ಕ ಪ್ರಾಣಿಗಳೆಲ್ಲ ಮಕ್ಕಳಾಡಿದ ಬಹಳ ಚಕ್ಕಂದವನು ನೋಡಿ ಸೌಖ್ಯ ಪಡುತಿಹದಯ್ಯ ಧಿಕ್ಕರಿಸು ಎನ ಜನ್ಮ ಅದಕ್ಕಿಂತ ವ್ಯರ್ಥ 5 ಮುನ್ನ ನಮ್ಮೊಳಗಾರು ಉಣ್ಣದಲೆ ಈ ಬದುಕು ಮಣ್ಣು ಪಾಲಾಗುವದು ಘನ್ನ ಈ ಚಿಂತಿಯಲಿ ಬಣ್ಣಗೆಟ್ಟೆನು ಕುದ್ದು ಸುಣ್ಣಾದೆನಯ್ಯ ಉಭಯಕುಲ ತಾರಿಸುವಂಥ ನಾನು ಅಣ್ಣತಮ್ಮರ ಒಳಗೆ ಪುಣ್ಯ ಇಲ್ಲೊಬ್ಬನಲಿ ಪುಣ್ಯಗುರುವೆ 6 ರಾಗ:ಶಂಕರಾಭರಣ ಆದಿತಾಳ ಇಂಥ ಮಾತಿಗೆ ಜೀಯ ಹೀಗಂತ ನುಡಿದನು ಚಿಂತೆ ಮಾಡಬೇಡ ಭೂಕಾಂತ ಎಂದನು 1 ಪುತ್ರ ಕಾಮೇಷ್ಟಿಮಾಡು ಭಕ್ತಿಯಿಂದಲಿ ಪುತ್ರನಾಗುವನು ನಿಮಗೆ ಸತ್ಯ ನೀ ತಿಳಿ 2 ಗುರುವಿನ ಮಾತುಕೇಳಿ ಪರಮ ಹರುಷದಿಂದಲಿ ಅರಸ ಬ್ರಾಹ್ಮಣರನೆಲ್ಲ ಕರೆಸಿದಾಗಲೇ 3 ಮುಂದೆ ಯಜ್ಞ ಮಾಡಬೇಕು ಎಂದÀು ತ್ವರದಲಿ ಒಂದು ಭೂಮಿ ಶೋಧಿಸಿದನು ಚಂದದಲಿ 4 ಚಲುವ ನೇಗಿಲ ಜಗ್ಗಿ ಎಳೆವ ಕಾಲಕೆ ಹೊಳೆವ ಪದ್ಮ ಬಂತು ಅಲ್ಲಿ ಸುಳಿದು ಮೇಲಕೆ 5 ಇರುವಳೊಬ್ಬಳಲ್ಲಿ ಮತ್ತೆ ಪರಮಸುಂದರಿ ಅರಸನೋಡಿ ಬೆರಗಿನಿಂತ ಸ್ಮರಿಸಿ ಪರಿಪರಿ 6 ಕಾಣಿಸಿದಲೆ ಗಗನದಲಿ ವಾಣಿಯಾಯಿತು ಕಾಣದಿದ್ದರೂ ಈಗ ಸಕಲಪ್ರಾಣಿ ಕೇಳಿತೊ 7 ಇನ್ನು ಚಿಂತೆ ಮಾಡಬೇಡ ಧನ್ಯ ಅರಸ ನೀ ನಿನ್ನ ಮಗಳು ಎಂದು ಚೆನ್ನಾಗಿ ತಿಳಿಯೋ ನೀ8 ಕ್ಲೇಶ ಹಿಂದೆ ಬಿಡುವಿಯೊ ಮುಂದೆ ಮುಂದಕಿನ್ನು ಆನಂದ ಬಡವಿಯೊ9 ಗಗನ ವಾಣಿಯನ್ನು ಕೇಳಿ ಅರಸ ಬಗೆಯಲಿ ಮಗಳ ನೆತ್ತಿಕೊಂಡನಾಗ ಮುಗಳು ನಗೆಯಲಿ 10 ತಂದೆ ಮಗಳ ಜನ್ಮ ಪದ್ಮದಿಂದ ತಿಳಿದನು ಮುಂದೆ ಪದ್ಮಾವತಿಯೆಂದು ಕರೆದನು11 ಮಗಳಕಾಲಗುಣದಿ ಮುಂದೆ ಮಗನು ಆದನು ಅವನ ಕರೆದ ವಸುಧಾನನೆಂದು ಗಗನರಾಜನು 12 ತಕ್ಕವಾಗಿ ಅರಸಗ್ಹೀಗೆ ಮಕ್ಕಳಾದರು ಸೌಖ್ಯದಿಂದ ಮುಂದೆ ದಿನದಿನಕ್ಕೆ ಬೆಳೆದರು13 ಬಂತು ಯೌವನವು ಭೂಕಾಂತ ಪುತ್ರಿಗೆ ಬಂತು ಆಗ ಮತ್ತೆ ಬಹಳ ಚಿಂತೆ ಅರಸಗೆ 14 ಇಂಥ ಮಗಳಿಗಿನ್ನು ತಕ್ಕಂಥ ಪುರುಷನು ಪ್ರಾಂತದೊಳಗೆ ಇಲ್ಲದಿವ್ಯ ಕಾಂತಿ ಮಂತನು 15 ಎಂತು ನೋಡಲಿನ್ನು ಹುಡುಕಿ ಶ್ರಾಂತನಾದೆನು ಚಿಂತೆಯೊಳಗೆ ಬಿದ್ದು ಮುಂದೆ ಪ್ರಾಂತಗಾಣೇನು 16 ಅಂತರಂಗದೊಳಗೆ ಹೀಗಂತ ಅನುದಿನ ಚಿಂತಿಸಿದನು ಮರೆತು ಅನಂತಾದ್ರೀಶನ17 ವಚನ ಚಂದಾದ ಕುಸುಮಗಳ ಕೂಡಿ ಮುಂದೆ ಇಂದು ಮುಖಿಯು ನೋಡುತಲೆ ಮುಂದೆ ತೆಗೆದು ತ್ವರದಿಂದ ಆಭರಣಗಳ ಮುಂದೆ ತರಿಸಿದಳು1 ಕೆತ್ತಿಸಿದ ರಾಗುಟಿಯ ಒತ್ತಿ ಮೊದಲ್ಹಾಕಿ ಹತ್ತೊತ್ತಿದಳು ಸಾಲ್ಹಿಡಿದು ಇತ್ತಿತ್ತು ಮತ್ತೆ ತುದಿಗೆ ಅತ್ತಿತ್ತ ಮತ್ತ ಮೇಲರಿಸಿನವ ಚಿತ್ತಗೊಟ್ಟಚ್ಚಿದಳು ಚಿತ್ತಾರ ಬರೆದಂತೆ ಮತ್ತ ಗಜಗಮನೆ 2 ಥಳಥಳನೆ ಜಾತಿಯಿಂದ್ಹೊಳೆವ ಮುತ್ತಿನ ಭವ್ಯ ಎಳೆಯ ಇಮ್ಮಡಿ ಮಾಡಿ ನಳಿನಾಕ್ಷಿ ಬೈತಲಗೆ ಅಳತೆಯಿಂದ್ಹಾಕಿದಳು ತಳಪಿನಲಿ ಎಡಬಲಕೆ ಎಳೆದು ಕಟ್ಟಿದಳ್ಹಿಂದೆ ಹೆರಳಿಗ್ಹಾಕಿ ತೊಳೆದ ಮುತ್ತಿನ ಬುಗಡಿ ಪೊಳೆವ ಮೀನ್ಬಾವಲಿಯು ಝಳಿ ಝಳಿತವಾಗಿರುವ ಗಿಳಿಗಂಟಿ ಚಳತುಂಬುಗಳ ನಿಟ್ಟು ಕರ್ಣದಲಿ ಉಳಿದ ದ್ರಾಕ್ಷಾಲತೆಯ ಎಳೆದು ಬಿಗಿದಳು ಮೇಲೆ ಸುಳಿಗುರಳಿನಲ್ಲಿ 3 ಇದ್ದ ಮುತ್ತುಗಳ್ಹಚ್ಚಿ ತಿದ್ದಿ ಮಾಡಿದ ನತ್ತು ಉದ್ರೇಕದಿಂದಿಡಲು ಮುದ್ದು ಸುರಿವುತ ಮುಂಚೆ ಇದ್ದ ಮುಖ ಮತ್ತೆ ಎದ್ದು ಕಾಣಿಸಿತು ಪ್ರದ್ಯುಮ್ನ ಚಾಪದಂತೆರಡÀು ಹುಬ್ಬುಗಳ ಮಧ್ಯೆ ನೊಸಲಿನ ಮೇಲೆ ಶುದ್ಧ ಕಸ್ತೂರಿಯನ್ನು ತಿದ್ದಿ ತಿಲಕವನಿಟ್ಟು ತಿದ್ದಿದಳು ಕಾಡಿಗೆಯ ಪದ್ಮಲೋಚನಗಳಿಗೆ ಪದ್ಮಜಾತೆ 4 ಚಂದ್ರಗಾವಿಯನ್ನುಟ್ಟು ಚಂದಾದ ಕುಪ್ಪಸವ ಮುಂದೆ ಬಿಗಿ ಬಿಗಿತೊಟ್ಟು ಮುಂದಲೆಗೆ ಶೋಭಿಸುವ ಚಂದ್ರಸೂರ್ಯರನಿಟ್ಟು ಚೆಂದಾಗಿ ಬೈತಲೆಗೆ ಚಂದಿರವ ಸುರಿದಳು ಚಂದ್ರಮುಖಿಯು ಪರಿ ಗೀರು ಗಂಧವನು ಕೈಗ್ಹಚ್ಚಿ ಮುಂದೆ ಕೊರಳಿಗೆ ಒರಿಸಿ ಚಂದ್ರಸರ ಮುಂದೆ ಹಾಕಿದಳು 5 ಮೇಲಿಟ್ಟು ಚಿಂತಾಕವನು ಕಟ್ಟಿ ತಾಯತ ಬಟ್ಟಕುಚಗಳ ಏಕಾವಳಿಯ ಇಟ್ಟು ಪುತ್ಥಳಿ ಸರವು ಅಷ್ಟು ಸರಗಳನೆಲ್ಲ ಮೆಟ್ಟಿ ಮೇಲ್ಮೆರೆವಂಥ ಶ್ರೇಷ್ಠ ಸರಿಗಿಯತರಿಸಿ ಇಟ್ಟಳಾಕೆ6 ಟೊಂಕದಲಿ ಒಡ್ಯಾಣ ಮುಂದಲಂಕರಿಸಿದಳು ಪೊಂಕದಿಂದಿಟ್ಟು ಅಕಳಂಕ ಕೊಂಕವನು ಮಾಡುತಲೆÉ ಕಿಂಕಿಣಿಪೈಜಣ ಇಟ್ಟಳಾಕೆ7 ಪಿಲ್ಲೆ ಮೇಲಾದ ಮುಸುಕಿಕ್ಕಿ ಬಹು ಬಾಲೆಯರು ಕೊಟ್ಟ ಕೂಡಿ ಭಾಳ ಹರುಷದಿ ಹೊರಟಳಾಕಾಲದಲ್ಲಿ. 8 ವಚನ ಪರಿ ಗಜಗಮನದಿಂದಾ ವನ ಮದನ ಸತಿಯಂತಿಪ್ಪ ತರುಣಿರೂಪವ ತಾಳಿ ವನಮಧ್ಯದಲ್ಲಿ ತಾಂ ಬೆಸಗೊಂಡಳು ಯಾರಲೆ ಬಾಲೆ ನೀ ಬಾಲಚಂದ್ರ ಲಲಾಟೆ ಕಾಳಾಹಿ ವೇಣೀ ನೀ ಜಾತೆಯರ ಕೂಡಿ ಬಳಗವು ಕಾಂತನ್ಯಾರು ಪೇಳೆಂದು 1 ಧ್ವನಿ ಕೇಳೆ ಕುಸುಮಕ್ಕೆ ನಾ ಬಂದೆ ತಿಳಿಯೆ ಮಾತಿನರಗಿಳಿಯೆ 1 ಅಸಮ ತೋಂಡಮಾನನೆಂಬುವನು ನಮ್ಮ ಕಕ್ಕನು 2 ನಾ ಖೂನವನು ಪೇಳಿದೆ ಸಾರಿ ಪೇಳಿದೆ &ಟಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಈ ಪರಿಯ ಸೊಬಗಾವ ದೇವರಲಿ ನಾ ಕಾಣೆಗೋಪಿದೇವಿಯ ತನಯ ಗೋಪಾಲ ಬಾಲಗಲ್ಲದೆ ಪ ದೊರೆಯ ತನದಲಿ ನೋಡೆ ಧರಣಿ ಜಾತೆಯ ರಮಣಸಿರಿಯ ತನದಲಿ ನೋಡೆ ಶ್ರೀಕಾಂತನುಹಿರಿಯ ತನದಲಿ ನೋಡೆ ಸರಸಿಜೋದ್ಭವನ ಪಿತನುಗುರುವು ತನದಲಿ ನೋಡೆ ಆದಿಗುರುವು 1 ಪಾವನತ್ವದಿ ನೋಡೆ ದೇವಿ ಗಂಗಾಜನಕದೇವತ್ವದಲಿ ನೋಡೆ ದಿವಿಜರೊಡೆಯಲಾವಣ್ಯದಲಿ ನೋಡೆ ಲೋಕ ಮೋಹನ ಪಿತನುಜವ ಧೈರ್ಯದಲಿ ನೋಡೆ ಅಸುರಾಂತಕ2 ಗಗನದಲಿ ಸಂಚರಿಪ ವೈನತೇಯ ವಾಹನಜಗವನು ಪೊತ್ತಿರ್ಪ ಶೇಷ ಶಯನಕಾಗಿನೆಲೆಯಾದಿಕೇಶವರಾಯಗಲ್ಲದೆಮಿಗಿಲು ದೈವಗಳಿಗೀ ಭಾಗ್ಯಮುಂಟೆ 3
--------------
ಕನಕದಾಸ
ಪುರುಷ ಪ್ರಕೃತಿಯಲ್ಲಿಹನು ಎಂತೆನೆಇರುವನೀ ತೆರದಿ ಉಭಯದಲಿ ಪುರುಷ ಪ ತಿಲದೊಳಗೆ ತೈಲ ಕಾಷ್ಟದೊಳಗೆ ಅಗ್ನಿಫಲದಲಿ ರುಚಿಯು ಇದ್ದಂತೆ ಪುರುಷ1 ಸ್ತನದೊಳಗೆ ಕ್ಷೀರ ಕ್ಷೀರದೊಳಗೆ ಘೃತಘನ ಭೇರಿಯಲಿ ನಾದ ಇದ್ದಂತೆ ಪುರುಷ2 ಮಣಿಗಣದಲಿಸೂತ್ರ ಮಾಲಿಕೆಯಲಿ ತಂತುಘನವಾದ ಘಟದಲ್ಲಿ ಬಯಲಂತೆ ಪುರುಷ 3 ಘನದಲ್ಲಿ ಉದಕ ಗಗನದಲಿ ಮಿಂಚುಅನಿತು ಔಷಧಿಯಲ್ಲಿ ರಸದಂತೆ ಪುರುಷ4 ತೈಲಬಿಂದುವು ಉದಕದಲ್ಲಿ ವ್ಯಾಪಿಸಿದಂತೆಲೋಲ ಚಿದಾನಂದ ತಾನಿಹ ಪುರುಷ 5
--------------
ಚಿದಾನಂದ ಅವಧೂತರು
ಮಾನಿಸರಿಗೊಶವಲ್ಲ ಪೊಗಳಿ ಪೇಳುವುದು ಪ ಮೇಧಾದಿ ಮುನಿ ತನ್ನ ತಪೋಸಿದ್ಧಿಗೆ ಸರ್ವ | ಮೇದಿನಿ ತಿರುಗಿ ಬರುತಲಿ ಇತ್ತಲು | ಸಾಧನಕೆ ಸೌಮ್ಯವಾದ ಭೂಮಿಯನು ನೋಡಿ ಇವ | ಮಣಿ ಮುಕ್ತಿ ತೀರದಲಿ1 ನೆಸಗಿದ ತಪಕೆ ಮೆಚ್ಚಿ ಹರಿ ಒಲಿದ ತೀವ್ರದಲಿ | ಬಿಸಿಜದಳ ಲೋಚನೆ ಲಕುಮಿಯಿಲ್ಲೀ || ಎಸೆವ ಮಂಜರಿ ವೃಕ್ಷದಲಿ ವಾಸವಾಗಿ | ವಸುಧಿಯೊಳು ವಾಸವಾಗಿ ಅಗ್ರದಲಿ ಮೆರೆದನು 2 ಪರಮೇಷ್ಠಿ ಬಂದು ಈ ಕ್ಷೇತ್ರದಲಿ ನಿಂದು ಚ ಪರಮ ಗತಿ ಕೊಡು ಎಂದು ಸ್ತುತಿಸಿದನು ಹರಿಯ3 ಇಲ್ಲಿಗೆ ಬಂದು ಸತ್ಕರ್ಮವನು ಮಾಡಿದಡೆ | ಎಲ್ಲ ಕ್ಷೇತ್ರದಲಿ ಮಾಡಿದ ಫಲಕಿಂತ | ಎಳ್ಳಿನಿತು ಮಿಗಿಲೆನಿಸಿ ಪುಣ್ಯ ತಂ | ದುಣಿಸುವುದು | ಎಲ್ಲೆಲ್ಲಿ ಇದ್ದರು ಸ್ಮರಣೆ ಮಾಡಿರೊ ಜನರು 4 ಸುಗಂಧ ಪರ್ವತವಾಸ ಪುರುಷೋತ್ತಮ | ನಿಗಮಾದಿಗಳಿಗೆ ಅತಿದೂರತರನೋ | ಸುಗುಣನಿಧಿ ವಿಜಯವಿಠ್ಠಲರೇಯ ಸರ್ವದ | ಗಗನದಲಿ ಪೊಳೆವನು ಬ್ರಹ್ಮಾದಿಗಳ ಸಹಿತಾ 5
--------------
ವಿಜಯದಾಸ
ಈ ಪರಿಯ ಸೊಬಗಾವ ದೇವರಲಿ ನಾ ಕಾಣೆಪಾವನತ್ವದಿ ನೋಡೆ ಅಮರಗಂಗಾಜನಕಗಗನದಲಿ ಸಂಚರಿಪ ಗರುಡದೇವನೆತುರಗ
--------------
ಪುರಂದರದಾಸರು