ಕುಣಿದಾಡೊ ರಂಗ ನಲಿದಾಡೊ ಪ.
ಕುಣಿದಾಡೊ ಕುಂದಣದ ಸರಳೆನಲಿದಾಡೊ ಮಾಣಿಕದ ಹರಳೆ ಅ.ಪ.
ಪತಿಶಾಪದಿ ಶಿಲೆಯಾದ ಗೌತಮಸತಿಯ ಮೆಟ್ಟಿ ಪೆಣ್ಣಮಾಡಿಅತಿದಿವ್ಯ ಶ್ರೀಚರಣಾರವಿಂದಗತಿಯಿಂದಲಿ ಧಿಂಧಿಮಿಕೆನ್ನುತ 1
ಗಕ್ಕಸದಿಂ ಶಕಟಾಸುರನಸೊಕ್ಕ ಮುರಿದು ಬಂಡಿಯನೊದೆದುಚೊಕ್ಕ ಶ್ರೀಚರಣಾರವಿಂದಧಿಕ್ಕಿಟ ಧಿಮಿಕಿಟ ಝಂಕಿಟವೆನ್ನುತ 2
ಬಲಿಯ ಮೆಟ್ಟಿ ಕಾಳಿಂಗನ ಹೆಡೆಯತುಳಿದು ನಾಟ್ಯವನಾಡಿಚೆಲುವ ಶ್ರೀಹಯವದನ ನಿಮ್ಮಘಲುಘಲು ಗೆಜ್ಜೆ ಘಿಲುಘಿಲುಕೆನ್ನುತ 3