ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಪ ಸಿಂಧು ಸಂಭೂತೆ | ಪೂರ್ಣ ಚಂದಿರ ಮುಖಿ ಸುಖದಾತೆ ಅ.ಪ ಇಂದೀವರಾಕ್ಷಿಯೆ | ಪೊಂದಿ ತ್ವತ್ವಾದಕೆ ವಂದಿಪೆ ಮನ್ಮನ ಮಂದಿರದೊಳು ಬಾರೆ || ಕೃತಿ ಶಾಂತಿ ಜಯಮಾಯೆ ಸೀತೆ ದೇವಿ ಪತಿತಪಾವನೆ ಕ್ಷಿತಿಜಾತೆ | ವಿಧಿ ಶಿತ ಕಂಧರಾದಿ ನಮಿತೆ | ಮಹ | ಪತಿವ್ರತೆ ಪರಮವಿಖ್ಯಾತೆ ಆಹಾ ಶೃತಿವಿನುತಳೆ ಸದಾ | ನುತಿಸಿ ಬೇಡಿ ಕೊಂಬೆ ಅತಿಹಿತದಲಿ ತವ ಪತಿಯ ಪಾದವ ತೋರೋ 1 ಹರಿಣಲೋಚನೆ | ಶ್ರೀರುಕ್ಮಿಣೀ | ಮದ ಕರಿ ಮಂದಗಮನೆ ಕಲ್ಯಾಣಿ ದ್ವಿಜ ಪರಿವಾರ ಸಂಸ್ತುತೆ ಜಾಣೆ | ಚಾರು ಚರಿತೆ ಚಂಚರೀಕ ಸುವೇಣಿ || ಆಹಾ || ಸಿರಿ ಸತ್ಯಭಾಮೆಯ | ಮರೆಯದೆ ಎನ್ನಯ ದುರಿತ ವಿಚ್ಛೇದಿಸಿ | ಹರಿಸ್ಮರಣೆ ನೀಡೆ 2 ಕಂಬು ಕಂಧರೆ ಕಾಮನ ತಾಯೆ ಅರ ಭವ ಚಂದನ ಗಂಧಿಯೆ | ನಂದ ನಂದನ ಶಾಮ ಸುಂದರವಿಠಲನ್ನ ಸಂದರುಶನವೀಯೆ 3
--------------
ಶಾಮಸುಂದರ ವಿಠಲ
ಕ್ಷೀರಸಾಗರ ಸಂಭವೆ ರಮೆ ಪಾಲಯಾಶು ಮಾಂ ದೇವಿ ಪ ಮಾರಜನಕ ಮೋಹನಾಂಗಿಯೆ ಸಾರಸಾಕ್ಷಿಯೆ ವರಲಕ್ಷ್ಮಿಯೆ ಅ.ಪ. ಪದ್ಮಗಂಧಿಯೆ ಪದ್ಮ ವದನೆಯೆ ಪದ್ಮನೇತ್ರೆಯೆ ಪದ್ಮಹಸ್ತಯೆ ಪದ್ಮನಾಭ ಸುಪದ್ಮಿನೀ ಭಾಮೆಯೆ 1 ಮಣಿ ಚಂದ್ರಮಂಡಲೆ ಮಧ್ಯಭಾಸುರೆ ಶ್ರೀ ಸಿಂಧುರಗಮನೆಯೆ 2 ಭೋಗಭಾಗ್ಯವನಿತ್ತು ನೀ ಪಾಲಿಸು ಶ್ರೀ ಧೇನುಪುರೀಶ್ವರಿ 3
--------------
ಬೇಟೆರಾಯ ದೀಕ್ಷಿತರು
ಜನಕರಾಜನ ಸುತೆ ಜಾನಕಿ ಜೋ ಜೋ ಇನಕುಲತಿಲಕನರ್ಧಾಂಗಿಯೆ ಜೋ ಜೋ ಪ ಕುಂದಣ ಕೆತ್ತಿದ ಚಂದದ ತೊಟ್ಟಿಲ ಮಂದಗಮನೆಯರು ತಂದಿರಿಸಿದರು ಸುಂದರಾಂಗಿ ವೈದೇಹಿಯನೆತ್ತುವ ಆ- ನಂದದಿ ಜೋಗುಳ ಪಾಡ್ವರು ಜೋ ಜೋ 1 ರತ್ನ ಮುತ್ತುಗಳ ಕಿರೀಟವು ಹೊಳೆಯಲು ಮುತ್ತಿನ ತೊಡುಗೆಯಲಿ ರಂಜಿಸುವ ಸುಂದರಿಯ ಉತ್ತಮ ಸತಿಯರು ತೊಟ್ಟಿಲ ಪಿಡಿಯುತ ಅರ್ಥಿಯ ಜೋಗುಳ ಪಾಡ್ವರು ಜೋ ಜೋ2 ಕೌಸಲ್ಯದೇವಿಯ ಕಂದನ ರಮಣಿಯೆ ಕೌಶಿಕಯಜ್ಞದ ಪಾಲನಅರಸಿಯೆ ಹಂಸವಾಹನನ ಪಿತನ ಸತಿಯೆ ಖಳ ಧ್ವಂಸ ಮಾಡಿದ ರಘುರಾಮನರಸಿಯೆ 3 ಅಂಬುಜನಯನೆ ಪೀತಾಂಬರ ಶೋಭಿತ ಕಂಬುಕಂಠಿ ಕೋಕಿಲವಾಣಿ ಜೋ ಜೋ ತುಂಬುಗುರುಳ ಮುಖ ಕಮಲೆಯೆ ಜೋ ಜೋ ನಂಬಿದವರ ಕಾಯ್ವ ಕರುಣಿಯೆ ಜೋ ಜೋ4 ಕಮಲನಯನೆ ಕಮಲಾಲಯೆ ಜೋ ಜೋ ಕಮಲಗಂಧಿಯೆ ಕಮಲೋದ್ಭವೆ ಜೋ ಜೋ ಸತಿ ಜೋ ಜೋ ಕಮಲೆ ಹೃತ್ಕಮಲದಿ ವಾಸಿಸÀು ಜೋ ಜೋ5
--------------
ನಿಡಗುರುಕಿ ಜೀವೂಬಾಯಿ
ಪರಮಶಿವಶಂಕರಿಯೆ ಪ ಕರುಣಿಸು ಮಂಗಳೆಯೆ ಅ.ಪ. ಪಂಕಜನಾಭಿಯೆ ಪಂಕಜಪಾಣಿಯೆ ಪಂಕಜಲೋಚನೆಯೆ ಪಂಕಜಗಂಧಿಯೆ ಪಂಕಜವದನೆಯೆ ಶಂಕರಸುಂದರಿಯೆ 1 ಗೌರಿಯೆ ಗಿರಿಜೆಯೆ ಕಾತ್ಯಾಯನಿಯೆ ಹೈಮವತೀಶ್ವರಿಯೆ ಪಾರ್ವತಿ ಶಿವೆ ಪರಮೇಶ್ವರಿ ಶಂಕರಿ ಕಾಳಿಯೆ ಶಾಂಭವಿಯೆ 2 ಮಾಧವ ಸೋದರಿಯೆ ಭೂಧರವಾಸೆಯೆ ಶ್ರೀ ಲಲಿತಾಂಬೆಯೆ ರಾಜರಾಜೇಶ್ವರಿಯೆ 3 ನಿತ್ಯ ಕಲ್ಯಾಣಿಯೆ ಭಕ್ತವತ್ಸಲೆ ವಿಜಯೆ ನಿತ್ಯ ಸುಮಂಗಳೆಯೆ 4 ದಾನವ ಭಂಜಿನಿ ಮೌನಿಸುರಂಜಿನಿ ಭಾನುಮಂಡಲ ರುಚಿರೆ ಮಾನಿನಿ ಪಾಲಯಮಾಂ 5
--------------
ಬೇಟೆರಾಯ ದೀಕ್ಷಿತರು
ವನಜಗಂಧಿಯೆ ನಿನ್ನ ಮನದಸಂದೆಗೆವನ್ನು ಸನುಮತದಿ ಪೇಳಿನ್ನು ಮುನಿಸಿದೇನು ಚಾಡಿಮಾತನು ಕೇಳಿ ರೂಢಿಯಿಂ ಖತಿತಾಳಿ ಕಾಡುತಿಹುದೇಂ ಚಾಳಿ ರೌದ್ರಕಾಳಿ ಸೂಚನೆಯ ಕೊಡದಿಂತು ವಾಚನದಿ ಬಿರುಸಾಂತು ರಾಚುತಿರ್ಪೆಯದೇನೆ ನಾಚದಿಂತು ಮಾನವತಿನೀನೆಂದು ನಾನು ನಂಬಿರಲಿಂದು ಏನು ಮಾಡಿದೆನೆಂದು ಜರಿದೆ ಬಂದು ಸಾಕು ಸಾಕೀಬಗೆಯ ಕಠಿಣವಾಕ್ಕು ಕೋಕಿಲಾರವೆ ನಿನ್ನೊಳಿರುವ ಸೊರ್ಕು ಸಾಕುಮಾಡಿಹುದೆನ್ನ ನೋಡು ಮುನ್ನ
--------------
ನಂಜನಗೂಡು ತಿರುಮಲಾಂಬಾ