ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶುಭ ವೀರಾಂಜನೇಯಾಯ ಜಯ ಮಂಗಳಂ ಪ ಮಣಿ ಪುಂಜ ರಂಜಿತಾಯ ಶುಭಾಂಗಯ ಮಂಜುಳಾಯ 1 ಲಕ್ಷ್ಮಣ ಪ್ರಾಣ ಸಂರಕ್ಷಣಾಯ ಪಕ್ಷೀಂದ್ರ ಗಂಧವಹ ಗತಿ ಲಕ್ಷಿತಾಯ 2 ಪಂಚಾನನಾದಿ ಮುಖ ಪಂಚಕಾಯ ಪಂಚತಾಪ ಹರಾಯ ಪÀಂಚಾಕ್ಷರಾಯ 3 ಕಂದರ್ಪ ನವವರವ್ಯಾಕರಣ ನವಪಂಡಿತಾಯ ನವಪಂಚಕೋಟಿ ಯೂಧಪ ಸೇವಿತಾಯ 4 ಮಹಾಕಾಂಡ ಬೃಂದಾರಕಾಯ ಗಂಧರ್ವವೇದೇಷು ಘನ ಪಂಡಿತಾಯ 5 ಸರ್ವಮಂತ್ರಾವಳೀ ಸನ್ನುತಾಯ ಸರ್ವಭೀತಿ ಹರಾಯ ಸರ್ವಾತ್ಮಕಾಯ 6 ಶತಕೋಟಿ ಭಯವರ್ಜಿತಾಯ ಬೇಟೆರಾಯಾಖ್ಯ ದೀಕ್ಷಿತ ರಕ್ಷರಾಯ 7 ಪರಯಂತ್ರ ವಿದ್ವಂಸಕಾಯ 8
--------------
ಬೇಟೆರಾಯ ದೀಕ್ಷಿತರು
ಕಳವು ಕಲಿಸಿದೆಯಮ್ಮಗೋಪಿಕಮಲನಾಭಗೆ |ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |ಗೀರುಗಂಧವಹಚ್ಚಿಹಾರವ ಹಾಕಿ ||ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |ವಾರಿಜನಾಭನ ಕಳುಹಿದೆ ವನಜನಯನನ 1ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ 2ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ 3ವಾರಿಜಾಕ್ಷ ಮಾಡಿದಂಥ ದೂರು ಹೇಳಿದರೆ ನಿಮಗೆ |ದೂರುಬಡಕರೆಂದುಗೋಪಿಬಯ್ವೆ ನಮ್ಮನು ||ಊರು ಮಾಡಿದ ಕೊಳಗ, ತಾಯಿ ಮಾಡಿದ ಹೊಟ್ಟೆ |ವಾರಿಜನಾಭನ ಕರೆದು ಬುದ್ಧಿಯ ಹೇಳೆ 4ಹೊಟ್ಟೆಬಾಕನಿವ ಬೆಟ್ಟದೊಡೆಯಗೆ ಪ್ರಿಯ |ಇಟ್ಟುಕೊಂಡೀರೇಳುಭುವನಉದರದಲ್ಲಿಯೆ ||ಎಷ್ಟು ಹೇಳಿದರೂ ಕೇಳ ಏನು ಮಾಡಲಮ್ಮ ನಾನು |ಕಟ್ಟು ಮಾಡಿಸಲುಬೇಕು ಪುರಂದರವಿಠಲಗೆ 5
--------------
ಪುರಂದರದಾಸರು
ನಮಿಸೊ ಗಂಧವಹಗೆ ಪ್ರತಿದಿನ ನಿನ್ನ |ಶ್ರಮವ ಕಳೆದು ಅಭೀಷ್ಟಿಯ ಕೊಡುವ ಮನುಜ ಪಹರಿಕರುಣಿಸದಿರೆಗುರುಕರುಣಿಸುವನು |ಗುರುಕರುಣಿಸದಿರೆಹರಿಜರೆವ ||ಧರೆಯೊಳು ವಾತಪ್ರಸಾದ ಸಂಪಾದಿಸಿ |ಶಿರಿವಲ್ಲಭಗೆ ಬೇಕಾದವರ ಕೇಳು ಮನುಜ 1ಹನುಮನೊಲಿದನೆಂದು ಒಲಿದ ಸುಗ್ರೀವಗೆ |ಮನಸಿಜಪಿತನು ತನ್ನಯಚರಣ|ಘನವಾಹ ಸುತ ಭಜಿಸಿದರಿನ್ನವಗೆ ಪ್ರಭಂ |ಜನನೊಲಿಯದಕೆ ಕೊಂದನು ಕೇಳೆಲೊ ಮನುಜ 2ದುರ್ಜನಾಂತಕಗೆ ಬೇಕಾದ ಕಾರಣದಿಂದ |ಅರ್ಜುನಾದಿಗಳು ಸುಖವ ಬಿಟ್ಟರು ||ಅಬ್ಜಾಪ್ತಸುತ ಅಸಮರ್ಥನೆ ರಣದೊಳು |ನಿರ್ಜಿತನಾಗಲು ತಿಳಕೊ ಇದು ಮನುಜ 3ಸುರರೆಲ್ಲ ಕೂಡಿ ನ್ಯಾಯವ ಮಾಡಿ ನೋಡಲು |ಸರಿಯಾಗಲಿಲ್ಲವು ಮಾರುತಗೆ ||ಗಳವುದ್ಭವಿಸಲುಮಥನಕಾಲದಿ ಆದಿತ್ಯರ |ಮೊರೆಕೇಳಿಪ್ರಾಶನ ಮಾಡಿದ ಮನುಜ 4ಶಮೆಯಲ್ಲಿ ದಮೆಯಲ್ಲಿ ಸರ್ವಗುಣದಲ್ಲಿ |ಪವಮಾನಗೆ ಸರಿಯುಂಟಾವನು ಜಗದಿ ||ಅಮಲ ಪ್ರಾಣೇಶ ವಿಠಲಗಲ್ಲದವನು |ಯಮ ಸದನಕೆ ಯೋಗ್ಯ ಯಮಗಲ್ಲೆಂಬ ಮನುಜ 5
--------------
ಪ್ರಾಣೇಶದಾಸರು
ಭಾರತೀರಮಣ ನಂಬಿದೆ ಪಾದವಾರಿಜಾಕರುಣಾ ವಾರಿಧೆ ಯನ್ನನು |ದೂರ ನೋಡದೆ ನಿನ್ನ ಸಾರೆಗರೆದುಭಯ ನಿವಾರಿಸಿ ಸಲಹೋ ಪನೀಲಲೋಹಿತನ ಪಿತನೇ ಗೋಪಾಲನ ಸುತಾ |ಕಾಳಕೂಟ ಪಾನಿ ವಿಶಾಲಾಂಬಕಾ ಮಾರರಿಂದ ||ವೇಳೆ ವೇಳೆಗಳಲ್ಲಿ ವೋಲಗವ ಕೈಕೊಂಬುವ |ಕಾಳೀವಲ್ಲಭಭೇಶಭಾಸ್ಕರರೋಲು ಸನ್ನಿಭ ||ಈ ಲೌಕಿಕ ನರರಾಲಯ ಕಾಯಿಸದೆ |ವಾಲಯ ಸುಮತಿಯ ಪಾಲಿಪುದೊಲಿದು 1ಜಾನಕೀಪತಿ ಸೇವೆ ಮಾಡಿದೈ ಕಾಣೆನೋಪ್ರತಿ|ಯಾ ನಿನಗಾರಾರಾ ಭುವನದೊಳಗೆ ಗಂಧವಹನೆ ||ಮುದ್ರಿಯ ಕೊಂಡು ಕ್ಷಣದೊಳಗೆ ಜಲಧಿಯನ್ನೆ ಹಾರಿದೆ |ಸೀತೆಗುಂಗುರವನ್ನೆ ತೋರಿದೆ ||ಆ ನಗರವನು ದಹನಗೈಸಿ ಬಹು |ದಾನವರನಳಿದು ದಶಾನನನೊದ್ದೆ 2ಪಾಪದೂರನೆ ವೃಕೋದರ ಶ್ರೀ ದ್ರೌಪದೀಶನೇ |ವಿಪಿನಚರಿಸಿ ಕುರುಪತಿಯ ತರಿದು ||ಕ್ಷಿತಿಪರನ್ನು ಬಿಡಿಸಿದೆಯೈ ಪಾಂಡವರ (ಪರಿ) ಪಾಲಕ |ಕೋಪನಾಶನ ಉದ್ಧರಿಸೆನ್ನ ಚಾಪಭಂಜನ ||ಶ್ರೀಪತಿ ದ್ವಯ ಪದ ಆಪಜ ಭಜಿಸುವ |ನೇ ಪರಮೇಷ್ಠಿಯರೂಪಗುಣಾಢ್ಯ 3ದೇಶಿಕೋತ್ತಮ ಮಾರುತಿ ಇಂದಿರೇಶನ ಪ್ರೇಮ |ಸಂಪಾದಿಸಿಕೊಂಡತಿಶಯ ಭಕುತಿಯಿಂದಲೀ ಸಮೀಚೀನವಾಗಿ ||ತ್ರಿಂಶತಿ ಸಪ್ತ ಸಂಖ್ಯಾ ದರುಶನ ಗ್ರಂಥ ವಿರಚಿಸಿ ದು |ರ್ಭಾಷ್ಯವ ಸಂತರಾ ಸಲಹುವರನಾಭಾಸ ಮಾಡಿದೆ ||ವ್ಯಾಸಭಜಕ ನಿನ್ನ ದಾಸನೆನಿಸಿಕೊಳ್ಳೋ4ಅಂಜನಾಸುತ ಪ್ರಾಣೇಶ ವಿಠಲನೆಂಜಲನೊಯ್ಯುತ |ಭುಂಜಿಸಿದಿಯಲೊನಿರಂಜನಕಪಿ ಪ್ರ- ||ಭಂಜನಕೊಡು ಕೃತಾಂಜಲಿಯಿಂ ಬೇಡುವೆ |ಕಂಜನಾಭನ ಸ್ಮರಣೆ ದಿವಾ ಸಂಜೆಯಲಿಘನ||ಪುಂಜ ಸುಗುಣಮಣಿ ಮಂಜರಿ ಅರ್ಥ ಪ- |ರಂಜಳ ತಿಳಿಸೋ ಧನಂಜಯ ರಕ್ಷ 5
--------------
ಪ್ರಾಣೇಶದಾಸರು