ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೂಜಿಸುವೆನು ದೇವಿಯ ಶ್ರೀನಿತ್ಯ ಗೌರಿಯ ಪ ಪರಶಕ್ತಿರೂಪೆಯ ಪರತತ್ವಮೂರ್ತಿಯ ಪರಮಮಂಗಳ ದೇವಿಯ ಪರಮಾನುರಾಗದಿ 1 ಮೃಗಧರಮೌಳಿಯ ಜಗದುದ್ಧಾರಾಂಬೆಯ ಮಿಗೆ ಮನದಲಿ ಧ್ಯಾನಿಸಿ ಅವಾಹಿಸುತ್ತಲಿ 2 ಸರ್ವಲೋಕೇಶ್ವರಿಯ ಸರ್ವಾಲಂಕಾರೆಯ ಸರ್ವಾಂಗ ಸುಂದರಿಯ ಆಸನವನಿತ್ತು 3 ವಿದ್ಯಾಧಿದೇವಿಯ ಶುದ್ಧಚಿದ್ರೂಪೆಯ ಪಾದ್ಯಾಘ್ರ್ಯಾಚ ಮನದಿಂದ ಪರಿಶುದ್ಧ ಹೃದಯದಿ 4 ಪಂಚಮವಾಣಿಯ ಚಂಚರಿಕಾಂಬೆಯ ಪಂಚಾಮೃತವ ಜಲವ ಮುದದಿಂದ ತಳಿಯುತ 5 ಸುಂದರ ಹಾಸೆಯ ಸೌಂದರ್ಯ ಶರದಿಯ ಚಂದ್ರಗಾವಿಯ ನುಡಿಸಿ ಕಂಚುಕವ ಗೊಡಿಸಿ 6 ಚಂದ್ರ ಬಿಂಬಾಸ್ಯೆಯ ಸಿಂಧುರ ಗಮನೆಯ ಇಂದು ತಿಲಕವ ತಿದ್ದುತ ಗಂಧವನೆ ತೊಡೆದು 7 ಮಂಗಳ ಮಾತೆಯ ಮಂಗಳ ಮೂರ್ತಿಯ ಮಂಗಳ ದ್ರವ್ಯದಿಂದ ಶೃಂಗಾರ ವೆಸಗಿ8 ಲೀಲಾವಿನೋದೆಯ ಬಾಲ ಕುಚಾಂಬೆಯ ಮಾಲೆಯ ನರ್ಪಿಸುತ ಕುಸುಮಗಳ ನಿಚಯದಿ 9 ಪಾಪನಿಹಂಶ್ರಿಯ ಶ್ರೀಪತಿ ಸೋದರಿಯ ಧೂಪ ದೀಪವ ಕಲ್ಪಿಸಿ ಅಚಮನವಿತ್ತು 10 ಸತ್ಯಸಂಕಲ್ಪೆಯ ನಿತ್ಯಸಂತುಷ್ಟೆಯ ಉತ್ತಮ ಫಲಭಕ್ಷ್ಯದಿಂ ನೈವೇದ್ಯ ವೆಸಗಿ 11 ಕಂಬುಸುಕಂಠಿಯ ಬಿಂಬಫಲಾಧರೆಯ ತಾಂಬೂಲ ದಕ್ಷಿಣೆಯಂ ಭಕ್ತಿಯೊಳಗರ್ಪಿಸಿ 12 ಮಂಗಳ ಮೂರ್ತಿಯ ಮಂಗಳ ಗೌರಿಯ ಮಂಗಳಾರತಿಯ ಗೈದು ಆಚಮನವಿತ್ತು 13 ಕಲಕೀರವಾಣಿಯ ಕಲಹಂಸಗಮನೆಯ ಲಲನಾಶಿರೋಮಣಿಯ ಬಲವಂದುನಮಿಸಿ 14 ಜಯ ಜಯ ಗೌರಿಯೆ ಜಯ ಜಯ ಮಾತೆಯೆ ಜಯದೇವಿ ಕರುಣಿಸು ನೀಂ ವರ ಸುಪ್ರಸಾದವ 15 ಮಾನಿನಿ ದೇವಿಯು ಮೌನಿ ಸುವಂದ್ಯೆಯು ಧೇನುಪುರೀಶ್ವರಿಯು ಸುಪ್ರೀತೆಯಾಗಲಿ 16
--------------
ಬೇಟೆರಾಯ ದೀಕ್ಷಿತರು
ಜಯಜಯ ಶ್ರೀ ರಾಮ ನಮೋ |ಜಯ ಜಯ ಶ್ರೀ ಕೃಷ್ಣ ನಮೋ ಪ.ಸಿರಿಯರಸನು ಶೃಂಗಾರವ ಮಾಡಿ |ಸಿರಿಗಂಧವನೆ ಹಣೆಗಿಟ್ಟು ||ತರುಣ ತುಳಸಿ ವನಮಾಲೆಯ ಧರಿಸಿ |ಹರಿತುರುಕಾಯಲು ಹೊರಗೆ ಹೊರಟನು1ಹೊತ್ತು ಹೋಯಿತುತುರು ಬಿಡಿಯೆನ್ನುತ |ಸಾತ್ತ್ವತ ನುಡಿದನು ಗೋಪಿಯೊಡನೆ ||ತುತ್ತುರು ತುತ್ತುರು ತುರುತುರುಯೆನ್ನುತ |ಒತ್ತಿ ಸ್ವರಗಳನು ಪೊಂಗೊಳಲೂದುತ 2ವನಿತೆ ಸಟ್ಟುಗದೊಳು ಅಕ್ಕಿಯ ತೊಳಸಿ |ಒನಕೆಯಿಂದಓಗರ ಹದನೋಡಿ ||ಮಿನುಗುವ ಸೀರೆಯ ತಲೆಗೆ ಸುತ್ತಿಕೊಂಡು |ವನಕೆ ಹೋಗಲೆಂದು ಹೊರಗೆ ಹೊರಟಳು 3ಹರಿಸ್ವರವೆನ್ನುತ ಒಬ್ಬಳುಕೇಳಿನೆರೆಮನೆಗೆ ಹೋಗಿ ಕಡ ಕೇಳಿದಳು ||ಒರಳು ಕೊಡುವಿರಾ ಅರಸಿನ ಅರೆದು |ಮರಳಿ ಬೇಗ ತಂದೀವೆನೆನುತಲಿ 4ಹಸುವಿಗೆ ಇಟ್ಟಲು ಹಾಲುಓಗರ |ಬಿಸಿಮಡ್ಡಿಯ ಗಂಡಗೆ ಚಾಚಿ ||ಸೊಸೆಯನು ಅಟ್ಟಿಸಿ ತೊತ್ತನು ಪಾಲಿಸಿಮೊಸರ ಕಾಸಿ ಹೆಪ್ಪ ಹಾಕಿದೊಳೊಬ್ಬಳು 5ಗಿಳಿಗೆ ಹಾಸಿದಳು ಹಾಸು ಮಂಚವನು |ಅಳಿಯನ ಪಂಜರದೊಳಗಿರಿಸಿ ||ತಳಿಗೆಯಲ್ಲಿ ತಮ್ಮನ ಮಲಗಿಸಿ ತೊಟ್ಟಿ - |ಲೊಳಗೆ ಎಡೆಯನು ಮಾಡಿದಳೊಬ್ಬಳು 6ಅಟ್ಟವೆಂದು ಹತ್ತಿ ಅಗಳಿಯ ಮೇಲೇಇಟ್ಟಳು ಸಾದೆಂದು ಸಗಣಿಯನು ||ಕಟ್ಟಬಾಯಿಗೆ ಕಾಡಿಗೆಹಚ್ಚಿ |ಕೃಷ್ಣನ ಸ್ಮರಿಸುತ ಹೊರಗೆ ಹೊರಟಳು 7ಅಂಗನೆ ಚೌರಿಯು ಕಾಲಿಗೆ ತಗುಲಿಸಿ |ಮುಂಗೈಯಲಿ ತಾಳಿಯ ಬಿಗಿದು ||ಸಿಂಗರ ಸರವನು ನಡುವಿಗೆಕಟ್ಟಿ |ರಂಗನ ಸ್ಮರಿಸುತ ಹೊರಟಳೊಬ್ಬಳು 8ಕಟ್ಟಿ ಮುತ್ತಿನೋಲೆ ಮೊಣಕಾಲ್ಗಳಿಗೆ |ಗಟ್ಟಿ ಕಂಕಣವ ಕಿವಿಗಿಟ್ಟು ||ತೊಟ್ಟಿಲೊಳಗೆ ಶಿಶು ಅಳುವುದ ಕಂಡು |ಕಟ್ಟಿದ ನೆಲುವನು ತೂಗಿದಳೊಬ್ಬಳು 9ತರುಣಿಯೊಬ್ಬ ಸಂನ್ಯಾಸಿಯ ಕಂಡು |ನೆರೆಮನೆ ಕೂಸೆಂದೆತ್ತ ಬರಲು ||ಅರಿದಾವ ಗಾಳಿ ಸೋಕಿತೆನುತಲಿ |ಪುರಂದರವಿಠಲನು ನಗುತಿದ್ದನು ಸಖಿ 10
--------------
ಪುರಂದರದಾಸರು