ಯಾತರ | ಜನುಮಾ |
ಶಿರಿನಾಥನ ವಲುಮೆಗೆ ದೂರಾದ ನರನಾ ಪ
ಉಂಡುಂಡು ವರಗುತ ಕಂಡಲ್ಲಿ ತಿರುಗುತ |
ಭಂಡ ಮಾತುಗಳಾಡಿ ದಿನನೂಕುತಾ |
ಮಂಡಲೇಶನ ಭಕ್ತಿ ಮಂಡಿಸಿ ಮನದೊಳು |
ಖಂಡ ವಿಷಯದಾಶೆ ಗಂಡಲುವವನಾ 1
ಸ್ನಾನ ಸಂಧ್ಯಾನಿಲ್ಲಾ ಧ್ಯಾನ ಮೌನಗಳಿಲ್ಲಾ |
ಭವ ಕಾನನವನು ಸೇರಿ |
ಶ್ವಾನ ಸೂಕರನಂತೆ ಬಾಳುತಲಿಹನಾ 2
ಹಿಂದಿನ ಪುಣ್ಯದೀ ಬಂದದೀ ನರದೇಹ |
ಮುಂದ್ಯಾವ ಗತಿಯೆಂಬ ಬೆಜ್ಜರದೀ |
ತಂದೆ ಮಹಿಪತಿ ನಂದನ ಪ್ರಭು ಗೋ |
ವಿಂದ ಮುಕ್ಕುಂದೆಂಬ ನಾಮವ ನೆನಿಯದೆ 3