ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಚಿದಾತ್ಮಕ ಸತ್ಯ ರುಕ್ಮಿಣಿಯರು ಜೊತ್ತಿಲಾಡುತ ತಮ್ಮ ಪತಿಯ ಉತ್ತಮಗುಣಗಣ ವರ್ಣಿಸುವದಕನುವೃತ್ತರಾಗುತ ವಾದಿಸಿದರು ಪ. ಅಕ್ಕ ಕೇಳರಿಗಳ ವಶರಾಗಿ ಸೆರೆಯೊಳು ಸಿಕ್ಕಿದವರ ಮಗನಿವನು ಚಿಕ್ಕತನದಿ ಗೋವ ವಕ್ಕಲಿಗರು ಬಾಯೊ- ಳಿಕ್ಕಿದನ್ನವನುಂಡದೇನು 1 ನಿರಪರಾಧಿಯನೀತ ತರಿದನೆಂಬಕೀರ್ತಿ ಬರದಂತೆ ಸೆರೆಯೊಳುದಿಸಿದ ಸುರರೆಲ್ಲ ಗೋಪರಾಗಿರುವುದರಿತು ಸೇವ- ಕರಿಗೊಲಿವುತ್ತಲಿ ಮೆರೆವ 2 ಪಾಂಡುಕುಮಾರನ ಭಂಡಿ ಹೊಡಲು ಪಾಲ ನುಂಡನು ವಿದುರನ ಗೃಹದಿ ಗಂಡರಾಳುವ ಗರತೇರ ನೆರೆದವನ ಹೆಂಡರಾಗಿರುವದಿನ್ನೆಂತು 3 ಭಕ್ತವತ್ಸಲನೆಂಬ ಬಿರುದ ತೋರುವದತಿ ಶಕ್ತಿ ಹರಿಗೆ ಶೋಭಾಕರವು ತೊತ್ತಿನ ಮಗನಿಂದಲಿತ್ತ ಕೌರವನೆಂಬ ತತ್ವ ತೋರಿದನಲ್ಲವೇನೆ 4 ಧರೆಯನಾಳದೆ ತನ್ನ ಪರಿವಾರ ಸಹಿತಾಗಿ ಶರಧಿಯೊಳಗೆ ವಾಸವಾಗಿ ದುರುಳ ಜರಾಸಂಧ ಬರುವ ಭೀತಿಯ ತಾಳಿ ಲ್ಲಿರುವ ಕಾರಣವೇನೆ ಜಾಣೆ 5 ಈರೆಂಟು ಮತ್ತೊಂದು ಭಾರಿ ಸಮರದಲ್ಲಿ ಬಾರುಹದ್ರಥನನ್ನು ಗೆಲಿದ ಧೀರನೀತನು ಭಕ್ತ ಮಾರುತಿಯಲಿ ಜಯ ತೋರಲಂತಿರುವನು ಕಾಣೆ 6 ಜಾರ ಚೋರರಿಗೆಲ್ಲ ಗುರು ನಿಮ್ಮ ಪತಿಯೆಂದು ವೂರನಾರಿಯರೆಲ್ಲ ನುಡಿವ ಕ್ರೂರ ಮಾತನು ಕೇಳಲಾರೆನಕ್ಕಯ್ಯ ಯಿ ನ್ಯಾರಿಗೆಂದುತ್ತರ ಕೊಡುವೆ 7 ಘತಿತ ಪಾವನ ಪದ್ಮಜಾತಜನಕ ಶ್ರೀ ಪತಿ ಸುಜನಾನಂದದಾಯಿ ವಿತತ ವಿಡಂಬನ ತೋರುವ ವೆಂಕಟ ಪತಿ ದೋಷಹರ ಶೇಷಶಾಯಿ 8 ಹಸೆಗೆ ಕರೆವ ಮತ್ತು ಆರತಿಯ ಹಾಡುಗಳು
--------------
ತುಪಾಕಿ ವೆಂಕಟರಮಣಾಚಾರ್ಯ
ಸಾಕು ಸಾಕು ಸಂಸಾರ ಸಂಖ್ಯಾಗಿಲ್ಲ ಒಲ್ಲೆ ಒಗೆತನವ ಪ.ಆರುಮಂದಿ ಗಂಡರಾಳುವರು ಎನ್ನಆರುಮಂದಿಗೆ ಮೂರು ಸುತರೆನಗೆಆರು ಮೂರೇಳ್ಪರುಭಾವ - ಮೈದುನರೆಲ್ಲಆರರೆಂದರೆ ಬಿಡರು ಆರಿಗುಸುರಲಮ್ಮ 1ಹತ್ತುಮಂದಿ ಬೆನ್ನ ಮುತ್ತಿಕೊಂಡರೆಮತ್ತೆ ಬಿಟ್ಟೆನೆಂದೆ ಬಿಡಗೊಡರುಅತ್ತಿಗೆ ನಗೆಹಣ್ಣಿ ಹೊತ್ತು ಹೊತ್ತನೊಳೆಮ್ಮನೆತ್ತಿಯೊಳು ಹಸ್ತವಿಟ್ಟೆನ್ನ ಸಲುವರಮ್ಮ 2ಪಂತರೈವರು ಎನ್ನ ತೊಂತ ಹಂತಯೆಂದುಸಂಚಿತದ ಕರ್ಮವನುಣಿಸುವರುವಂಚನೆಯಳಿದ ಪ್ರಪಂಚವನು ಕಳೆದಿಹಮಿಂಚಿನ ಪರಿಯವಿರಿಂಚಿಬರೆದಿಹನಮ್ಮ3ಜೇಷ್ಠನಾಗಿಹ ಪುತ್ರ ಧರ್ಮನ ಅಗಲಿಸಿಭ್ರಷ್ಟ ಆತ್ತೆಯು ಮೈತ್ಯುವಾಗಿಹಳುಮೆಟ್ಟಿಲಿನ ಹೊರಗೆ ಕಣ್ಣಿಟ್ಟು ಸಾಧುಗಳನುದೃಷ್ಟಿಸಿ ನೋಳ್ಪನೆಂದರೆ ಕ್ಷಣ ಬಿಡರಮ್ಮ 4ಒಂಬತ್ತು ಬಾಗಿಲ ಊಳಿಗವನು ಮಾಳ್ಪಕುಂಬತದ ನರತ ಕಾವರ ದಾಳಿಢಂಭಕವನು ಬಿಟ್ಟು ಇಂಬಿನೊಳಟ್ಟು ವಿಶ್ವಂಭರ ಪುರಂದರವಿಠಲ ಧ್ಯಾನದಗುಟ್ಟು5
--------------
ಪುರಂದರದಾಸರು