ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಯ್ಯಾಲೆ ಉತ್ಸವಗೀತೆ ಜೊ ಜೊ ಜೊ ಜೊ ಶ್ರೀರಂಗನಾಥ ಜೊ ಜೊ ರಂಗನಾಯಕಿರಮಣನೆ ಭೂಮಿಕಾಂತ ಪ. ಮಂಟಪವನು ಶೃಂಗರಿಸಿದರಂದು ಎಂಟುದಿಕ್ಕಿಗೆ ಪುಷ್ಪಗಳಲಂಕರಿಸಿ ವೈ ಕುಂಠವಾಸನ ಉಯ್ಯಾಲೆಮಂಟಪವನ್ನು ಭಂಟರು ಬಂದು ಶೃಂಗಾರ ಮಾಡಿದರು 1 ಆಶ್ವೀಜ ಮಾಸದ ಶುಕ್ಲಪಕ್ಷದಲ್ಲಿ ಆ ತುಲಾ ಮಾಸದ ಆರುದಿವಸದಲ್ಲಿ ವಾರಿಜಮುಖಿಯರ ಒಡಗೊಂಡು ರಂಗ ವೈ ಯ್ಯಾರದಿಂದಲೆ ಬಂದನು ಮಂಟಪಕೆ 2 ಮತ್ತೆ ಮರುದಿನದೊಳಗಚ್ಚುತನಂತ ಕುತ್ತನಿಅಂಗಿ ಕುಲಾವಿ ಧರಿಸಿ ರತ್ನದ ಪಾನುಪಟ್ಟಿಯು ಅರಳೆಲೆ ಕಟ್ಟಿ ಭಕ್ತವತ್ಸಲನಾಡಿದನುಯ್ಯಾಲೆ 3 ಮೂರುದಿವಸದಲಿ ಮುರವೈರಿ ತಾನು ಭಾರಿ ವಜ್ರದ ಮಕರಕಂಠಿಯಾ ಧರಿಸಿ ನೀರಜನೇತ್ರನು ನಿಗಮಗೋಚರನು ವೈ ಯ್ಯಾರದಿಂದಲಿ ಆಡಿದನುಯ್ಯಾಲೆ 4 ನಾಲ್ಕು ದಿವಸದಲಿ ನಂದನಕಂದ ನವ ರತ್ನದ ಮಕರಕಂಠಿಯಧರಿಸಿ ಧರಿಸಿ ನಾಗಶಯನನಾಡಿದನುಯ್ಯಾಲೆ 5 ಐದು ದಿವಸದಲಿ ಅಕ್ರೂರವರದಗೆ ಕರಿ ದಾದ ಕುಲಾವಿ ಕಲ್ಕಿಯ ತುರಾಯಿ ಗಂಡಭೇರುಂಡಪಕ್ಷಿಯ ಪದಕವನಿಟ್ಟು ಪುಂಡರಿಕಾಕ್ಪನಾಡಿದನುಯ್ಯಾಲೆ 6 ಆರು ದಿವಸದಲಿ ಅಂಗಜನಯ್ಯಗೆ ಕೂರೆ ಕುಲಾವಿ ವೈಯಾರದಿಂಧರಿಸಿ ಹಾರ ಮಾಣಿಕ ರತ್ನ ಸರಗಳಳವಡಿಸಿ ನೀರಜನೇತ್ರನಾಡಿದನುಯ್ಯಾಲೆ 7 ಸಪ್ತದಿವಸದಲಿ ರತ್ನ ಮೌಳಿಯ ಧರಿಸಿ ಹಸ್ತದಿ ರತ್ನಹಾರ ಗಂಧವಿರಿಸಿ ಅರ್ತಿಯಿಂದಲೆ ತನ್ನ ಮಿತ್ರರು ಸಹಿತಲೆ ಬತ್ತವಳಿಸಿ ಬಂದ ಭಕ್ತವತ್ಸಲನು 8 ಓರೆಗೊಂಡೆಯ ವೈಯಾರದಿಂ ಧರಿಸಿ ನಾರಿಯರೆಡಬಲದಲಿ ಕುಳ್ಳಿರಿಸಿ ವಾರಿಜನೇತ್ರನು ನಡುವೆ ಕುಳ್ಳಿರಲು ವಾರಾಂಗನೆಯರೆಲ್ಲ ಪಾಡುತಿರಲು 9 ಅಷ್ಟಮ ದಿವಸದಿ ಅರ್ತಿಯಿಂದಲೆ ಕೃಷ್ಣಮೂರುತಿಗೆ ರಾಜಮುಡಿಯನು ಧರಿಸಿ ಹಿಂದಿನ ತೋಳಿಗೆ ಬಂದಿ ತಾಯಿತನಿಟ್ಟು ಇಂದಿರೆ ರಮಣನಾಡಿದನುಯ್ಯಾಲೆ 10 ಎಡಬಲದಲಿ ಭಕ್ತರು ನಿಂತಿರಲು ಪಿಡಿದು ಚಾಮರ ವ್ಯಜನವ ಬೀಸುತಿರಲು ಬೆಡಗಿನಿಮ್ಮ[ಡಕೆ]ಲೆ ಕರ್ಪೂರದ ಗುಳಿಗೆಯ ಎ ನ್ನೊಡೆಯಗೆ ಭಕ್ತರು ಪಿಡಿದು ನಿಂದಿರಲು 11 ದಾಸರಿಸಂದವು ಧಗಧಗನುರಿಯೆ ಸಹ ಸ್ರ ಸೂರ್ಯನಂತೆ ಪದಕಗಳೊಳೆಯೆ ಲೇಸಾದ ರತ್ನದ ಪಾದುಕೆಯನು ಧರಿಸಿ ವಾಸುದೇವನು ಆಡಿದನುಯ್ಯಾಲೆ 12 ಇಂದಿರೆ ರಮಣ ಒಂಭತ್ತು ದಿನದೊಳು ಚಂದ್ರ ಪುಷ್ಕರಣೀಲಿ ತೀರ್ಥವನ್ನಿತ್ತು ಬಂದು ಮಜ್ಜನವನ್ನು ಮಾಡಿ ವೆಂಕಟರಂಗ ಇಂದಿರೆಸಹಿತಲೆ ನಿಂದ ಹರುಷದಲಿ 13
--------------
ಯದುಗಿರಿಯಮ್ಮ
ಎದ್ದುನಿಂತ ಬಂದು ನಿಂತ ಮುಂದೆ ನಿಂದಂಥಮಾರಾಂತರ್ಗೆ ಕೃತಾಂತ ನಿಶ್ಚಿಂತ ಹನುಮಂತಬಲವಂತ ಯೆದೆಗೊಂತ ತನಪಂಥ ಸಲಲೆನುತಸÀಂತರಿಗೆ ಸಂತತ ಶಾಂತ ನಿಂತ ಮಾರಾಂತ ಕೃತಾಂತ ಪ. ದುರುಳ ರಾವಣನ ವನದ ತರುವಿನ ಕೊನೆಯೇರಿದಕರಚರಣಗಳ ಘಾಯದಿ ಮರಂಗಳ ಮುರಿದಅರಿಗಜ ಗಂಡಭೇರುಂಡನೆಂಬ ತನ್ನ ಬಲುಬಿರುದಮೆರೆದು ಮಾರುತಿ ಪ್ರತಿಭಟರ ಶಿರಂಗಳ ತರಿದ 1 ಸೀತೆಗೆ ಉಂಗುರವನ್ನಿತ್ತು ಮತ್ತೆ ಕೈಗಳ ಮುಗಿದಪ್ರೀತಿಯಿಂ ಪೊನ್ನಕಚ್ಚುಟಕ್ಕಿಟ್ಟ ಗಂಟನು ಬಿಗಿದಖ್ಯಾತ ಮಂಡೋದರಿಕುವರನ ಬಸುರನು ಬಗಿದವಾತಸುತನು ವೈರಿಪುರವ ಸುಡಲು ತೊಡಗಿದ 2 ನಲಿದು ಲಂಘಿಸಿ ನಳನಳಿಸುವ ಬಾಲವನೆತ್ತಿಖಳರೆದೆ ಶೂಲ ಹುಬ್ಬುಗಳ ಗಂಟಿಕ್ಕಿ ನೋಡುವ ಅರ್ಥಿಆಳುತಲಿಹ ಅಬಲೆಯರ ಭಯಂಕರಮೂರ್ತಿಸುಳಿದನು ಕೇರಿಕೇರಿಯಲಸುರರ ನುಗ್ಗೊತ್ತಿ 3 ಲಂಕಾನಗರಿಯ ಪುಚ್ಚದ ಕಿಚ್ಚಿಂದ ಸುಟ್ಟಹುಂಕರಿಸುತ ಅಹಿತರ ಬೇಗ ತೆಗೆದೊಗದಿಟ್ಟಕಂಕಣ ಮಕುಟ ಹಾರಂಗಳಿಂದೊಪ್ಪುವ ಬಲುದಿಟ್ಟಶಂಕೆಯಿಲ್ಲದನಿಲಜ ಶತ್ರುಗಳಿಗಿಂತರ್ಥಿಯ ಕೊಟ್ಟ 4 ಹೋಗೆಲೊ ಕಪಿಯೆನೆ ಹೊಕ್ಕು ರಕ್ಕಸರನು ಬಿಗಿದಕಾಗೆಯ ಬಳಗಕೆ ಕಲ್ಲನಿಟ್ಟಂದದಿ ಮಾಡಿದಆಗಲೆ ಕಂಡ ದಶಮುಖನೆಂಬ ಕಳ್ಳನ ನೋಡಿದಬೇಗ ಜಾನಕಿಯನ್ನು ಬಿಡು ಬಿಡುಯೆನಲು ತೊಡಗಿದ 5 ಮೂರರದೊಂದು ಪಾಲು ಖಳರ ಜನಂಗಳ ಕೊಂದಮೀರಿದ ಸೇನೆ ನಮ್ಮ ರಘುಪತಿಗಿರಲೆಂದು ನಿಂದನೂರುಯೋಜನದ ವಾರಾಶಿಯ ತೀರಕೆ ಬಂದಹಾರಿದನು ಗಗನಕೆ ಹನುಮನು ಭರವಸದಿಂದ ನಿಂದ 6 ಕುಂಭಿನೀ ಸುತೆಯ ಕುರುಹಿನ ಸನ್ಮಣಿಯ ತಕ್ಕೊಂಡಅಂಬುಧಿಯನು ಬೇಗ ದಾಟಿ ಶ್ರೀರಾಮರ ಕಂಡತ್ರ್ಯಂಬಕ ಮೊದಲಾದ ಸುರರ ತಂಡದಲಿ ಪ್ರಚಂಡಕಂಬುಕಂಧರ ಹಯವದನನ ಭಕ್ತಿರಸಾಯನ ಉಂಡ 7
--------------
ವಾದಿರಾಜ
ತತ್ವಚಿಂತನೆ ಅತಿಭಯಪುಟ್ಟುವುದಡವಿಯ ನೋಡಲ್ ಪ ಮತಿ ಮಂದವಾಗಿಯೆ ಮಾರ್ಗತಪ್ಪುವುದು ಅ.ಪ ಹುಲಿಸಿಂಹಶಾರ್ದೂಲ ಗಂಡಭೇರುಂಡ ಬಲುದುಪ್ಪೆ ಆನೆ ಕಾಡ್ಗೋಣದ ತಂಡ 1 ಝಿಲ್ಲಿಕದಿಂದೆದೆ ತಲ್ಲಣಿಸುವದು ಎಲ್ಲೆಲ್ಲಿಗಿಡಮರ ಮುಳ್ಳುಕಲ್ಲುಗಳು 2 ನಿಲ್ಲಗೊಡದ ದುಷ್ಟಕೀಟಕ ವೃಂದ 3 ಸಂಸಾರಟವಿಯನ್ನು ಸೇರಿ ನಾ ಕೆಟ್ಟೆ ಬಟ್ಟೆ 4 ದೇಹ ಸಂಬಂಧ ಮೋಹ ಕಾಡ್ಗಿಚ್ಚು ದಾಹಗೊಳಿಸಿ ಕೊಲ್ಲುತಿರುವುದು ಹೆಚ್ಚು 5 ಹಗಲು ಇರುಳು ಇದರೊಳಗಿದೆಚಿಂತೆ 6 ದಾರಿಯ ತೋರುವ ಗುರುರಾಮ ವಿಠಲಾ ಕಾರಣ ಕರ್ತನ ನಾ ನೋಡಲಿಲ್ಲ 7
--------------
ಗುರುರಾಮವಿಠಲ
ಪಕ್ಷಿ ಬಂದಿದೆ ಗಂಡಭೇರುಂಡ - ತನ್ನಕುಕ್ಷಿಯೊಳು ಈರೇಳು ಜಗವನಿಂಬಿಟ್ಟಂಥ ಪ ಜಾತಿ ಸೂತಕವೆಂಬ ತ್ರಿಮಲಕ್ಕೆ ಶೂಲದಂತಿಹ ಪರವಸ್ತು ಅ ತಿರುಮಂತ್ರೋದಯವೆಂಬಾಸನವನೆ ಪೊತ್ತು ತಾಹರುಷದಿಂದ ವೈಷ್ಣವರೆಡೆಯ ಪಾಡಿಪರವ ತೋರುವೆನೆಂದು ಪಾಕವನೆತ್ತುತಾಹರಿಹರ ಬ್ರಹ್ಮಾದಿಗಳ ಪುಟ್ಟಿಸಿದಂಥ1 ಅಕಾರ ಉಕಾರ ಮಕಾರ ಸಾಕಾರದಿಂದಪರಮ ರೂಪವ ತಾಳಿಆಕಾರ ಕ್ರಿಯಾ ನಾಮ ಮಕಾರವನುಓಂಕಾರದಿಂದ ಪುಟ್ಟಿಸಿದಂಥ ಪರವಸ್ತು 2 ಪತಿ ತಿರುವಕೋವಲೂರಿನೊಳಿರುವಂಥಾದಿಕೇಶವರಾಯ ತಾನಾದ ಪರವಸ್ತು 3
--------------
ಕನಕದಾಸ