(ಈ) ಲೋಕನೀತಿಯನ್ನು ಕುರಿತ ಕೃತಿಗಳು
ಏನಯ್ಯ ದೊರೆಯೆ ನಿನಗಾನಂದವೆ ದೊರೆಯೆ ಪ
ಮಾನಿತ ಜನರವಮಾನವ ನೋಡದೆ
ಹೀನ ಜನರ ನುಡಿ ನೀನಿಲಿದಾಲಿಪುದು ಅ.ಪ
ಜಾತಿಧರ್ಮವಿಲ್ಲಾ ಶಾಸ್ತ್ರದ ರೀತಿ ನಡತೆಯಿಲ್ಲ
ಮಾತಿದು ಪುಸಿಯಲ್ಲಾ ಮಾನದ ಭೀತಿಯು ಮೊದಲಿಲ್ಲಾ
ನೀತಿಯನರಿಯದ ಕೋತಿಗಳಂದದ
ಜಾತಿಯ ಜನರೊಳು ಮಾತಿನವಾಶಿಯಿಲ್ಲ 1
ದುರ್ಜನರು ಬೆರೆದು ದೋಷ ವಿವರ್ಜಿತರನ್ನು ಜರಿದು
ಲಜ್ಜೆಯ ನೆರೆತೊರೆದು ಗರ್ವದಿ ಗರ್ಜಿಸಿ ಮೊರೆದು
ಈ ಜಗದೊಳಗಿಹ ಸಜ್ಜನರಗಿಎ ಕುಲ
ಕಜ್ಜಳರವಮತಿಗುಜ್ಜುಗಿಸುತ್ತಿಹ 2
ಗಂಡಬಿಟ್ಟಿಹರು ಗರತಿಯ ಕಂಡು ನಗುತಿಹರು
ಮಿಂಡರ ಬೆರೆದಿಹರು ಮೇಲತಿ ದಿಂಡೆಯರಾಗಿಹರು
ಭಂಡತನದಿ ಪರಗಂಡಸರೊಳು ಸಮ-
ದಂಡೆಯೆನಿಸಿ ಬಲು ಚಂಡಿಸುತಿರ್ಪರೋ 3
ಕೇಳು ಹಂದೆಯಾಳು ಕ್ಲೇಶವ ಪೇಳಲು ಮತಿತಾಳು
ಕೀಳುಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು
ಕಾಳಮೂಳಿಯರ ಮೇಳದಿ ಹಿಗ್ಗುವ
ಬಾಳುಗೇಡಿ ಜನರೊಳಿಗ ಬಲುಘನ 4
ಧರೆಯೊಳಧಿಕವಾದ ಶ್ರೀಪುಲಿಗಿರಿಯೊಳು ನೆಲೆಯಾದ
ಸಿರಿವರ ನಿಜಪಾದ ಸೇವೆಯ ಕರುಣಿಸು ಬಹುಮೋದ
ಶರಣಾಭರಣ ನಿಜಕರುಣವ ತೋರಿಸು
ವರದವಿಠಲ ದೊರೆ ವರದದಯಾನಿಧೆ 5