ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂದನೆಂದೆನಿಸಿದ ಕೌಸಲ್ಯದೇವಿಗೆ ರಾಮ ಎನಬಾರದೆ ಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ 1 ಶಿಶುವಾಗಿ ಅವತಾರ ಮಾಡಿದ ದಶರಥನಲಿ ರಾಮ ಎನಬಾರದೆ ಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ 2 ಸಾತ್ವಿಕ ದೈವವೆ ತಾಟಕಾಂತಕ ಶ್ರೀರಾಮ ಎನಬಾರದೆ 3 ಪಾದನಖವು ಸೋಕಿ ಪಾದನಾಶನವಾಗೆ ರಾಮ ಎನಬಾರದೆ ಶ್ರೀಪತಿ ಕರುಣದಿ ಶಿಲೆಯು ಸ್ತ್ರೀಯಾಗಲು ರಾಮ ಎನಬಾರದೆ 4 ಸಕಲ ಸದ್ಗುಣ ಪೋಗಿ ಮಿಥಿಲಾ ಪಟ್ಟಣದಿ ರಾಮ ಎನಬಾರದೆ ತ್ರಿಪುರ ಸಂಹಾರ ತ್ರಿನೇತ್ರನ ಧನುವೆತ್ತಿ ರಾಮ ಎನಬಾರದೆ 5 ಚೆಲ್ವೆ ಜಾನಕಿ ಮಲ್ಲಿಗೆಯ ವನಮಾಲೆಯು ರಾಮ ಎನಬಾರದೆ ವಲ್ಲಭಗ್ಹಾಕಲು ಫುಲ್ಲಲೋಚನೆ ಸೀತಾರಾಮ ಎನಬಾರದೆ 6 ಮಂಗಳ ಮಹಿಮೆ ಸೀತಾಂಗನೆ ಕೊರಳಿಗೆ ರಾಮ ಎನಬಾರದೆ ಮಾಂಗಲ್ಯ ಬಂಧನ ಮಾಡಿದ ಮಹಾತ್ಮನು ರಾಮ ಎನಬಾರದೆ 7 ಜಗದೇಕ ಸುಂದರಿ ಜಾನಕಿಯನೆ ಗೆದ್ದ ರಾಮ ಎನಬಾರದೆ ಜಗದೀಶ ಜನಕಗೆ ಜಾಮಾತನೆನಿಸಿದೆ ರಾಮ ಎನಬಾರದೆ 8 ಮುದ್ದು ಜಾನಕಿ ಕೂಡಿ ಅಯೋಧ್ಯಕೆ ಬರುತಿರೆ ರಾಮ ಎನಬಾರದೆ ಮಧ್ಯ ಮಾರ್ಗದಿ ಬಂದಿದ್ದನು ಭಾರ್ಗವ ರಾಮ ಎನಬಾರದೆ 9 ತನ್ನ ತಾನೇ ಗೆದ್ದು ಧನ್ಯನೆಂದೆನಿಸಿದಿ ರಾಮ ಎನಬಾರದೆ ಬ್ರಹ್ಮ ಶಂಕರರಿಂದಿನ್ನು ಉತ್ತಮನಾದ ರಾಮ ಎನಬಾರದೆ 10 ಪಟ್ಟಗಟ್ಟಲು ಪರಮೋತ್ಸವ ಕಾಲಕ್ಕೆ ರಾಮ ಎನಬಾರದೆ ದುಷ್ಟ ಕೈಕೆಯ ನಿಷ್ಠೂರ್ವೊಚನವ ಕೇಳಿದ ರಾಮ ಎನಬಾರದೆ 11 ಆ ಲಕ್ಷುಮಿಯ ಮಾತಲಕ್ಷ್ಯವ ಮಾಡದೆ ರಾಮ ಎನಬಾರದೆ ಲಕ್ಷ್ಮಣ ಲಕ್ಷ್ಮಿ ಕೂಡ್ವನವಾಸ ತಿರುಗಿದ ರಾಮ ಎನಬಾರದೆ 12 ಸತಿ ಆದೇನೆಂದಸುರೆಯ ರಾಮ ಎನಬಾರದೆ ನಾಶÀರಹಿತ ಕಿವಿ ನಾಸಿಕನಳಿಸಿದ ಶ್ರೀ ರಾಮ ಎನಬಾರದೆ 13 ದಂಡಕಾರಣ್ಯದಿ ಕಂಡು ಮಾರೀಚನ್ನ ರಾಮ ಎನಬಾರದೆ ಹಿಂದ್ಹೋಗೆ ರಾಘವ ಬಂದ ರಾವಣನಲ್ಲೆ ರಾಮ ಎನಬಾರದೆ 14 ಘಾತಕ ರಾವಣ ಜಗನ್ಮಾತೆನೊಯ್ಯಲು ರಾಮ ಎನಬಾರದೆ ಸೋತು ಜಟಾಯು ಯುದ್ಧವ ಮಾಡಿ ತಾ ಬೀಳಲು ರಾಮ ಎನಬಾರದೆ 15 ಒಲಿದು ಸುಗ್ರೀವಗೆ ವಾಲಿ ವಧೆಯ ಮಾಡಿ ರಾಮ ಎನಬಾರದೆ ವಾನರಗಳ ಕೂಡಿ ವಾರಿಧಿಕಟ್ಟಿದ ಶ್ರೀರಾಮ ಎನಬಾರದೆ16 ಲೋಕ ಮಾತೆಯ ಲಂಕಾನಾಥ ತಾ ಒಯ್ದಾಗ ರಾಮ ಎನಬಾರದೆ ಸೀತಾಕೃತಿಯನಿಟ್ಟಶೋಕ ವನದೊಳು ರಾಮ ಎನಬಾರದೆ 17 ಮಂಡೋದರಿಯ ಗಂಡನ್ನ ದಶಶಿರಗಳ ರಾಮ ಎನಬಾರದೆ ಚೆಂಡನಾಡಿದ ಕೋದಂಡ ಪಾಣಿಯ ಶ್ರೀರಾಮ ಎನಬಾರದೆ 18 ಪ್ರೀತಿಂದ್ವಿಭೀಷಣಗೆ ಪಟ್ಟವಗಟ್ಟಿ ರಾಮ ಎನಬಾರದೆ ಸಿಂಧು ದಾಟಿದ ರಾಮ ಎನಬಾರದೆ 19 ಆದಿ ಲಕ್ಷುಮಿ ಕೂಡಿ ಹೋದನಯೋಧ್ಯಕೆ ರಾಮ ಎನಬಾರದೆ ಶ್ರೀದೇವಿ ಸಹಿತ ಪಟ್ಟಣ ಹೊಕ್ಕ ಪಟ್ಟಾಭಿರಾಮ ಎನಬಾರದೆ20 ಭರತ ಸುಮಿತ್ರ ಕೌಸಲ್ಯಗೆ ಸುಖವಿಟ್ಟ ರಾಮ ಎನಬಾರದೆ ಮುಕ್ತಿದಾಯಕ ಮುಂದೆ ಬಿಡದೆ ಕಾಪಾಡುವ ರಾಮ ಎನಬಾರದೆ21 ಪತ್ನಿ ವಾರ್ತೆಯ ತಂದ ಪವನಸುತಗೆ ಒಲಿದ ರಾಮ ಎನಬಾರದೆ ಸತ್ಯ ಲೋಕದ ಆಧಿಪತ್ಯವ ಕೊಟ್ಟ ಶ್ರೀ ರಾಮ ಎನಬಾರದೆ22 ರಾಮ ರಾಮನು ಎಂದು ಕÀರೆಯೆ ಭಕ್ತಿಯ ನೋಡಿ ರಾಮ ಎನಬಾರದೆ ಪ್ರೇಮದಿ ತನ್ನ ನಿಜಧಾಮವ ಕೊಡುವೋನು ರಾಮ ಎನಬಾರದೆ 23 ಅರಸಾಗಯೋಧ್ಯವನಾಳಿ ಯದುಕುಲದಲಿ ರಾಮ ಎನಬಾರದೆ ಹರುಷದಿ ಭೀಮೇಶ ಕೃಷ್ಣನಾಗ್ಯುದಿಸಿದ ರಾಮ ಎನಬಾರದೆ 24
--------------
ಹರಪನಹಳ್ಳಿಭೀಮವ್ವ
ನೆಚ್ಚಬೇಡಿ ಪತಿತನಾರಿಯ | ಕಚ್ಚುವ ಹಾವಿನ ಸಂಗವೆನ್ನಿ || ಪ ಮೆಚ್ಚುಗೊಳಿಪಳು ಗುಣಿಸಿ ನೋಡಿ ನಿಚ್ಚದಲಿ ಚಿತ್ತ ಚಂಚಲಳಾಗಿ ಅ.ಪ ಪರಿಯಂತ | ಯಾವದನಿತು ಮೊಗವನೆತ್ತದಲೆ || ಎವೆ ತೆಗೆದು ದಿಕ್ಕುಗಳು ನೋಡದೆ | ಅವನಿಗೆ ಬಾಗಿ ನಡೆಯುತ || ತವರು ಮನೆಯವರನು ಹಳಿದು | ನವÀನವ ಪ್ರಾವರ್ತನವನು ತೋರುತ || ಅವಗುಣಂಗಳಿಲ್ಲ ದೋಷಾದಲಿ | ಲವಕಾಲವನು ಕಳೆವ ನಾರಿಯ 1 ಪ್ರಾಯಾವಸ್ಥೆ ಬಂದು ಪ್ರಾಪ್ತವಾಗಲು | ಆಯುತಾಕ್ಷಿಗಳ ತಿರುಹಿ ಮೆಲ್ಲನೆ || ಬಾಯಲ್ಲಿ ಒಂದೊಂದು ಕ್ರಮಾಸಾರದಿ | ನೋಯ ನೋಯದಂತೆ ವಚನವ || ದಾಯಿಗಳಂತೆ ಮತ್ಸರಿಸಿ ಬಯ್ಯದೆ | ಮಾಯಾವಿ ಕಲ್ಪಿಸಿ ಮುಸಿಮುಸಿ ನಗೆ || ಆಯಕೆ ತಗಲಿ ಕಂಡ ಜನರಿಗೆ | ಘಾಯ ಕಾಣಿಸದಂತೆ ಮಾಳ್ಪಳ 2 ಅತ್ತೆ ಮಾವಗೆ ಅತ್ಯಂತವಾಗಿ ತಾನು | ಪ್ರತಿ ಉತ್ತರ ಪೇಳಲು ಅಂಜಿ ಅಂಜಿದಂತೆ || ಉತ್ತಮರ ಮನೋರಥವ ಕೆಡಿಸಿ | ಅತ್ತಿಗಿ ನಾದುನಿ ಮಿಗಿಲಾದವರೆಲ್ಲ || ಕತ್ತೆ ನಾಯಿ ನರಿಯೆಂಬೊ ಸೊಲ್ಲಲ್ಲಾದೆ | ಎತ್ತಲಾದರು ವಂಚಿಸಿ ಗಂಡನ್ನ || ತನ್ನಂತೆ ಮಾಡಿಕೊಂಡು ಹಗಲಿರುಳು ಥೈ- | ತಥ್ಥಾ ಎಂದಾಡಿಸಿ ಕುಣಿಸುವ ಸತಿಯಳ 3 ಕೊಂಡ ತೆರದಿ | ಪತಿಯ ಸಮಯ ನೋಡದೆ ತಾನು || ಸಥೆಯಿಂದಲಿ ಸಂಸಾರದೊಳಗಿದ್ದು | ಸುತರ ಪಡೆದು ಹಮ್ಮಿಲಿ || ಕಥನವೆಬ್ಬಿಸಿ ಗಂಡನ್ನ ಅಡವಿ | ಪಥವ ಹಿಡಿಸಿ ಹಣದಗೋಸುಗ || ಸತತ ಮನೆಯೊಳಗಿದ್ದ ಬದುಕು | ಮಿತಿಯಿಲ್ಲದೆ ಭಕ್ಷಿಸುವ ನಾರಿಯ 4 ಒಲಿಪಗೆ ನೀವು ಮೋಸಗೊಂಡು | ಒಲಿಯದಿರಿ ಸ್ತ್ರೀಯರಿಗೆ ಸೋತು || ಕಲಿಗೆ ಪ್ರಥಮ ಪಟ್ಟದ ಗದ್ದಿಗೆ | ಸುಲಭವಲ್ಲವೋ ಸುಖವಿಲ್ಲಾ || ಕೆಲಕಾಲ ಮಹಾ ಕಾತರದಿಂದಲಿ | ವಳಗಾಗದಿರು ಒಳಿತು ಪೇಳುವೆ || ಜಲಜಾಕ್ಷ ವಿಜಯವಿಠ್ಠಲನ್ನ ನಂಬಿರೋ | ನಂಬಿರೋ ನಂಬಿರೋ ಚತುರರು 5
--------------
ವಿಜಯದಾಸ