ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾವಧನಾಗಿ ಮನುಜಾ | ಕೇಳು | ನಿಜ ಸ್ಥಿತಿಯಾ ಪ ಕೇಳು ನಿಜ ಸ್ಥಿತಿಯಾ | ಪಡೆದೇನೆಂದರೆ ಗತಿಯಾ | ಬೀಳದೆ ನೀ ಕವಳದಾರಿಗೆ | ನಂಬು ಗುರು ಮೂರ್ತಿಯಾ 1 ಗಗನ ಮುರಿದು ಬೀಳಲಿ | ಸಾಗರ ಮೇರೆದಪ್ಪಲಿ | ಬಾಗದೇ ನೀ ಅನ್ಯದೈವಕ | ಭಾವ ದೃಢ ವಿರಲಿ 2 ದಾಸರ ಕಂಡರೆ ರಂಗಯ್ಯಾ | ಜಂಗಮ ಕಂಡರೆ ಲಿಂಗಯ್ಯಾ | ವೇಷಿಯಂತೆ ತಿರುಗಬ್ಯಾಡಾ | ಹಿಡಿಯೋ ಒಂದೇ ನಿಷ್ಠೆಯಾ 3 ಕಂಡ ಮಾರ್ಗ ನೋಡದೆ | ಕಂಡ ಮಾತನಾಡದೆ | ಗಂಡನೊಬ್ಬನ ಮಾಡದೆ ನಾರಿ | ಪತಿವೃತೆ ಮೆರಿವದೇ 4 ಎಲ್ಲಿ ಒಂದೇ ನಿಷ್ಠೆಯು | ಅಲ್ಲಿ ಶ್ರೀ ಹರಿ ಕೃಪೆಯು | ನಿಲ್ಲದೆ ಮಹಿಪತಿ ನಂದನಸ್ವಾಮಿ | ಇದಿರಿಡುವನು ಸಂಗತಿಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು