ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬುದ್ಧಿಮಾತು ಹೇಳಿದರೆ ಕೇಳ ಬೇಕಮ್ಮ ಮಗಳೆ ಮನ ಶುದ್ದಳಾಗಿ ಗಂಡನೊಡನೆ ಬಾಳ ಬೇಕಮ್ಮ ಪ ಮಾತು ಮಾತಿಗೆ ಮಾತ ಜೋಡಿಸಿ ಆಡಬೇಡಮ್ಮಮಗಳೆ ಪ್ರೀತಿ ಪಡುವ ಗಂಡನೆಂದು ಹೆಮ್ಮೆ ಬೇಡಮ್ಮ ನೀತಿ ತಪ್ಪಿ ನಡಿಯಬೇಡ ಯೆಂದಿಗಾದರೂ ಮಗಳೆ ಸೋತು ನಡೆಯಲು ಲೇಸುಯೆಂದು ತಿಳಿಯ ಬೇಕಮ್ಮ 1 ಅತ್ತೆ ಮಾವ ಗಂಜಿ ಕೊಂಡು ನಡಿಯ ಬೇಕಮ್ಮ ಮಗಳೆ ಮತ್ತೆ ಪತಿಯ ಮನವ ಮೆಚ್ಚಿಸಿ ಬಾಳ ಬೇಕಮ್ಮ ದುಡಿಯ ಬೇಕಮ್ಮ ಮಗಳೆ ಚಿತ್ತದಲ್ಲಿ ಹರಿಯ ಭಕ್ತಿ ಬಿತ್ತಬೇಕಮ್ಮ 2 ನೋಟ ಆಟದಲ್ಲಿ ಮಮತೆ ಬಹಳ ಬೇಡಮ್ಮ ಮಗಳೆ ಕೊಟ್ಟು ಕ್ರಯವ ತಿಂಡಿ ತಿಂಬೊ ನಡತೆ ಬೇಡಮ್ಮ ಕೂಟ ಜನರ ಮಾತು ಕೇಳೆ ಕೇಡು ಕೇಳಮ್ಮ ಮಗಳೆ ಸಾಟಿ ನಾನು ಗಂಡಗೆಂದು ಹಠವು ಬೇಡಮ್ಮ 3 ಕ್ಲೇಶ ಕೇಳಮ್ಮ ಮಗಳೆ ಗಂಡ ತಂದುದೆ ದೊಡ್ಡದೆಂದು ಉಂಡು ಬಾಳಮ್ಮ ಗಂಡೀ ನಂತೆ ಮೆರೆಯ ಬಾರ್ದು ತಗ್ಗಿ ನಡೆಯಮ್ಮ ಮಗಳೆ ತೊಂಡಳಾಗಿ ಹರಿಗೆ ಬಾಳೆ ಸುಖವು ನಿನಗಮ್ಮ 4 ಹರಿಯು ಕೊಟ್ಟರೂಪವೆ ಛಂದ ಲಜ್ಜೆ ಬೇಡಮ್ಮ ಮಗಳೆ ಬರಿಯ ವೇಷ ನಾಟಕದಂತೆ ಮೋಸ ಕಾಣಮ್ಮ ಜರಿಯ ಬೇಡ ಹಿರಿಯರ ಮಾತು ಹಾನಿ ಹೌದಮ್ಮ ಮಗಳೆ ಮರಿಯೆ ಹರಿಯ ಭವವು ತಪ್ಪದು ಜೋಕೆ ನೋಡಮ್ಮ 5 ಸೊಲ್ಲು ಕೇಳಮ್ಮ ಮಗಳೆ ನಲ್ಲನ ಬಲುಮೆಗೆ ಒಳ್ಳೆ ಗುಣವೆ ಮುಖ್ಯ ತಿಳಿಯಮ್ಮ ಮಗಳೆ ಒಳ್ಳೆ ಮಾತನಾಡಿ ಸರ್ವರ ಹಿತವ ಕೋರಮ್ಮ 6 ಏನೇ ಬಂದರು ಜರಿದು ಪತಿಯ ನುಡಿಯ ಬೇಡಮ್ಮಮಗಳೆ ನಿನ್ನದೆಂದು ಪುಟ್ಟಿದ ಮನೆಯ ತಿಳಿಯ ಬೇಡಮ್ಮ ಮಾನವೆ ಮುಖ್ಯ ಮಾನಿನೀಗೆ ತಿಳಿದು ಬಾಳಮ್ಮಾ ಮಗಳೆ ಮಾನವು ನೀಡೆ ಮಾನವು ಬಾಹೋದು ಮರ್ಮ ತಿಳಿಯಮ್ಮ 7 ನಾನು ನಾನು ನಾನೆಂಬೋದೆ ಹೀನ ಕೇಳಮ್ಮಾ ಮಗಳೆ ಸಾನುರಾಗದ ನುಡಿಯೆ ಸಕ್ಕರೆ ಕೀರ್ತಿ ಉಳಿಸಮ್ಮ ಸ್ನಾನ ಪಾನದಲ್ಲೇ ಮುಳುಗದೆ ಹರಿಯ ಸೆನೆಯಮ್ಮ ಮಗಳೆ ಶ್ರೀನಿವಾಸನ ಭಕ್ತರ ಪೂಜೆ ಯತ್ನದಿ ಮಾಡಮ್ಮಾ 8 ಪರರ ಸಿರಿಯ ನೋಡಿ ಮನದಿ ಕೊರಗ ಬೇಡಮ್ಮ ಮಗಳೆ ಹರಿಯು ನೀಡಿಹ ಸಿರಿಯೆ ಸಾಕುಯೆಂದು ಸುಖಿಸಮ್ಮ ಯರವಿನಿಂದ ಒಡವೆ ವಸ್ತ್ರ ಧರಿಸ ಬೇಡಮ್ಮ ಮಗಳೆ ಅರಿತು ಹರಿಯ ಗುಣಗಳ ಮನದಿ ನೆನೆದು ನೆನೆಯಮ್ಮ 9 ಸತತ ನಗೆ ಮೊಗಳಾಗಿ ಬಾಳು ಗಂಟು ಬೇಡಮ್ಮ ಮಗಳೆ ಸತತ ಕಾಯುವ ಹರಿಯೇಯೆಂದು ದೃಢದಿ ಭಜಿಸಮ್ಮ ಕೇಳಮ್ಮಾ ಮಗಳೆ ನಿತ್ಯ ಸುಖಿಸಮ್ಮ 10 ಪತಿಯ ಭಕ್ತಿಯೆ ತಾರಕ ನಿನಗೆ ಧೋರಣೆ ಬೇಡಮ್ಮ ಮಗಳೆ ಪತಿಯ ಜರಿಯುತ ವ್ರತಗಳ ಮಾಡೆ ಫಲವೇ ಇಲ್ಲಮ್ಮ ರತಿಯಿಂ ನುಡಿದಿಹೆ ಶೃತಿಗಳಸಾರ ಯುಕ್ತಿಗಳಮ್ಮ ಮಗಳೆ ಮೊರೆಯ ಹೋಗಮ್ಮ 11
--------------
ಕೃಷ್ಣವಿಠಲದಾಸರು
ದಾತೆಇಂದಿರೆಪಾರಿ| ಜಾತ ಮಂದಿರೆ ಲೋಕ |ನಾಥೆ ಸುಖ ಪೂರ್ಣೆ ವಿಖ್ಯಾತೆ ||ಬಿನ್ನವಿಸುವೆನೆ ಯನ್ನಮಾತು ಮನ್ನಿಪುದೇ ವಿಧಿಮಾತೆ ಪಪಾನೀಯಧಿ ಹರಿಗೆ | ಏನು ಕೊಟ್ಟನೊ ನಿನ್ನ |ಕಾಣಿಸವೆ ಕಣ್ಣು ಕುಲವಿಲ್ಲ ||ಗೋತ್ರವಿಲ್ಲ ಹೆತ್ತವರ-ಕ್ಷೋಣಿಯೊಳಗೊಬ್ಬರರಿತಿಲ್ಲ1ಏನು ಮರುಳಾದೆವ್ವ | ಶ್ರೀನಾರಿಯಿಂಥವಗೆ |ಹೀನಳುಚ್ಛಿಷ್ಟ ಫಲಮೆದ್ದ ||ಬಡ ಬ್ರಾಹ್ಮಣೊದ್ದರೆಮಾನವೇ ಇಲ್ಲಿ ನಗುತಿದ್ದ2ಥವ ಚೋರ ಬಹುಜಾರ| ಸವತಿಯರು ಬಲು ಮಂದಿ |ಅವರಿಗಾತ್ಮಜರು ಹತ್ತತ್ತು ||ನಿನ್ನೊಗತನದೊಳಿದ್ದಅವಿವೇಕ ಮೂಲೋಕಕೆ ಗುರುತು3ಅತ್ತೆ ಮಾವಗಳಿಲ್ಲ |ವೃತ್ತಿಕ್ಷೇತ್ರಗಳಿಲ್ಲ |ಹಸಿದರನ್ನಿಲ್ಲ ಮನೆಯಲ್ಲಿ ||ಈ ಗಂಡನೊಡನೆಯೇ-ನರ್ಥಿ ಪಡುತಿಹೆಯೆ ನೀ ಬಲ್ಲೆ 4ಸೇರಿದನುಪತಿನಿನ್ನ | ತೌರು ಮನೆ ನೋಡಲ್ಕೆ |ಧಾರಿಣಿಯೊಳಗೆ ಬಹು ನಿಂದಾ ||ಭಕ್ತಿಯಿಂದವನ ಹ್ಯಾ-ಗಾರಾಧಿಸುವದೋ ಸುರವೃಂದಾ 5ಶಿಶು ಹಿಂಸಕತಿ ಕಠಿಣ | ಹಸನ್ಮುಖನಲ್ಲರ್ಭಕ ಹೆಂ- |ಗಸರಳಿದ ಪುಕ್ಕಾ ಬಹು ಠಕ್ಕಾ ||ಕಲಹಗಂಟೇನು ಸೇ-ವಿಸಿದ್ಯೊ ವ್ರತಗಳನು ಇವ ಸಿಕ್ಕಾ6ಎಲ್ಲೆಲ್ಲಿ ನೋಡಿದರು | ಇಲ್ಲಿ ಪ್ರಾಣೇಶ ವಿ- |ಠಲನಂಥವರೂ ಏನೆಂಬೆ ||ಮುದದಿಂದ ಬಿಡದೆ ಅವ-ನಲ್ಲಿ ಪೊಂದಿರ್ಪೆ ಜಗದಂಬೆ 7
--------------
ಪ್ರಾಣೇಶದಾಸರು