ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರ ನಂಬುಗೆ ಜಗದೆನಗಿಲ್ಲ ಹರಿಯೆ ಕಾರುಣ್ಯನಿಧಿ ನೀನೆ ಗತಿಯೆನಗೆ ಪೊರೆಯೈ ಪ ತಿಂಡಿಗ್ಹಾಕುವತನಕ ಹೆಂಡತಿಯು ನುಡಿಯುವಳು ಗಂಡನೇ ಗತಿಯೆಂದು ಮಂಡೆಯನು ಬಾಗಿ ತಿಂಡಿತಪ್ಪಿದ ಕ್ಷಣದಿ ಕಂಡಕಂಡತೆ ಕೂಗಿ ಬಂಡುಮಾಡುವಳಿಹ್ಯದಿ ಷಂಡನೆಂದಭವ 1 ಬಂಧುಬಾಂಧವರೆಲ್ಲ ಸಂದುಬಿಡಿದಡಿಗಡಿಗೆ ವಂದಿಸಿ ನುಡಿಯುವರು ತಿಂದುಡುವನತಕ ಸಂಧಿಸಲು ಬಡತನವು ವಂದಿಸಿದವರೆ ಮನ ಬಂದಂತೆ ನಿಂದಿಪರು ಕುಂದ್ಹೊರಿಸಿ ದೇವ 2 ಭೂಮಿಯ ಜನರೆಲ್ಲ ಕ್ಷೇಮ ನೀ ಕೊಟ್ಟಿರಲು ತಾಮಸವ ಬಿಟ್ಟು ಬಲು ಪ್ರೇಮ ಬಳಸುವರು ಸ್ವಾಮಿ ಶ್ರೀರಾಮ ನಿಮ್ಮ ಪ್ರೇಮ ತುಸು ತಪ್ಪಿದರೆ ಭೂಮಿಯೊಳಗಿನ ಕೇಡು ನಾ ಸ್ಮರಿಸಲಾರೆ 3
--------------
ರಾಮದಾಸರು
ಗಂಡನೆ ಪ್ರಾಣಗಂಡನೇ ಪ ತಿಂಡಿಬಟ್ಟೆಗೆ ತಂದು ಹಾಕದೆ ಜಿಣುಗುವಅ.ಪ ಲಿಬ್ಬಿಯಿದ್ದರೆ ತೆಗೆದು ತಾರೆಂಬನು ಅಬ್ಬರಿಸುತ ಕೂಗಿ ಕೈಯ್ಯೆತ್ತಿ ಬರುವನು ಒಬ್ಬರಗೊಡವೆ ನಮಗ್ಯಾಕೆ ಎಂಬುವನು 1 ಸೀರೆ ಕುಪ್ಪಸಕೇಳೆ ಚೀರುತ್ತಯಿಲ್ಲೆಂಬ ಯಾರೆ ನಿನಗೆ ಬಲಯೆಂಬುವನು ಸೋರುವ ಮನೆಯಂತೆ ಎನ್ನ ಸಂಸಾರ 2 ಬಟ್ಟೆ ಮಾತಿನ್ನೇನು ಯಣ್ಣೆಕಾಣದು ತಲೆಯೇನ್ಹೇಳಲಿ ಕಣ್ಣುಕಾಣದೆ ನಮ್ಮಪ್ಪಯಿವಗೆ ಕೊಟ್ಟ ಗನ್ನಘಾತಕನಿವ ಕಲಿಕಾಲಜಗಳ 3 ಓದುಬರಹಗಳೆಂಬ ಹಾದಿಯ ತಾಕಾಣ ಆದದ್ದಾಗಲಿಯಿನ್ನೇನು ಮಾಡುವೆನಾನು 4 ಇರುಳು ಹಗಲುಯನ್ನ ಕರೆಕರೆ ಪಡಿಸುವ ಚರಣಕಮಲವೆನಗೆ ದೊರೆಯುವುದ್ಹ್ಯಾಗೆ 5
--------------
ಗುರುರಾಮವಿಠಲ
ನಿನ್ನ ಮಗನ ಮುದ್ದು ನಿನಗಾದರೆಗೋಪಿಆರಿಗೇನೆ? |ಎನ್ನ ಕೂಡ ಸರಸವಾಡಲು ಓರಗೆಯೇನೆ? ಪಹೆಚ್ಚಿನ ಸತಿಯರ ಕಚ್ಚೆಯ ಬಿಚ್ಚುವ ಹುಚ್ಚನೇನೆ?-ಅಮ್ಮ |ಇಚ್ಛೆಯರಿತು ನಮ್ಮ ಗಲ್ಲವ ಕಚ್ಚುವ ನೆಚ್ಚನೇನೆ? 1ಚೆಂಡೆಂದು ಮಿಂಡೆಯರು ದುಂಡು ಕುಚವ ಪಿಡಿವ ಗಂಡನೇನೆ? |ಕಂಡಕಂಡಲ್ಲಿ ಉದ್ದಂಡವ ಮಾಡುವ ಪುಂಡನೇನೆ 2ಹೊಸ ಕೂಟವರಿತು ಹಾಸಿಗೆಯನು ಹಾಕುವ ಶಿಶುವು ಏನೆ? |ಅಸಹಾಯ ಶೂರ ಶ್ರೀ ಪುರಂದರವಿಠಲರಾಯ ಕಾಣೆ 3
--------------
ಪುರಂದರದಾಸರು
ಸಂಜೆಯೊಳಿಂತು ಬರುವರೆ | ಶಬ್ದ ಹೊರುವರೆ | ಜನಕಂಜದಲಿಹರೆ ಪಸಂಧ್ಯಾಕಾಲವು ಗೋವು ಬಾರವೆ,ವತ್ಸಬಳಲವೆ, ಹೀಗೆ ಬರುವುದು ಥರವೆ |ಅಂದಾರು ಅತ್ತಿ ಅತ್ತಿಗೆಯರು, ಇಷ್ಟು ಸಹಿಸಾರು, ಪತಿಗಳು ಸುಮ್ಮನಿರರು ||ಕಂದಗಳೆರೆವ ಸಮಯವಿದು, ಬಿಟ್ಟು ಬರುವುದು, ಚರ್ಯೆ ನೋಡಲ್ಕರಿದು |ಬಂದೊಂಧೆಳಲೆ ಮನೆಯೊಳು ದೀಪ, ಹಚ್ಚದಿರೆ ಪಾಪ, ಮಾಡಬೇಡಿರಿ ಕೋಪ 1ಗಂಡನೇ ದೈವ ಹೆಂಗಸರಿಗೆ, ತಿಳಿಯದೆ, ಹೀಗೆ ಬರುವರೆ ಯನ್ನ ಬಳಿಗೆ |ಬಂಡುಇದೇನಿರೆ ಬತ್ತಲೆ, ಬಂದಿರೆಲ್ಲೆಲೆ, ಆಭರಣವೆಲ್ಲಿವಲ್ಲೆ ||ಕಂಡ ಕಂಡಲ್ಲೆ ಹುಡುಕುವರು, ನಿಮ್ಮನ್ನಾಳ್ವರು, ಕಾಣದಲೆ ಮಿಡುಕುವರು |ತುಂಟಾಟ ಕಲಿಯಬಾರದು ಇಷ್ಟು, ಪೇಳುವಿನೆ ಒಟ್ಟು, ಕೇಳಿರೆ ಮನವಿಟ್ಟು 2ಆಯಿತು ನಾ ಗಂಡನಾದೇನೆ, ತಿಳಿಯದರೇನೆ, ಕಂಡವರು ನಗರೇನೆ |ಕಾಯೋ ಪ್ರಾಣೇಶ ವಿಠಲ ಎಂದು, ಯನ್ನ ಪದರೆಂದು, ನಮಸ್ಕರಿಸಿರೆ ಬಂದು ||ಈಯಾಟ ಸಲ್ಲ, ನಿಮ್ಮನೆಗೀಗ, ಸಾಗಿರೆ ಬೇಗ, ಪತಿಗಳ ಕೂಡಭೋಗ|ಆಯಾಸವಿಲ್ಲದೆ ಮಾಡಿರೆ, ಮಾತು ಕೇಳಿರೆ, ಭ್ರಾಂತರಾಗಬೇಡಿರೆ 3
--------------
ಪ್ರಾಣೇಶದಾಸರು