ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುಂಡಲೀಕವರದನೇ | ಕುಂಡಲೀಶಯನನೇ ||ಗಂಡರಿಗೆ ಗಂಡನಾದ | ಪಾಂಡುರಂಗ ರಾಯನೇ ಪ ಅಮ್ಮಾ ನಮ್ಮ ಒಡೆಯನೇ | ಬೊಮ್ಮಾದಿಕರ ವಂದ್ಯನೇ ||ಹಮ್ಮಿನವರ ಹಲ್ಲು ಮುರಿದು | ಸಮ್ಮತರ ಸಲಹುವನೇ 1 ಕಾಲಕರ್ಮ ರಹಿತನೇ | ನೀಲಮೇಘಶ್ಯಾಮನೇ ||ಛಲನ ಮಾಡಿ ಬಲಿಯ ಗೆದ್ದ | ಚೆಲುವ ಪದ್ಮನಾಭನೇ 2 ಅವ್ಯಯ ಸ್ವರೂಪನೇ | ಸವ್ಯಸಾಚಿ ಮಿತ್ರನೇ ||ಹವ್ಯಕವ್ಯ ಭೋಕ್ತನಾದ | ದಿವ್ಯ ರುಕ್ಮಭೂಷನೇ 3
--------------
ರುಕ್ಮಾಂಗದರು
ವಾವಿಯೀ ಪರಮಾತ್ಮಗೊಂದೂ ಇಲ್ಲ |ಶ್ರೀ ವರನೆ ಇದು ಅಲ್ಲವೆಂಬರಿಲ್ಲ ಪಮೊಮ್ಮಕ್ಕಳನ್ನು ವಂಚಿಸಿ ತಾನೆ ಕೊಲ್ಲಿಸಿದ |ಮೊಮ್ಮಗಗೆ ತನ್ನ ತಂಗಿಯನು ಕೊಟ್ಟ ||ಮೊಮ್ಮಗನ ನಾದಿನಿಯರಲ್ಲಿ ಮಕ್ಕಳ ಪಡೆದ |ಮೊಮ್ಮಗನ ವಹಿಸಿ ಪುತ್ರನ್ನ ಅಳಿದ 1ಒಬ್ಬ ಮಾವನ ನೋಡ ನೋಡ ಪ್ರಾಣವಕೊಂಡ|ಒಬ್ಬ ಮಾವನ ಕೂಡ ಕಡಿದಾಡಿದ ||ಒಬ್ಬ ಮಾವನ ಮೇಲೆ ಬಾಣವನ್ನೇರಿಸಿದ |ಒಬ್ಬ ಮಾವನ ಮಗನಮಾನಕಳೆದ2ಒಬ್ಬ ಅತ್ತೆಗೆ ತಾನೆ ತಂದೆಯನ್ನಿಸಿಕೊಂಬ |ಒಬ್ಬ ಅತ್ತೆಗೆ ಗಂಡನಾದನಿವನು |ಒಬ್ಬ ಅತ್ತೆಗೆ ಮಾವನಾದನೀ ಕೇಶವನು |ಒಬ್ಬ ಅತ್ತೆಯ ಬಹಳ ಶ್ರಮ ಬಡಿಸಿದ 3ಒಬ್ಬ ಮಗಳನು ತನ್ನ ಹಿರಿಯ ಮಗನಿಗೆ ಕೊಟ್ಟ |ಒಬ್ಬ ಮಗಳನು ತಾನೇ ಮದುವೆಯಾದ ||ಒಬ್ಬ ಮಗಳಿಗೆ ಒಂದು ರೀತಿಯಲಿ ಮಗನಾದ |ಒಬ್ಬ ಮಗಳನು ಹಲವರಲ್ಲಿರಿಸುವ 4ಇವನ ನಿಜ ಭಕ್ತನೆಂಬವನು ತನ್ನ ಸತಿಯನು |ಸವಿಯಾಗಿ ನಾಲ್ವರಿಗೆಹಂಚಿಕೊಟ್ಟ ||ಭುವನದೊಳಗೆ ಪ್ರಾಣೇಶ ವಿಠಲನ ಮನೆ ನಡತೆಯಿದು |ಕವಿಗಳೆಲ್ಲರು ತಿಳಿದು ಪೂಜಿಸುತಿಹರು ಮುದದೀ 5
--------------
ಪ್ರಾಣೇಶದಾಸರು
ಸಂಜೆಯೊಳಿಂತು ಬರುವರೆ | ಶಬ್ದ ಹೊರುವರೆ | ಜನಕಂಜದಲಿಹರೆ ಪಸಂಧ್ಯಾಕಾಲವು ಗೋವು ಬಾರವೆ,ವತ್ಸಬಳಲವೆ, ಹೀಗೆ ಬರುವುದು ಥರವೆ |ಅಂದಾರು ಅತ್ತಿ ಅತ್ತಿಗೆಯರು, ಇಷ್ಟು ಸಹಿಸಾರು, ಪತಿಗಳು ಸುಮ್ಮನಿರರು ||ಕಂದಗಳೆರೆವ ಸಮಯವಿದು, ಬಿಟ್ಟು ಬರುವುದು, ಚರ್ಯೆ ನೋಡಲ್ಕರಿದು |ಬಂದೊಂಧೆಳಲೆ ಮನೆಯೊಳು ದೀಪ, ಹಚ್ಚದಿರೆ ಪಾಪ, ಮಾಡಬೇಡಿರಿ ಕೋಪ 1ಗಂಡನೇ ದೈವ ಹೆಂಗಸರಿಗೆ, ತಿಳಿಯದೆ, ಹೀಗೆ ಬರುವರೆ ಯನ್ನ ಬಳಿಗೆ |ಬಂಡುಇದೇನಿರೆ ಬತ್ತಲೆ, ಬಂದಿರೆಲ್ಲೆಲೆ, ಆಭರಣವೆಲ್ಲಿವಲ್ಲೆ ||ಕಂಡ ಕಂಡಲ್ಲೆ ಹುಡುಕುವರು, ನಿಮ್ಮನ್ನಾಳ್ವರು, ಕಾಣದಲೆ ಮಿಡುಕುವರು |ತುಂಟಾಟ ಕಲಿಯಬಾರದು ಇಷ್ಟು, ಪೇಳುವಿನೆ ಒಟ್ಟು, ಕೇಳಿರೆ ಮನವಿಟ್ಟು 2ಆಯಿತು ನಾ ಗಂಡನಾದೇನೆ, ತಿಳಿಯದರೇನೆ, ಕಂಡವರು ನಗರೇನೆ |ಕಾಯೋ ಪ್ರಾಣೇಶ ವಿಠಲ ಎಂದು, ಯನ್ನ ಪದರೆಂದು, ನಮಸ್ಕರಿಸಿರೆ ಬಂದು ||ಈಯಾಟ ಸಲ್ಲ, ನಿಮ್ಮನೆಗೀಗ, ಸಾಗಿರೆ ಬೇಗ, ಪತಿಗಳ ಕೂಡಭೋಗ|ಆಯಾಸವಿಲ್ಲದೆ ಮಾಡಿರೆ, ಮಾತು ಕೇಳಿರೆ, ಭ್ರಾಂತರಾಗಬೇಡಿರೆ 3
--------------
ಪ್ರಾಣೇಶದಾಸರು