ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬುದ್ಧಿಮಾತು ಹೇಳಿದರೆ ಕೇಳ ಬೇಕಮ್ಮ ಮಗಳೆ ಮನ ಶುದ್ದಳಾಗಿ ಗಂಡನೊಡನೆ ಬಾಳ ಬೇಕಮ್ಮ ಪ ಮಾತು ಮಾತಿಗೆ ಮಾತ ಜೋಡಿಸಿ ಆಡಬೇಡಮ್ಮಮಗಳೆ ಪ್ರೀತಿ ಪಡುವ ಗಂಡನೆಂದು ಹೆಮ್ಮೆ ಬೇಡಮ್ಮ ನೀತಿ ತಪ್ಪಿ ನಡಿಯಬೇಡ ಯೆಂದಿಗಾದರೂ ಮಗಳೆ ಸೋತು ನಡೆಯಲು ಲೇಸುಯೆಂದು ತಿಳಿಯ ಬೇಕಮ್ಮ 1 ಅತ್ತೆ ಮಾವ ಗಂಜಿ ಕೊಂಡು ನಡಿಯ ಬೇಕಮ್ಮ ಮಗಳೆ ಮತ್ತೆ ಪತಿಯ ಮನವ ಮೆಚ್ಚಿಸಿ ಬಾಳ ಬೇಕಮ್ಮ ದುಡಿಯ ಬೇಕಮ್ಮ ಮಗಳೆ ಚಿತ್ತದಲ್ಲಿ ಹರಿಯ ಭಕ್ತಿ ಬಿತ್ತಬೇಕಮ್ಮ 2 ನೋಟ ಆಟದಲ್ಲಿ ಮಮತೆ ಬಹಳ ಬೇಡಮ್ಮ ಮಗಳೆ ಕೊಟ್ಟು ಕ್ರಯವ ತಿಂಡಿ ತಿಂಬೊ ನಡತೆ ಬೇಡಮ್ಮ ಕೂಟ ಜನರ ಮಾತು ಕೇಳೆ ಕೇಡು ಕೇಳಮ್ಮ ಮಗಳೆ ಸಾಟಿ ನಾನು ಗಂಡಗೆಂದು ಹಠವು ಬೇಡಮ್ಮ 3 ಕ್ಲೇಶ ಕೇಳಮ್ಮ ಮಗಳೆ ಗಂಡ ತಂದುದೆ ದೊಡ್ಡದೆಂದು ಉಂಡು ಬಾಳಮ್ಮ ಗಂಡೀ ನಂತೆ ಮೆರೆಯ ಬಾರ್ದು ತಗ್ಗಿ ನಡೆಯಮ್ಮ ಮಗಳೆ ತೊಂಡಳಾಗಿ ಹರಿಗೆ ಬಾಳೆ ಸುಖವು ನಿನಗಮ್ಮ 4 ಹರಿಯು ಕೊಟ್ಟರೂಪವೆ ಛಂದ ಲಜ್ಜೆ ಬೇಡಮ್ಮ ಮಗಳೆ ಬರಿಯ ವೇಷ ನಾಟಕದಂತೆ ಮೋಸ ಕಾಣಮ್ಮ ಜರಿಯ ಬೇಡ ಹಿರಿಯರ ಮಾತು ಹಾನಿ ಹೌದಮ್ಮ ಮಗಳೆ ಮರಿಯೆ ಹರಿಯ ಭವವು ತಪ್ಪದು ಜೋಕೆ ನೋಡಮ್ಮ 5 ಸೊಲ್ಲು ಕೇಳಮ್ಮ ಮಗಳೆ ನಲ್ಲನ ಬಲುಮೆಗೆ ಒಳ್ಳೆ ಗುಣವೆ ಮುಖ್ಯ ತಿಳಿಯಮ್ಮ ಮಗಳೆ ಒಳ್ಳೆ ಮಾತನಾಡಿ ಸರ್ವರ ಹಿತವ ಕೋರಮ್ಮ 6 ಏನೇ ಬಂದರು ಜರಿದು ಪತಿಯ ನುಡಿಯ ಬೇಡಮ್ಮಮಗಳೆ ನಿನ್ನದೆಂದು ಪುಟ್ಟಿದ ಮನೆಯ ತಿಳಿಯ ಬೇಡಮ್ಮ ಮಾನವೆ ಮುಖ್ಯ ಮಾನಿನೀಗೆ ತಿಳಿದು ಬಾಳಮ್ಮಾ ಮಗಳೆ ಮಾನವು ನೀಡೆ ಮಾನವು ಬಾಹೋದು ಮರ್ಮ ತಿಳಿಯಮ್ಮ 7 ನಾನು ನಾನು ನಾನೆಂಬೋದೆ ಹೀನ ಕೇಳಮ್ಮಾ ಮಗಳೆ ಸಾನುರಾಗದ ನುಡಿಯೆ ಸಕ್ಕರೆ ಕೀರ್ತಿ ಉಳಿಸಮ್ಮ ಸ್ನಾನ ಪಾನದಲ್ಲೇ ಮುಳುಗದೆ ಹರಿಯ ಸೆನೆಯಮ್ಮ ಮಗಳೆ ಶ್ರೀನಿವಾಸನ ಭಕ್ತರ ಪೂಜೆ ಯತ್ನದಿ ಮಾಡಮ್ಮಾ 8 ಪರರ ಸಿರಿಯ ನೋಡಿ ಮನದಿ ಕೊರಗ ಬೇಡಮ್ಮ ಮಗಳೆ ಹರಿಯು ನೀಡಿಹ ಸಿರಿಯೆ ಸಾಕುಯೆಂದು ಸುಖಿಸಮ್ಮ ಯರವಿನಿಂದ ಒಡವೆ ವಸ್ತ್ರ ಧರಿಸ ಬೇಡಮ್ಮ ಮಗಳೆ ಅರಿತು ಹರಿಯ ಗುಣಗಳ ಮನದಿ ನೆನೆದು ನೆನೆಯಮ್ಮ 9 ಸತತ ನಗೆ ಮೊಗಳಾಗಿ ಬಾಳು ಗಂಟು ಬೇಡಮ್ಮ ಮಗಳೆ ಸತತ ಕಾಯುವ ಹರಿಯೇಯೆಂದು ದೃಢದಿ ಭಜಿಸಮ್ಮ ಕೇಳಮ್ಮಾ ಮಗಳೆ ನಿತ್ಯ ಸುಖಿಸಮ್ಮ 10 ಪತಿಯ ಭಕ್ತಿಯೆ ತಾರಕ ನಿನಗೆ ಧೋರಣೆ ಬೇಡಮ್ಮ ಮಗಳೆ ಪತಿಯ ಜರಿಯುತ ವ್ರತಗಳ ಮಾಡೆ ಫಲವೇ ಇಲ್ಲಮ್ಮ ರತಿಯಿಂ ನುಡಿದಿಹೆ ಶೃತಿಗಳಸಾರ ಯುಕ್ತಿಗಳಮ್ಮ ಮಗಳೆ ಮೊರೆಯ ಹೋಗಮ್ಮ 11
--------------
ಕೃಷ್ಣವಿಠಲದಾಸರು
ಮಂದರಧರ ಪಾವನ ಇಂದಿರಾರಮಣನ _ ಗೋವಿಂದ ಎನ್ನಿರೋ ಪ ನಂದನ ಕಂದ ಮುಕುಂದಾಬ್ಧಿಶಯನನ - ಗೋವಿಂದ ಎನ್ನಿರೋ ಅ ಗರಳ ಕಂಧರ ಸಖನನುಜನ ಕೊಂದನ - ಗೋವಿಂದ ಎನ್ನಿರೋಸುರಮುನಿಯನುಜನ ಪಾದವ ಪಿಡಿದನ - ಗೋವಿಂದ ಎನ್ನಿರೋಪರಮ ವೈಷ್ಣವರ ಕೈಲಿ ದಾನವ ಪಿಡಿದನ _ ಗೋವಿಂದ ಎನ್ನಿರೋಉರಗನ ಮಗಳ ಗಂಡಗೆ ಪ್ರಾಣವಿತ್ತನ - ಗೋವಿಂದ ಎನ್ನಿರೋ 1 ಸತಿ ರೂಪ ತಾಳ್ದನ _ ಗೋವಿಂದ ಎನ್ನಿರೋಪಿತನ ಮಾತನು ಶಿರದೊಳಗಾಂತು ನಡೆದನ - ಗೋವಿಂದ ಎನ್ನಿರೋಮತಿವಂತನಾಗಿ ಮಾತೆಯ ಶಿರವ ತರಿದನ - ಗೋವಿಂದ ಎನ್ನಿರೋ 2 ಕರೆತರಿಸಿದ ಮಾವನ ಕೊಂದಾತನ - ಗೋವಿಂದ ಎನ್ನಿರೋಧರೆಯ ಒಯ್ದನ ಕಾಯಗಳೆದನ - ಗೋವಿಂದ ಎನ್ನಿರೋಈರೇಳು ಭುವನಗಳ ಉದರದೊಳಿಟ್ಟಹನ - ಗೋವಿಂದ ಎನ್ನಿರೋಮಾರಜನಕ ಕಾಗಿನೆಲೆಯಾದಿಕೇಶವನ - ಗೋವಿಂದ ಎನ್ನಿರೋ 3
--------------
ಕನಕದಾಸ
ಮಾನಿನಿ ರನ್ನೆ ತಾನ್ಯಾಕೆ ಬಾರನುನೀನೆ ವಿಚಾರಿಸು ಇಬ್ಬರ ನ್ಯಾಯವ ಪ ಮಗಳಿಗೆ ಮಗಳಾದ ಮಗಳಿಗಳಿಯನಾದಮಗಳ ಗಂಡಗೆ ಭಾವ ಮಾವನಾದುದ ಕೇಳಿನಾ ನಿನ್ನ ಪಾದಕ್ಕೆ ಬಂದೆ ಶ್ರೀಹರಿಯೆ 1 ವೈರಿಗೆ ವೈರಿಯಾದೆ ವೈರಿಗೆ ಸುತನಾದೆವೈರಿ ಗಂಡಗೆ ತನ್ನ ಮಗಳ ಕೊಟ್ಟುದ ಕೇಳಿನಾ ನಿನ್ನ ಪಾದಕೆ ಬಂದೆ ಶ್ರೀಹರಿಯೆ 2 ಆನಿ ಬಿದ್ದರ ತನ್ನ ಗ್ಯಾನದಿಂದೇಳುವುದುಏನು ಮಾಡಿದರು ಅದರ ಭಾವ ಹಿಂಗದುಜ್ಞಾನವಂತ ಕಾಗಿನೆಲೆಯಾದಿಕೇಶವರಾಯ ಮುನಿದು ಪೋದನೆ 3
--------------
ಕನಕದಾಸ
ಆಳಬೇಕೈ ಸುಮತಿ ಪತಿವ್ರತೆಯಜಾಳಿಸಬೇಕೈ ಕುಬುದ್ಧಿಯ ಬುಧರು ಪ.ನಾಗರಕ್ಷಕನಪಾದಹೊಂದಿ ವಿಷಯ ಸ್ವಾರ್ಥನೀಗಿಹ ಮಡದಿಯ ಕೂಡಬೇಕೈಭಾಗವತರನು ಮಲಿನಿಪ ಮೋಹಿಯಮೂಗು ಮುಂದಲೆ ಮೊಲೆ ಕೊಯಿದಟ್ಟಬೇಕೈ 1ಶೀಲವಿಡಿದು ನವನಾರೇರ ಸಖ್ಯದಲಿಆಲಯನಡೆಸುವಳಿರಲಿಬೇಕಯ್ಯಆಲಿಕುಣಿಸಿ ನವ ಪುರುಷರ ಕಂಡು ತಾಮ್ಯಾಲೆ ಬೀಳುವಳಜಿಹ್ವೆಸೀಳಬೇಕೈ2ಷಂಡಗಂಡಗೆ ಹಿತ ಹೇಳಿ ಅಂಗವದಂಡಿಸಿ ಕೊಳುವಳ ನಂಬಬೇಕೈಕಂಡ ಬೀದಿಲಿ ಸಾಧು ಕೊಂಡೆಯಾಡುವಳಮಂಡೆಬೋಳಿಸಿ ಕತ್ತೆನೇರಿಸಬೇಕೈ3ಮನೆಗೆಲಸದಲಿಟ್ಟು ಮಹಾತ್ಮರ ಸೇವೆಗೆಂದೂದಣಿಯದ ರಂಭೆಯ ಒಲಿಸಬೇಕುಅಣಕಿಸಿ ಒಲಿದರ ನೀಚಾನುಕೂಲೆಯಾದತನಗಲ್ಲದವಳ ಹೊಳೆ ನೂಕಬೇಕೈ 4ಶಶಿರವಿರಾಶಿ ಮೈ ಹೊಳವಿಲಿ ಮೆರೆವಕುಶಲಗೆ ಮನವಿಟ್ಟ ಜಾಣೆ ಬೇಕೈಪ್ರಸನ್ನವೆಂಕಟಪತಿಯಾಕಾರ ನೋಡಿ ತಾಅಶರೀರನೆಂಬಳ್ಗೆ ವಿಷವಿಕ್ಕಿರೈ 5
--------------
ಪ್ರಸನ್ನವೆಂಕಟದಾಸರು
ಜಯಜಯ ಶ್ರೀ ರಾಮ ನಮೋ |ಜಯ ಜಯ ಶ್ರೀ ಕೃಷ್ಣ ನಮೋ ಪ.ಸಿರಿಯರಸನು ಶೃಂಗಾರವ ಮಾಡಿ |ಸಿರಿಗಂಧವನೆ ಹಣೆಗಿಟ್ಟು ||ತರುಣ ತುಳಸಿ ವನಮಾಲೆಯ ಧರಿಸಿ |ಹರಿತುರುಕಾಯಲು ಹೊರಗೆ ಹೊರಟನು1ಹೊತ್ತು ಹೋಯಿತುತುರು ಬಿಡಿಯೆನ್ನುತ |ಸಾತ್ತ್ವತ ನುಡಿದನು ಗೋಪಿಯೊಡನೆ ||ತುತ್ತುರು ತುತ್ತುರು ತುರುತುರುಯೆನ್ನುತ |ಒತ್ತಿ ಸ್ವರಗಳನು ಪೊಂಗೊಳಲೂದುತ 2ವನಿತೆ ಸಟ್ಟುಗದೊಳು ಅಕ್ಕಿಯ ತೊಳಸಿ |ಒನಕೆಯಿಂದಓಗರ ಹದನೋಡಿ ||ಮಿನುಗುವ ಸೀರೆಯ ತಲೆಗೆ ಸುತ್ತಿಕೊಂಡು |ವನಕೆ ಹೋಗಲೆಂದು ಹೊರಗೆ ಹೊರಟಳು 3ಹರಿಸ್ವರವೆನ್ನುತ ಒಬ್ಬಳುಕೇಳಿನೆರೆಮನೆಗೆ ಹೋಗಿ ಕಡ ಕೇಳಿದಳು ||ಒರಳು ಕೊಡುವಿರಾ ಅರಸಿನ ಅರೆದು |ಮರಳಿ ಬೇಗ ತಂದೀವೆನೆನುತಲಿ 4ಹಸುವಿಗೆ ಇಟ್ಟಲು ಹಾಲುಓಗರ |ಬಿಸಿಮಡ್ಡಿಯ ಗಂಡಗೆ ಚಾಚಿ ||ಸೊಸೆಯನು ಅಟ್ಟಿಸಿ ತೊತ್ತನು ಪಾಲಿಸಿಮೊಸರ ಕಾಸಿ ಹೆಪ್ಪ ಹಾಕಿದೊಳೊಬ್ಬಳು 5ಗಿಳಿಗೆ ಹಾಸಿದಳು ಹಾಸು ಮಂಚವನು |ಅಳಿಯನ ಪಂಜರದೊಳಗಿರಿಸಿ ||ತಳಿಗೆಯಲ್ಲಿ ತಮ್ಮನ ಮಲಗಿಸಿ ತೊಟ್ಟಿ - |ಲೊಳಗೆ ಎಡೆಯನು ಮಾಡಿದಳೊಬ್ಬಳು 6ಅಟ್ಟವೆಂದು ಹತ್ತಿ ಅಗಳಿಯ ಮೇಲೇಇಟ್ಟಳು ಸಾದೆಂದು ಸಗಣಿಯನು ||ಕಟ್ಟಬಾಯಿಗೆ ಕಾಡಿಗೆಹಚ್ಚಿ |ಕೃಷ್ಣನ ಸ್ಮರಿಸುತ ಹೊರಗೆ ಹೊರಟಳು 7ಅಂಗನೆ ಚೌರಿಯು ಕಾಲಿಗೆ ತಗುಲಿಸಿ |ಮುಂಗೈಯಲಿ ತಾಳಿಯ ಬಿಗಿದು ||ಸಿಂಗರ ಸರವನು ನಡುವಿಗೆಕಟ್ಟಿ |ರಂಗನ ಸ್ಮರಿಸುತ ಹೊರಟಳೊಬ್ಬಳು 8ಕಟ್ಟಿ ಮುತ್ತಿನೋಲೆ ಮೊಣಕಾಲ್ಗಳಿಗೆ |ಗಟ್ಟಿ ಕಂಕಣವ ಕಿವಿಗಿಟ್ಟು ||ತೊಟ್ಟಿಲೊಳಗೆ ಶಿಶು ಅಳುವುದ ಕಂಡು |ಕಟ್ಟಿದ ನೆಲುವನು ತೂಗಿದಳೊಬ್ಬಳು 9ತರುಣಿಯೊಬ್ಬ ಸಂನ್ಯಾಸಿಯ ಕಂಡು |ನೆರೆಮನೆ ಕೂಸೆಂದೆತ್ತ ಬರಲು ||ಅರಿದಾವ ಗಾಳಿ ಸೋಕಿತೆನುತಲಿ |ಪುರಂದರವಿಠಲನು ನಗುತಿದ್ದನು ಸಖಿ 10
--------------
ಪುರಂದರದಾಸರು