ಯತಿಗಳು
ಇರುವರ್ಯತಿಗಳ್ಹನ್ನೆರಡು ಮಂದಿ
ರಘುವ(ರ) ಅಕ್ಷೋಭ್ಯತೀರ್ಥರ ನಡುವೆ ಕುಳಿತಿದ್ದಂಥ
ಟೀಕೆ ಬರೆದ ಜಯ ಮಹರಾಯರಿವರು
ಪಾಲಿಸೆನ್ನನು ಜಯರಾಯ ಪ
ಎತ್ತಿನ ಜನ್ಮದಿ ಬಂದು ಶ್ರೀಮದಾನಂದತೀರ್ಥರಲ್ಲಿದ್ದು
ಶಿಷ್ಯತ್ವ ವಹಿಸಿಕೊಂಡು
ಬಿಟ್ಟು ಹರಿದಿನ ಮೇವು ನೀರನೆ ಪುಸ್ತಕದ
ಗಂಟ್ಹೊತ್ತು ತಿರುಗುತ
ತತ್ವಜ್ಞಾನವ ತಿಳಿದು ದ್ವಾದಶ ಸ್ತೋತ್ರ ಹೇ
ಳುತ ಪ್ರಕಟವಾದರು 1
ಗೋವುಸುತನ ಜನ್ಮ ನೀಗಿ ಮಂಗಳವೇಡಿ
ಸಾಹುಕಾರನ ಸುತನಾಗಿ
ತೇಜಿಯನೇರಿ ಮಾ(ಮಹಾ?) ನದಿ ಮಧ್ಯದಲಿ
ಮಂಡಿಬಾಗಿ ನೀರನು ಕುಡಿಯ-
ಲಾಕ್ಷಣ ನೋಡಿ ಕರೆತರಲವರ ಗುರುಗಳ
ಪಾದಕÀ್ವಂದನೆ ಮಾಡಿ ನಿಂತರು 2
ಅಕ್ಷೋಭ್ಯತೀರ್ಥರು ಆ ಮಹಿಮರ ನೋಡಿ
ಕೊಟ್ಟು ಕಾಯ್ಕರದಲಿ
ಜುಟ್ಟು ಜನಿವಾರವನು ಕಿತ್ತೆ ಕಾವಿಶಾಟಿಗಳನು
ಉಟ್ಟು ದಂಡ ಕಾಷ್ಠವ್ಹಿಡಿದು
ಶ್ರೇಷ್ಠಯತಿ ಆಶ್ರಮದಿ ಕುಳಿತಿರೆ ಹೆತ್ತವರು
ಹುಡುಕುತ್ತ ಬಂದರು 3
ಕಂಡಕಂಡಂತೆ ಮಾತುಗಳಾಡಿ ಗುರುಗಳಿಗೆ
ಧೋಂಡು ರಘುನಾಥನ ಕರಕೊಂಡು
ಹಿಂದಕೆ ಹೋಗಿ ಹೆಂಡತಿ ಸಹಿತೆರೆದು ಪ್ರಸ್ತ
ಮಂಡಿಗಿ ಮೃಷ್ಟಾನ್ನ ಉಣಿಸಿ
ಚೆಂದದ್ವಸ್ತ್ರಾಭರಣ ಕೊಟ್ಟುರುಟಣೆಯ
ಮಾಡಿಸ್ಯಾರತಿಯ ಬೆಳಗೋರು 4
ಸುಪ್ಪತ್ತಿಗೆಯು ಮಂಚ ಕುತ್ತಣಿ ಹಾಸಿಕೆಯಲ್ಲಿ
ಇಟ್ಟು ತಾಂಬೂಲ ಬು-
ಕ್ಕಿ ್ಹಟ್ಟು ಪರಿಮಳ ಗಂಧ ಸಕ್ಕರೆ ಕ್ಷೀರಗಳು ಲಡ್ಡಿಗೆ
ಅಚ್ಚಮಲ್ಲಿಗೆ ಮಾಲೆ ಫಲಗಳು
ರತ್ನ ಜ್ಯೋತಿ ಪ್ರಕಾಶದೊಳಗುತ್ತಮರು
ಕುಳಿತಿರಲರ್ಥಿಯಿಂದಲಿ 5
ಮಡದಿ ಮಂಚಕೆ ಬಂದ ಸಡಗರವನು ನೋಡಿ
ಹೆಡೆಯ ತೆಗೆದು ಕಣ್ಣು ಬಿಡುತ ವಿಷನಾಲಿಗೆಯ
ಚಾಚುತಾರ್ಭಟಿಸಿ ಬರುತಿರಲ-
ಸಾಧ್ಯಸರ್ಪವು ಕಡಿವುದೆನುತೆದೆ ಒಡೆದು ಕೂಗಲು
ಹಡೆದವರು ಬಾಯ್ಬಿಡುತ ಬಂದರು 6
ಹಾವಾಗ್ಹರಿದು ಹುತ್ತವ ಸೇರಿಕೊಂಬುವೋದೀಗ
ನಾವು ಮಾಡಿದಪರಾಧ
ಕ್ಷಮಿಸಬೇಕೆನುತಲಿ ಬೇಡಿಕೊಂಡಾಕ್ಷಣದಿ ಮಗನ
ನೋಡಿ ಕರೆತಂದಾಗ
ಅಕ್ಷೋಭ್ಯರಾಯರಂಘ್ರಿಚರಣಕೊಪ್ಪಿಸಿ ನಾವು
ಧನ್ಯರಾದೆವೆಂದರು 7
ಅತಿ ಬ್ಯಾಗದಿಂದವರಿಗ್ಯತಿ ಆಶ್ರಮವಕೊಟ್ಟು ದೇ-
ವತಾ ಪೂಜೆಗಧಿಕಾರ ಮಾಡಲು
ಗುರುಗಳು ಪಾಂಡಿತ್ಯದಿ (ಇ)ವರಿಗೆ ಪ್ರತಿಯು ಇಲ್ಲ-
ವೆಂದೆನಿಸಿ ಮೆರೆವರು
ಪತಿತರನೆ ಪಾವನವ ಮಾಡಿ ಸದ್ಗತಿಯ ಕೊಡುವ
ಸಜ್ಜನ ಶಿರೋಮಣಿ 8
ಮಧ್ವರಾಯರು ಮಾಡಿದಂಥ ಗ್ರಂಥಗಳಿಗೆ
ತಿದ್ದಿ ಟೀಕೆ ಟಿಪ್ಪಣಿ ಮಾಡಿ
ಪದ್ಮನಾಭ ಭೀಮೇಶಕೃಷ್ಣಗೆ
ಪರಮ ಭಕ್ತರೆನಿಸಿ ಮೆರೆವರು
ವಿದ್ಯಾರಣ್ಯನ ಗರುವ ಮುರಿದು ಪ್ರಸಿದ್ಧರೆನಿಸೋರು
ಸರುವ ಲೋಕದಿ 9