ಶಿಸ್ತಿಗೆ ಅಲಂಕಾರವು ಪ
ಗೃಹಸ್ಥರಲ್ಲಿ ವ್ಯಾಜ್ಯವು
ನಾಸ್ತಿ ಭಕ್ಷ್ಯ ಭೋಜ್ಯವು ಅ.ಪ
ನೀರು ತುಪ್ಪ ಬಡಿಸುತ 1
ಹಪ್ಪಳ ಮುರಿದು ಹಾಕಿಸಿ
ಅತಿಥಿಗಳನು ನೂಕಿಸಿ
ತುಪ್ಪದ ಸೌಟು ತೋರಿಸಿ
ಉಪ್ಪು ಚಟ್ನಿ ಹೆಚ್ಚಿಸಿ 2
ಮೂರು ಗಂಟೆಯೂಟವು
ಮೂಢತನದೋಡಾಟವು
ವೋರೆ ವೋರೆ ನೋಟವು
ಸಾರು ಅನ್ನಾ ಕಾಟವು 3
ಎಣ್ಣೆ ವಗ್ಗರಣೆ ಎಲ್ಲಕು
ಅನ್ನ ಹೊತ್ತಿ ಇರುವುದು
ಸನ್ನೆ ಸೈಯಿಗೆಯೇ ಬಲ 4
ಸಾಲದಡಿಗೆ ಕಾಯಿಪಲ್ಯ
ಬೇಯಲಿಲ್ಲ ವೊಂದಾದರು
ರಾಯ ಗುರುರಾಮವಿಠಲ ಬಲ್ಲ ಉ-
ಪಾಯಗಾರರು ಬೀಗರು 5