ನಮ್ಮ ನಿಮ್ಮಗೊಂದಾದ ಮಾತು
ಬ್ರಹ್ಮಾದಿಗಳು ಹೋದರು ಸೋತು
ಒಮ್ಮನಾದರೆ ತಿಳಿವದಂತು 1
ಬಿಟ್ಟು ಕೊಡೊ ನಿನ್ನ ಬಾಜಿ
ಗಂಟುಹಾಕಿಹೆ ಬಲು ಗಜಿಬಿಜಿ
ಮುಟ್ಟಲಾರದು ಮೊನೆ ಸಣ್ಣ ಸೂಜಿ
ಗುಟ್ಟು ಹೇಳೊ ಸದ್ಗುರು ದೇವಾಜಿ 2
ನಮ್ಮ ನಿಮ್ಮಳಗ್ಯಾಕೆ ತೊಡಕು
ಇಮ್ಮನಾದರೆ ಹುಟ್ಟಿತು ಒಡಕು
ಹಮ್ಮು ಎನ್ನೊಳಗಿಲ್ಲ ನೀ ಹುಡುಕು
ಸುಮ್ಮನ್ಯಾಕಿದು ಶ್ರಮೆಯ ತಿಡುಕು 3
ಗುರು ಹೇಳಿದ ಮಾತಿಗೆ ಮುಟ್ಟಿ
ತೋರಿ ಕೊಡಬೇಕು ನೀನೆ ಗಟ್ಟಿ
ಅರಿತ ಮ್ಯಾಲೆ ಮಿಸುಕನು ತುಟ್ಟಿ
ಖರೆ ಮಾಡಿಕೊ ಜಗಜಟ್ಟಿ 4
ಒಂದು ಮಾತು ಎಂಬುದು ಬಲ್ಲಿ
ಸಂದ ಸಂದೇಹ್ಯಾರಿಸೊ ನೀ ಇಲ್ಲಿ
ಕಂದ ಮಹಿಪತಿ ಮನದಲ್ಲಿ
ಚಂದವಾಗಿರೊ ನೀನೆವೆ ಅಲ್ಲಿ 5