ಉತ್ತೀರ್ಣವಾಗಲರಿಯರು | ತಮ್ಮ |
ನಿತ್ಯನಿಂದಕ ದುರ್ಜನರಿಗೆ ಸುಜನರು ಪ
ಕೂಲಿಯ ಕೊಂಡು ವಸ್ತ್ರಂಗಳ ರಜಕನು |
ಇಳಯೊಳು ವಗೆವನು ಕೈಗಳಿಂದಲ್ಲದೇ |
ಮಲಿನವಗುಣ ಮೈಲಿಗೆ ಕಾಸು ಕೊಳದೇ |
ಚಲಿಸದೆ ನಾಲಿಗೆಯಿಂದ ತೊಳೆವರಾಗಿ 1
ತ್ರಯದ ಬಾಡಿಗಿಕೊಂಡು ಹೆಚ್ಚುಗಂಟವ ಕೊಳ್ಳ |
ವೈವನು ಹೆಜ್ಜೆಯ ಪಯಣದ ಮುಂದಕ |
ನಯದಿಂದಿವರ ನಿಂದೆ ದೋಷ ಭಾರವ ಹೊತ್ತು |
ಭಯವಹಾನಂತ ಜನ್ಮವ ಸೋಸುವರಾಗಿ 2
ಧರೆಯೊಳು ತಮ್ಮನ್ನ ತಾ ಉಂಡು ಬುಧರಿಗೆ |
ಪರಮಸುಖವ ಕೊಟ್ಟು ದುಃಖವ ಕೊಂಬರು |
ಗುರು ಮಹಿಪತಿಸುತ ಪ್ರಭು ಸ್ಮರಣೆಯನು ಬಿಟ್ಟು |
ಇರಳ್ಹಗಲುದ್ಯೋಗ ಇದೇ ಮಾಡುವರಾಗಿ 3