ಕೋಲ ಕೋಲೆನ್ನಿ ಕೋಲ ಕೋಲ ಕೋಲೆನ್ನಿ ಕೋಲಕೋಲೆಂದು ಹರಿಯ ಪಾಡುವರು ಎಷ್ಟಪ.
ನಾಗಶಯನನ ಮುಂದೆ ಪೂಗಿ ಫಲಗಳ ಇರಿಸಿನಾಗವೇಣಿಯರು ಸಾಗುವರು ಎಷ್ಟ 1
ಪಂಕಜಾಕ್ಷನ ಮುಂದೆ ಕುಂಕುಮ ಅರಿಷಿಣ ಪಿಡಿದುಕಂಕಣದ ಕೈಯ ಶಂಕಿನಿಯರೆಷ್ಟ2
ಅಂಬುಜಾಕ್ಷನ ಮುಂದೆ ತಾಂಬೂಲ ತಬಕಗಳುಸಂಭ್ರಮದಿ ಧರಿಸಿದ ರಂಭೆಯರು ಎಷ್ಟ3
ಮಂದಗÀಮನೆಯರ ಮುಂದೆಗಂಧ ಕಸ್ತೂರಿ ಪುನಗುಛsÀಂದದಲಿ ಧರಿಸಿ ಮುಂದಾಗÀುವರೆಷ್ಟ4
ಚಲ್ವ ರಂಗನ ಮುಂದೆ ಮಲ್ಲಿಗೆ ಹೂವಿನ ಝಲ್ಲೆಗಳ ಧರಿಸಿದ ನಲ್ಲೆಯರು ಎಷ್ಟ 5
ಬುಕ್ಕಿಟ್ಟು ಮೊದಲಾಗಿ ವಿಶಿಷ್ಠ ಪರಿಮಳ ಧರಿಸಿಕೃಷ್ಣರಾಯನ ಮುಂದೆ ನಡೆವೋರು ಎಷ್ಟ6
ಕ್ಯಾದಿಗೆ ಸಂಪಿಗೆ ಊದಿನ ಖಡ್ಡಿಗಳುಮುದದಲಿ ಧರಿಸಿ ಮುಂದಾಗುವರಷ್ಟ7
ಉತ್ತತ್ತಿಕದಳಿ ಜಂಬುದ್ರಾಕ್ಷ ಚೂತÀ ಫಲ ಹೊತ್ತುಹರುಷದಲ್ಲಿ ಮಿತ್ರೆಯರು ಸಾಗುವರೆಷ್ಟ8
ಹಾಲು ಮೊಸರಿನ ಕುಂಭ ಬಾಲೆಯರು ಧರಿಸುತ ಸಾಲು ಸಾಲಾಗಿ ಸಾಗುವರೆಷ್ಟ 9
ಬೆಂಡು ಬತ್ತಾಸ ದುಂಡುಗಡಲೆ ಕಬ್ಬುತಂಡ ತಂಡದಲಿ ಹಿಡಿದವರು ಎಷ್ಟ10
ರಂಗರಾಯನ ಮುಂದೆ ಗಂಗೋದಕ ಧರಿಸಿಶೃಂಗಾರದಿಂದ ಸಾಗಿದವರು ಎಷ್ಟ11
ಚಲ್ವರಮಿಅರಸಗೆ ಸಲ್ಲಿಸಬೇಕೆಂದುಕಲ್ಲು ಸಕ್ಕರೆ ಹೊತ್ತ ನಲ್ಲೆಯರು ಎಷ್ಟ 12