ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗೇ ಜನನೀ ಮಂಗಳರೂಪಿಣಿ ತುಂಗ ಮಹಿಮನ ಪಾದಾಂಗುಳಿಜಾತೆ ಪ ಸಂಗತಿಯರುಹಲು ಬಂದಿರುವೆವು ಕೃಪಾ ಪಾಂಗವ ತೋರೆಲೆ ಇಂಗಿತವರಿತು ಅ.ಪ ನಾಲ್ಕು ಮೊಗನು ಹರಿ ಕಾಲಿಗೆ ಕೆಡುಹಲು ಶೂಲಧರನ ಶಿರ ಆಲಯ ಮಾಡಿದೆ ಶೈಲದಂತಿಹ ಪಾಪ ಜಾಲಿಸಿ ಕಳೆಯುವೆ ಪೇಳಲಳವೆ ನಿನ್ನ ಶೀಲವ ಸುಲಭದಿ 1 ಚಾರು ನದಿಗಳು ಹೇರಳವಿದ್ದರು ಭಾರತ ದೇಶದಿ ಭಾಗ್ಯದೇವತೆ ನೀ ದೂರ ದೂರ ದೇಶಗಳಲಿ ನೆಲೆಸಿಹ ಧೀರರು ನಿನ್ನಯ ಕೋರುತಲಿರುವರು 2 ಅಂಗಳದಲಿ ಬಿದ್ದು ಹರಿವ ಜಲವು ನಿನ್ನ ಸಂಗದಿ ಪರಮಮಂಗಲ್ಯವ ಪಡೆವುದು ಶೃಂಗಾರದ ನಿಧಿ ರಂಗನ ಸೇವೆಗೆ ಗಂಗೇ ಎನ್ನಂತರಂಗವ ಶೋಧಿಸೆ 3 ಭೂಮಿಯ ಭೇದಿಸಿ ಸುಂದರ ರೂಪದಿ ಸ್ವಾಮಿ ಶ್ರೀಮಧ್ವರ ಚರಣಕೆ ನಮಿಸಿ ಆ ಮಹಾತ್ಮರ ದರುಶನದಿ ಪ್ರಸನ್ನಳೇ ಕಾಮಿತ ಕರುಣಿಸೇ ತ್ರಿಕರಣ ಶುದ್ಧಿಯ 4
--------------
ವಿದ್ಯಾಪ್ರಸನ್ನತೀರ್ಥರು
ಜಯದೇವಿ ಜಯದೇವಿ ಜಯ ಪಾವನಗಂಗೇ | ಜಯಜಯ ತ್ರಿಪಥಗಾಮಿನಿ ಜಯ ತುಂಗತರಂಗೇ ಪ ಆದಿಲಿ ಶ್ರೀಹರಿ ಕೋಮಲ ಪದನಖದಿಂದೊಗದು | ಸಾಧಿನಿ ವಾರಿಜಭವನಾ ಕರಪಾತ್ರಕೆ ಬಂದು | ಸಾದರದಿಂದಾಶಿವನ ಕೆಂಜೆಡೆಯೊಳು ನಿಂದು | ಮೇದಿನಿಗಿಳಿದು ನೀಬಂದೆ ಭಗೀರಥನೃಪಗೊಲಿದು 1 ಕಾಶಿಪ್ರಯಾಗದಿ ನಿಂದು ಉದ್ದರಿಸುತ ಕೆಲರಾ | ಆಶೆಯ ಪೂರಿಸಲಾಗಿ ದಕ್ಷಿಣ ದಿಶೆದವರಾ | ರಾಶಿಯ ಕನ್ಯಾ ಮೆಟ್ಟಲು ಸುರಗುರು ಗಂಭೀರಾ | ಭಾಶಿಶಿ ತೋರಿದೆ ಬಂದು ಕೃಷ್ಣವೇಣಿಲಿ ಸದರಾ 2 ಹರಿಹರ ದೇವರು ದ್ರವರೂಪದಿ ಹರಿವುತಲೀ | ನೆರೆನೀಕೂಡಿದ ಸಂಭ್ರಮ ಏನೆಂದುಸುರಲಿ | ದರುಶನ ಮಾತ್ರದಲಾದೆನು ಮುಕ್ತನು ಭವದಲಿ | ಗುರು ಮಹೀಪತಿಸುತ ಎನ್ನನು ರಕ್ಷಿಸು ಕರುಣದಲಿ |3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಹಿ ಪಾಹಿ ಮುಕುಂದ ಕೇಶವ ಪಾಹಿ ಮುರಹರ ಮಾಧವಾಪಾಹಿ ಗೋಕುಲವಾಸ ಪಾವನ ಪಾಹಿ ಕೃಷ್ಣ ಜನಾರ್ದನಾಪಾಹಿ ಭಕ್ತಮನೋಹರಾಕೃತೆ ಪಾಹಿ ಶ್ರೀಧರ ವಾಮನಾಪಾಹಿ ಪಂಕಜನೇತ್ರ ಜಯಜಯ ಪಾಹಿ ವೆಂಕಟನಾಯಕಾ1ಪಾರರಹಿತ ಭವಾಬ್ಭಿ ಮಧ್ಯ ವಿಹಾರವೇಷ ವಿನೋದಿನಂದಾರ ಪುತ್ರ ಧನಾಲಯಾದಿಷು ಸಾರಮತಿಮತಿದುಃಖಿನಂಕ್ರೂರ ಕ್ರೋಧಕಷಾಯ ಕಲುತ ಕರಣ ಮತ್ಯಭಿಮಾನಿನಂಶ್ರೀ ರಮಣ ವೈಕುಂಠವಲ್ಲಭ ಪಾಹಿ ವೆಂಕಟನಾಯಕಾ 2ರಕ್ಷ ರಕ್ಷ ಮಹೇಶ ಸುರಮುನಿಪಕ್ಷ ಮನ್ಮಥಶಿಕ್ಷಕಾರಕ್ಷ ರವಿಚಂದ್ರಾನಲಾಂಬಕ ರಕ್ಷ ರಜತಗಿರೀಶ್ವರಾರಕ್ಷ ರಾಕ್ಷಸಭಯನಿವಾರಕ ರಕ್ಷ ಕಾಮಿತದಾಯಕಾರಕ್ಷ ಗಜವ್ಯಾಘ್ರಾಜಿನಾಂಬರ ರಕ್ಷ ಶಿವ ಗಂಗಾಧರ 3ಕಾಮಕರಿಪದ ಮರ್ದಿತಂ ತನು ದಾಮ ಬಂಧನ ಪೀಡಿತಂತಾಮಸಂ ತ್ವತ್ಪಾದ ಸೇವಾ ನಾಮಮಾತ್ರ ವಿವರ್ಜಿತಂಭೀಮ ರವಿಜಭಯಾತುರಂ ಕುರು ಕಾಮಹರ ತವ ಸೇವಕಂವ್ಯೋಮಕೇಶ ವಿರಿಂಚಿ ವಿಬುಧಸ್ತೋಮ ಶಿವಗಂಗಾಧರ 4ವಾಸುದೇವ ವರೇಣ್ಯ ಪದ್ಮನಾಭ ಸುರೇಶ ಕ್ಲೇಶವಿಭಂಜನಭಾಸಮಾನ ಭವಾಬ್ಧಿತಾರಕ ದಾಸಪದ್ಮದಿವಾಕರದೇಶಕಾಲಾತೀತ ನಿರುಪಮ ಪಾಹಿ ವೆಂಕಟನಾಯಕಾ 5ಶರಣಜನ ಸುರಕುಜ ತವಾಮಲ ಚರಣಪಂಕಜ ಪಂಜರೇವಿರಜೆವಿಶತು ಮನಃಸ್ಥಿರಂ ಮಮ ಕುರು ತಥೈವ ಕೃಪಾಕರಪರಮಕಾರಣ ಪರತರಾತ್ಪರ ಪುರುಷ ಪ್ರಕೃತಿಪ್ರವರ್ತಕಾಸರಸಿಜೋದ್ಭವಸ್ತಂಭ ವ್ಯಾಪಕ ಪಾಹಿ ವೆಂಕಟನಾಯಕ 6ನೀಲಕಂಠ ನಿಧೀಶಮಿತ್ರ ಸುಶೀಲ ಸಾಂಬ ಮೃಗ ಫಣಿ ವರ ಕುಂಡಲಶೂಲಪಾಣಿ ಸುರಾದ್ರಿಚಾಪ ಜಟಾಲತಾಪರಿಶೋಭಿತಕೀಲಿತಾಮರವೈರಿಪುರ ನಿರ್ಮೂಲ ಶಿವಗಂಗಾಧರ 7ದೇಹಿ ದಾಸ್ಯಮನಾಮಯಂ ಹರ ದೇಹಿ ಸಾಧುಸಮಾಗಮಂದೇಹಿ ತವಚರಿತಾಮೃತಂ ಭವ ನಿತ್ಯ ನಿರೋಗತಾಂದೇಹಿ ಶಿವಗಂಗೇಶ ತಿರುಪತಿಧಾಮ ವೆಂಕಟನಾಯಕ 8ಓಂ ಯಮಳಾರ್ಜುನಭಂಜನಾಯ ನಮಃ
--------------
ತಿಮ್ಮಪ್ಪದಾಸರು
ಶಂಭೋ ಪಾಲಯ ಮಾಂವಿಭೋ ಶಂಭೋ ಪಾಲಯ ದಂಭೋಳಿಧರಾದಿ ಮೌಳಿಜೃಂಭಿತಾಂಘ್ರಿ ಸರೋರುಹ ಪ ಇಂದಿರಾವಲ್ಲಭ ಮಿತ್ರ ಕಂದರ್ಪಕೋಟಿಭಾಗಾತ್ರ ನಿಂದಿತಾಘ ಸುಪವಿತ್ರ ಬೃಂದಿತ ಭುವನಸೂತ್ರ 1 ಗಂಗೇಂದುಮೌಳೇ ತ್ರಿಣೇತ್ರ ಭೃಂಗೀಶ ನಾಟ್ಯ ವಿಚಿತ್ರ ತುಂಗ ರಜತಗಿರಿತ್ರ ಮಂಗಳಾನಂತಚರಿತ್ರ 2 ವೈಕುಂಠನಿಲಯ ಬಾಣ ಕಾಕೋಲ ಕಂಠಾಭರಣ ಕರ್ಣ ಆಕಲಿತ ಗಜಾಜಿನ 3 ಮಾಲಿತ ಕರೋಟಿಧರ ಪಾಲಿತ ಲೋಕಸಾಕಾರ ಆಲಿಂಗಿತಾಂಗನಾಕಾರ ಶೂಲಾದ್ಯುದಾಯುಧಕರ 4 ರಜತೇತರಾದ್ರೀಷ್ವಾಸ ಭಜಿತ ವೆಂಕಟಾದ್ರೀಶಸುಜನ ಹೃತ್ಪದ್ಮಾಧೀಶ ಅಜಿತ ಕಕುದ್ಗಿರಿವಾಸ 5
--------------
ತಿಮ್ಮಪ್ಪದಾಸರು