ಗಂಗೆ-ಕಾವೇರಿ
ವಾತ ಸಂಗದಿ
ಆವ ದೇಶವು ಧನ್ಯವೊ ಪ
ಪಾವನಾತ್ಮಕ ಪ್ರಥಮ ಝಾವದಲಿ ಮಜ್ಜನವ
ಗೈವ ಸುಜನರೇ ಧನ್ಯರೋಅ.ಪ
ಆದಿ ಮಧ್ಯಾಂತರಂಗರ ಸೇವೆಯನು ಮಾಡಿ
ಸಾಧಿಸಿದೆ ಮಾಂಗಲ್ಯವ
ಹೋದ ದೇಶದಿ ಹೊನ್ನು ಮಳೆಗರೆವ ನಿನ್ನ ಪರ
ಮಾದರದಿ ಸೇವಿಸುವರು 1
ಚೋಳ ಮಂಡಲಭಾಗ್ಯ ಪೇಳಸಾಧ್ಯವೆ ನಿನ್ನ
ಲಾಲನೆಯ ಪಡೆಯುತಿರಲು
ಕೇಳುವನು ನಿನ್ನಯ ಕೃಪಾಲವದಿ ತನು ಮನವ
ಕೀಳು ವಿಷಯಕೆ ಬಿಡದಿರು 2
ಪುಣ್ಯನದಿಗಳಲಿ ಬಲು ಗಣ್ಯಸ್ಥಾನವ ಪಡೆದು
ಮಾನ್ಯಳಾಗಿರುವೆ ಮಾತೆ
ನಿನ್ನ ತೀರದಲಿ ನೆಲಸಿಹ ಜನಕೆ ಪರಗತಿ ಪ್ರ
ಸನ್ನ ಮುಖಿ ನಿಶ್ಚಯವಿದು 3