ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೇನು ನೋಡುವಿ ನೆಲಿಯಾ | ಬನ್ನ ಬಿಡಿಸಿ ಕಾಯೋ ಶ್ರೀ ಗುರುರಾಯಾ ಪ ದಾಸಿಗೆ ಕರುಣಿಸಿ ರಾಯರಂಭೆಯ ಮಾಡಿ | ದೋಷವೆಣಿಸುವನೆ ಮುನ್ನಿನ ನೋಡಿ 1 ಸರಿ ತಾ ಹರಿದು ಬಂದು ಗಂಗೆಯಾ ಕೂಡಲಿ | ತಿರುಗಿ ನೂಕುವದೇನು ಜರೆಯುತಲಿ2 ತಂದೆ ಮಹಿಪತಿ ನಿಮ್ಮ ನಂದನನೆನಿಸುತ | ಕುಂದ ನಾರಿಸುವದು ಬಿರುದಿಗುಚಿತಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಳು ಹಿತವಾ ಬಾಳು ಮನವೇ ಸಾಧು ಸಂಗ ಮಾಡು | ಹೇಳತೀರದ ಸ್ವಾನಂದದ ಸುಖಭಾವಿಕಗ ಬಲು ಪಾಡು ಪ ಹೀನ ಕೀಟಕ ಸಂಗದಿಂದ ಭೃಂಗಿಯಾಗಲಿಲ್ಲಾ | ತಾನು ಕಬ್ಬಿಣ ಪರಸವ ಮುಟ್ಟಿ ಚಿನ್ನವಾದುದಲ್ಲಾ 1 ಹಳ್ಳ ಕೊಳ್ಳ ಬಂದು ಕೂಡಿ ಗಂಗೆಯಾಗುವಂತೆ | ಎಲ್ಲ ವೃಕ್ಷವು ಸಂಗದಿಂ ಚಂದನಾಗುದು ಗಾದೆಯ ಮಾತೆ 2 ಕೋಟಿಗೆಂದೇ ಮಾತು ಕೇಳು ನಾಡ ಸಾಧನ್ಯಾಕ | ಪುನರಪಿ ನೀ ಬರಬೇಕ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದ್ವಾದಶನಾಮ ಸ್ತುತಿ ನಿನ್ನ ನೋಡಿ ಧನ್ಯನಾದೆನು ಶ್ರೀರಂಗನಾಥ ಪ ನಿನ್ನ ನೋಡಿ ಧನ್ಯನಾದೆ ಪನ್ನಗಶಯನ ರಂಗ ಮನ್ನಿಸಿ ರಕ್ಷಿಸು ಎನ್ನ ಮುನ್ನಜನ್ಮ ಬಾರದಂತೆ ಅ.ಪ. ಅರ್ಚ ಶೇಷಶಯನ ಲಕ್ಷ್ಮಿಗೆರಗಿ ಕೇಶವ ನಿಮ್ಮ ಸ್ತುತಿಸುವೆ 1 ಆದಿಸೃಷ್ಟಿಯಲ್ಲಿ ಬ್ರಹ್ಮನ ನಾಭಿಕಮಲದಲ್ಲಿ ಸೃಷ್ಟಿಸಿ ವೇದಸಾರವಾದ ಪ್ರಣವ ಓದಿ ಪೇಳಿದ ನಾರಾಯಣ 2 [ಆರ್ತಿ]ಯಿಂದ ಅಜನು ನಿಮ್ಮ ಮೂರ್ತಿಗಾಗಿ ತಪವ ಮಾಡೆ ಮಧುವೈರಿ ಮಾಧವಾ 3 ಪ್ರಣವಾಕಾರ ವಿಮಾನದಲ್ಲಿ ನಾಲ್ಕು ವೇದಶೃಂಗವಿರಲು [ವಿಷ್ಣು] ಪರವಾಸುದೇವರಿಂದ ಬಂದ ಶ್ರೀಗೋವಿಂದ 4 ಸತ್ಯಲೋಕದಲ್ಲಿ ನಿಂತು ನಿತ್ಯಪೂಜೆಯನ್ನು ಗ್ರಹಿಸಿ ಮತ್ತೆ ಇಕ್ಷ್ವಾಕುಗೊಲಿದ ವಿಶ್ವಮೂರುತಿ ವಿಷ್ಣುವೇ 5 ಸರಯು ತಮಸ ತೀರಮಧ್ಯದಿ ಹರಿಯೆ ನಿಮ್ಮನಿರಿಸಿ ದೊರೆಯು ಪರಮಪುರುಷನಿಂದ ಪೂಜೆ ಗ್ರಹಿಸಿದ ಮಧುಸೂದÀನ 6 ರಾಜ್ಯಾಭಿಷೇಕ ಕಾಲದಲ್ಲಿ ರಾಮಚಂದ್ರರು ರಾಕ್ಷಸೇಂದ್ರಗೆ ಕೊಡಲು [ರಾಜ್ಯವ] ಕಾವೇರಿ ಮಧ್ಯದಿನಿಂದು ತ್ರಿಜಗವಳೆದ ತ್ರಿವಿಕ್ರಮ 7 ಫಾಲ್ಗುಣ ಮೀನ ಉತ್ತರ ಫಲ್ಗುನೀ ನಕ್ಷತ್ರದಲ್ಲಿ ಬಾಲನಾಗಿ ಚಂದ್ರಪುಷ್ಕರಿಣಿ ತೀರದಿ ನಿಂದ ವಾಮನ 8 ಜಾಮಾತನೆನಿಸಿ ಗ್ರಹಿಸಿ[ದ] ಶ್ರೀದೇವಿ ಸಹಿತ ಶ್ರೀಧರ 9 ಮಳೆಯನಿಟ್ಟು ಧ್ವಜವಕಟ್ಟಿ ಸುರರ ಕರದು ಯಾಗವ ಮಾಡಿ ಯಾತ್ರದಾನದ [ತಳೆದ] ಹೃದಯವಾಸ ಹೃಷಿಕೇಶವ 10 ವೀರ ಮರುದಿನದಿ ಜಟಾಶೋಧಕರ ಮಂಟಪದಿ ನಿಂದು (?) [ಧೀರ] ಮುದುಕಿಗೊಲಿದು ದಧ್ಯಾನ್ನವ ಉಂಡ ಶ್ರೀಪದ್ಮನಾಭ 11 ನಾಲ್ಕು ದಿವಸದಲ್ಲಿ ನಾಗವೈರಿಯನ್ನು ಏರಿಬಂದು ಕಲ್ಪವೃಕ್ಷವು ಸರ್ಪವಾಹನ ಏರಿದ ದಾಮೋದರ 12 ಆರು ದಿವಸದಲ್ಲಿ ವರಿಯೂರಿಗೆ ಹೋಗಿ ನಿಮ್ಮ ಸಂತೈಸಿ ಮಾಲೆಧರಿಸಿದ ಸಂಕರ್ಷಣ 13 [ಮಾರನೆ] ದಿವಸದಲಿ ಚೂರ್ಣಾಭಿಷೇಕವನು ಧರಿಸಿ ವಾಸುದೇವ 14 ಎಲ್ಲೇಕೆರೆಗೆ ಪೋಗಿ ಭೂಮಿಯೆಲ್ಲ ನೋಡಿ ಹರುಷದಿಂದ ಅ[ಲ್ಲೆ] ತೇಜಿಯನೇರಿ ತೇರಿನೆದುರೆ ಪೇರಿಬಿಟ್ಟ ಪ್ರದ್ಯುಮ್ನ 15 ಪಂಗುನ್ಯತ್ತರವು ಬರಲು ಉಂಗುರವನು ಬೇಡಿತಂದು ಅನಿರುದ್ಧ 16 ತಿಂದ ಪಂಜಿನಪ್ರಹಾರ ಹರುಷದಿಂದ ಪುರುಷೋತ್ತಮ 17 ಪತ್ನಿಯೊಡನೆ ಪ್ರೇಮಕಲಹ ಅರ್ತಿಯಿಂದ ಮಾಡುತಿರಲು ವಿಷ್ಣು ಚಿತ್ತರ ವಾಕ್ಯದಿಂದ ಅರಸಿಗೇರಿದಾ ಅಧೋಕ್ಷಜಾ 18 ಮಂದರೋದ್ಧರ ತನ್ನ ಇಂದಿರೆಸಹಿತವಾಗಿ ಬಂದು ಗೋರಥವನೇರಿ ನಾಲ್ಕುಬೀದಿ ಮೆರೆದ ನಾರಸಿಂಹ 19 ವಾರಿಜಾಕ್ಷ ರಥವನಿಳಿದು ಕಾವೇರಿಯಲ್ಲಿ ತೀರ್ಥವಿತ್ತು ದರ್ಪಣದ ಗೃಹದಿ ನಿಂದ ಅರ್ತಿಯಿಂದ ಅಚ್ಚುತ 20 ಸಪ್ತ ಆವರಣವೆಲ್ಲ ಶಬ್ದವಿಲ್ಲದೆ ಸುತ್ತಿ ಬಂದು ಭಕ್ತ ಭಾಷ್ಯಕಾರರಿಗೊಲಿದ ದುಷ್ಟಮರ್ದನ ಜನಾರ್ಧನ 21 ಪೃಥವಿಯೊಳಗಾಶ್ಚರ್ಯವಾದ ಪ್ರತಿಯಿಲ್ಲದ ಪಲ್ಲಕ್ಕಿಯೇರಿ ಅತಿಶಯದಿಂದ ಬಂದ ಉರಗಶಯನ ಉಪೇಂದ್ರ 22 ಅಂದು ಸುರರ ಛಂದದಿಂದ ಮಂದಿರಕ್ಕೆ ಕಳುಹಿ ರಂಗ ಬಂದು ಭಕ್ತರ ಪಾಪ[ವ] ಪರಿಹರಿಸಿದಾ ಶ್ರೀಹರಿ 23 ಅಷ್ಟು ಚರಿತ್ರೆಯನ್ನು ಕೇಳಿ ಕಟ್ಟಿದ ಕಂಕಣವ ಬಿಚ್ಚಿ ಶ್ರೇಷ್ಠವಾದ ಸ್ಥಾನದಲ್ಲಿ ಮಂತ್ರಿ ಸಹಿತನಿಂದ ಶ್ರೀಕೃಷ್ಣ 24 ದಕ್ಷಿಣಗಂಗೆಯಾಗಿ ನಿಂದು ಭಕ್ತನ ದ್ವೀಪವನ್ನು ನೋಡುತ ಮುಕ್ತಿಮಾರ್ಗವನ್ನು ತೋರಿದ ಭಕ್ತವತ್ಸಲ ವೆಂಕಟರಂಗ 25
--------------
ಯದುಗಿರಿಯಮ್ಮ
ಶ್ರೀ ಮುದ್ದುಮೋಹನದಾಸರು ಮುದದಿ ಪಾಲಿಸೊ | ಮುದ್ದು ಮೋಹನರಾಯಾ | ಮದ್ಗುರುವರ ಪ್ರೀಯಾ ಪ ಮಧ್ವೇಶನ ಪದ ಪದುಮ ಪೂಜಿಪ ಮಧುಪಾ ಪರಿಹರಿಸೆಲೊ ತಾಪಾ ಅ.ಪ. ಜನುಮ ಪೊತ್ತೆ ನೀ ದೊಡ್ಡ ಬಳ್ಳಾಪುರದೀ | ಅನುನಯದಲಿ ಓದೀ |ಗುಣವಂತೆಯು ಕನ್ಯೆಯ ತಾ ಸ್ವೀಕರಿಸೀ | ಕನ್ಯಾಸೆರೆ ಬಿಡಿಸೀ |ವನಜನಾಭನನು ಕಾಣಲು ಮನಮಾಡೀ | ಶ್ರೀ ವರರನು ಬೇಡೀ |ಗಾನ ಲೋಲ ಮುದ್ದು ಮೋಹನ ವಿಠ್ಠಲನಾ ಘನನಾಮ ಪೊತ್ತೆ ನಿನ್ನಾ 1 ಅಂಗಜಗಳು ಕದಲರ್ಧಾಂಗಿಯನಾಳೀ | ಯಾತ್ರೆಗೆ ಮನತಾಳೀ |ಗಂಗೆಯಾತ್ರೆ ಮೂರೊಂದು ಬಾರಿ ಮಾಡೀ | ಉಡುಪಿಗೆ ಬಲುಬಾರೀ | ತುಂಗ ಮಹಿಮ ನಮ್ಮ ವೆಂಕಟ ನಿಲಯನ್ನಾ | ತುಂಗೆ ತೀರಗನನ್ನಾ |ಭಂಗವಿಲ್ಲದಾನೇಕ ಬಾರಿ ನೋಡೀ | ಮಂಗಳಾಂಗನ ಪಾಡೀ 2 ಸಿರಿ ವಿಜಯ ವಿಟ್ಠಲನ ನಿಜಪುರದಲ್ಲೀ | ಸಂಸ್ಥಾಪಿಸುತಲ್ಲೀ |ಪರಮ ಶಿಷ್ಯರಿಗುಪದೇಶಗಳನ್ನಾ | ವಿರಚಿಸಿದಿಯೊ ಘನ್ನಾ |ಪರಿಸರ ಮತ ಸರ್ವೋತ್ತಮವೆಂದೂ | ಸಾರಿದೆ ದಯಾಸಿಂಧೂ 3 ಸಿರಿ ತಂದೆ ಮುದ್ದು ಮೋಹನರಾ | ಉದ್ಧರಿಸಿದ ಧೀರಾ |ಮಧ್ವ ಮತಾಗಮ ಸದ್ವನದಿ ವಿಹಾರ | ಬುಧಜನರಘ ಹರಾ |ವಿದ್ವದಾರ್ಯ ಮುದ್ದು ಮೋಹನ ರಾಯ | ಮುದ ಬೇಡುವೆ ಜೀಯ 4 ಕೃತನಿತ್ಯಾಹ್ನಿಕನಾಗಿ ತೆವಳಿ ಬಂದೂ | ಚಕ್ರದಿ ಕುಳಿತಂದೂ |ವತ್ಸರ ವಿಳಂಬಿ ವದ್ಯ ಕಾರ್ತೀಕದೀ | ಚತುರ್ದಶಿ ನಡುದಿನದಿ|ಅತುಳ ಮಹಿಮ ಗುರುಗೋವಿಂದ ವಿಠಲನ್ನ | ಹೃದಯಾಬ್ಜದಿ ಪವನಾ | ಆತುಮಾಂತರದಿ ಕಾಣುತಲವನಾ | ಕಿತ್ತೊಗೆದೆಯೊ ತನುವಾ 5
--------------
ಗುರುಗೋವಿಂದವಿಠಲರು
ಹರಿ ಪರಮಪುರುಷ ಮಿಕ್ಕಾಮರರೆಲ್ಲ ಅಚ್ಯುತನ ಚರಣಸೇವಕರೆಂದು ನೆರೆ ನಂಬಿರೊ ಪ. ಒಂದುಮನೆಯೊಳೆರೆಡು ಕೇಣಿಯಲ್ಲಿಪ್ಪುವರ ಒಂದಾದರೆಂದು ಬಗೆಯೆ ಬುಧರಿಗುಚಿತವೆ ಇಂದಿರೇಶನು ಭಾಗಭಾಗವ ತಾಳಿ ಒಂದು ಪ್ರತಿಮೆಯೊಳಿದ್ದರೊಂದಾಹರೆ 1 ಒಬ್ಬನಿಂದಲಿ ಸಾಯನೆಂಬೋ ರಕ್ಕಸರೊಲ್ಲರೊಬ್ಬರ ರ್ಧಭಾಗವ ತಾಳಿ ಐತಂದು ಕೊಬ್ಬಮುರಿವರು ಖಳನ ಹರಿಹರರು ತಾವೀಗ ಒಬ್ಬನಿಂದಲಿ ದನುಜನೆಂತಳಿದನು 2 ನರಸಿಂಹನಂತೆ ಕೃಷ್ಣನು ತನ್ನ ಲೀಲೆಯಲಿ ಹರನಂದವ ತಾಳಿ ಗುಹನ ಗೆಲಿದನು ಗಡಾ ಪರಿಪರಿ ವೇಷದಲಿ ನಟನಂತೆ ನಲಿವ ದೇ- ವರದೇವನಿರವನಾವನು ಬಲ್ಲನು 3 ಆವನಂಘ್ರಿಯ ತೀರ್ಥ ಗಂಗೆಯಾದಳು ಭಸ್ಮ ದÉೀವರಿಪುವನು ಗೆಲಿದ ಭೃಗುಮುನೀಂದ್ರನು ಆವವನು ಮೂರ್ಲೋಕದೊಳಧಿಕನೆಂದೊರೆದ ಆ ವಿಷ್ಣು ಹಯವದನ ಹರಿಯಂತೆ 4
--------------
ವಾದಿರಾಜ