ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏತಕೀಪಂಥ ಜಾನಕೀಕಾಂತ ಭೂತಲನಾಥ ಶಾಂತಸುಸ್ವಾಂತ ಪ. ಸೊಮಸಮಾನನೆ ತಾಮರಸೇಕ್ಷಣ ಶ್ರೀಮಾನಿನೀ ಮನೋಮೋಹನ ಸುಂದರ 1 ಅಂಗಜತಾತ ಮಂಗಳಗಾತ್ರ ಗಂಗೆಯಪೆತ್ತ ಉತ್ತುಂಗಮಹಿತ 2 ಮಂದರೋದ್ಧಾರಿ ತಂದೆ ಕಂಸಾರಿ ಬಂದುಮೈದೋರಿ ಪೊರೆಯೆನ್ನ ಶೌರಿ3 ವರಶೇಷಗಿರಿದೊರೆ ಶರಣರ ಈ ಮೊರೆ ಕರಗಿಸಲಾರದೆ ಏನಿದು ಕಲ್ಲೆದೆ 4
--------------
ನಂಜನಗೂಡು ತಿರುಮಲಾಂಬಾ
ದೇವಾ ಬಾರಯ್ಯಾ ವೈಭವದಿ ರಥವನೇರಿ ಸೇವಿಸುವೆನು ಮಧ್ಭಾವದಿ ನೆಲಸೆಂದು ಪಾವನ ಮಣಿಪುರ ಠಾವಿನೊಳಿಹ ಭೂದೇವ ವರ್ಯ ಸಂಶೇವಿತ ಕೇಶವ ಪ ದೇವಗಂಗೆಯಪೆತ್ತ ಪಾವನಗಾತ್ರಧ್ರುವ ಭೂವರೋÀಪಾಸಿತನಾಗಿ ಈ ವಸುಧಿಗೆ ಬಂದು ಪಾವಮಾನ ಶಾಸ್ತ್ರದಿ ಕೋವಿದಯತಿ ವರ ಶ್ರೀ ವಿದ್ಯಾನಿಧಿ ತೀರ್ಥ ಸೇವಿತ ಸಂಸ್ಥಾಪಿತ ಸೇವಕ ಜನ ಸಂಭಾವಿತ ಕಾಮಿತ ವೀವ ಕಾವ ಸದಶಾವತಾರ ನಮೋ ಶ್ರಿವಿರಂಚಿಮುಖ ದೇವನ ಮಿತ ಕಂಚೀವರದನೆ ಪೊರೆ ಶ್ರೀ ವರಕೇಶವ 1 ಕಡು ಶೋಭಿಸುವ ಬಿಳಿಗೊಡೆ ಚಾಮರಾದಿಗಳ ಪಿಡಿದು ಶೇವಿಪ ಜನರೆಡಬಲದಿ ಬರೆ ಸುರರು ಪಂಥsÀವಿಡಿದು ವೇದಪಠಣ ಬಿಡದೆ ಮಾಡುತ ಬರೆ ನುಡಿವ ವಾದ್ಯಗಳಿಂದ ಸಡಗರದಲಿ ದ್ವಿಜಮಡದಿಯರಾರುತಿ ಪಿಡಿದು ಬೆಳಗುತಿರೆ ಕಡು ವೈಭವದಲಿ ಅಡಿಗೆರಗುವೆ ಪಾಲ್ಗಡಲ ಶಯನ ಮೂ- ರಡಿ ರೂಪನೆ ಜಗದೊಡೆಯ ಕೇಶವ 2 ನಂದ ತೀರ್ಥರ ಮತ ಸಿಂಧುವಿಗೆ ಪೂರ್ಣ ಚಂದ್ರರೆನಿಪಯತೀಂದ್ರ ಸತ್ಯ ಪ್ರಮೋದ ರಿಂದ ಪೂಜಿತ ಪದ ದ್ವಂದ್ವ ಮಧ್ಯದೊಳಿಹ ಮಂದಾಕಿನಿಗೆ ಪಿತನೆಂದು ತೋರಿಸಿದಂಥ ಇಂದಿರೆಯರಸನೆ ಮಂದರಧರ ಗೋ ವಿಂದ ಪಾಹಿ ಮುಕುಂದನೆ ಬಾಬಾ- ರೆಂದು ಕರೆವ ದ್ವಿಜ ವೃಂದಮಧ್ಯದಲಿ ಶ್ಯಂದನ ವೇರಿದ ಸುಂದರ ಕೇಶವ 3 ಅಂಬುಜನಾಭನೆ ನಿತಂಬದಿ ಪೊಳೆವ ಪೀ- ತಾಂಬರ ಧೃತ ಶಾತಕುಂಭ ಮಕುಟವದ- ನಾಂಬೋಜವನು ತೋರೋಕುಂಭೀನಸ ಪರಿಯಂಕ ಶಂಭ್ವಾದಿನಮಿತ ನೀಲಾಂಬುಧ ನಿಭಗಾತ್ರ ಕಂಬುಚಕ್ರಸುತ- ದಾಂಬುಜಧರ ಬಲು ಸಂಭ್ರಮದಲಿ ಮುನಿಕುಂಭಜ ಪೂಜಿತ ಕದಂಬ ದುರಿತ ಕಾದಂಬನಿ ಪವನ ಕೃ ಪಾಂಬುಧೆ ಕೇಶವ 4 ಗರುಡ ಮಾರುತರಿಂದ ಪರಶೇವಿತನೆ ಬಾರೊ ಶರಣು ಜನರ ಸುರತರುವೆ ಚನ್ನಕೇಶವ ಧರೆಯೊಳಧಿಕ ಮಣಿಪುರ ಪಂಡಿತಾಗ್ರಣಿ ಸನ್ನುತ ಸರಸಿಜಾಸನ ಪಿತ ಸಿರಿದೇವಿಯು ಈರೆರಡು ರೂಪದಲಿ ಕರದೊಳಗಾರುತಿ ವರಚಾಮರಗಳ ಧರಿಸಿ ಸಿರಿ ' ಕಾರ್ಪರ ನರಹರಿ ' ರೂಪನೆ ಮಾಂ ಪೊರೆವುದು ಕೇಶವ 5
--------------
ಕಾರ್ಪರ ನರಹರಿದಾಸರು
ನಿತ್ಯನಿರ್ಮಲನಿಗೆ ಜಯಮಂಗಳಂ ಶುಭ ಮಂಗಳಂ ಪ ಸತ್ಯಪರಾಕ್ರಮ ಸತ್ಯಚರಿತ್ರಗೆ ಸತ್ಯಕಾಮ ಪುರುಷೋತ್ತಮ ಹರಿಗೆ ಅ.ಪ ಮೂರುರೂಪದಲಿ ವಾರಿಯೊಳಿದ್ದಗೆ ಘೋರವದನ ಬ್ರಹ್ಮಚಾರಿಯಾದವಗೆ ವೀರರ ಕೊಂದಗೆ ಹನುಮವಿನುತಗೆ ಮಾರಜನಕ ಸುಕುಮಾರ ಹಯೇಶಗೆ 1 ವೇದಾಚಲ ಭೂಧರ ನರಹರಿಗೆ ಮೇದಿನಿಯಳೆದಗೆ ಮುನಿಸುತಗೆ ಕೋದಂಡೋತ್ಸುಕ ನಾದಪ್ರಿಯನಿಗೆ ಭೇದವ ಕಲ್ಪಿಸಿದಶ್ವವಾಹನಗೆ 2 ಮಂಗಳರೂಪಗೆ ಈರೈದವತಾರಗೆ ಅಂಗಜತಾತ ಶುಭಾಂಗನಿಗೆ ಮಾಂಗಿರಿಶೃಂಗನಿವಾಸ ರಥಾಂಗಗೆ ಗಂಗೆಯಪೆತ್ತ ಪನ್ನಂಗಶಯನಗೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸೋಯನ್ನ ಪರಾತ್ಪರಾ ಹರಿ ಪ ಪಾಲಿಸೊ ಬುಧಹಿತ ಫಾಲನಯನನುತ ಲೀಲಾನಟನಫಣಿ ಶೈಲ ನಿಳಯ-ಹರಿ ಅ.ಪ. ವೇದಾಪಹಾರಿಯಕಂಡು ಜಲಚರ ರೂಪಿನಿಂದಾ ಖಳನ ಸಂಹರಗೈದು ಜಲಜಸಂಭವನಿಗೆ ಒಲಿದ ಮತ್ಸ್ಯಾವತಾರ 1 ಕರುಣಾವಿಹೀನದಿ ಬಲು ನೊಂದು ಕಂಗೆಡುತಲಿರೆ ಸಿಂಧುಮಥನಗೈದು ಕೂರ್ಮ 2 ದುರುಳ ಹಿರಣ್ಯಾಕ್ಷನೆಂಬುವ-ದೈತ್ಯ-ಧರಣಿಯನ ಪಹಾರಗೈಯಲು ಬೇಗ ಪರಮೇಷ್ಟಿಗೊಲಿದು ಸೂಕರನ ರೂಪವ ತಾಳಿ ಧರಣೀಚೋರನ ಕೊಂದ ಸರಸೀರುಹಾಂಬಕ 3 ಗೈಸಿದ ಬಲು ದುರುಳ ಹಿರಣ್ಯಕನುರವ ನಖದಿಂದ ಸೀಳಿ ಕರುಳಮಾಲೆಯನಿಟ್ಟ ಧುರಧೀರ ನರಹರಿ4 ಅಳೆದು ಈರಡಿಮೂಡಿಲೋಕವ ಮತ್ತೆ ಉಳಿದೊಂದು ಪಾದದಿ ಬಲಿಯ ತಲೆಯನು ಮೆಟ್ಟಿ ನಲಿದು ಗಂಗೆಯಪೆತ್ತ ಚಲುವ ವಾಮನ ರೂಪ 5 ಚಕ್ರದೊಡನೆದುಷ್ಟಭೂಪರಅತಿ ಅಕ್ರಮವನು ಕಂಡು ವಿಕ್ರಮಾನ್ವಿತ ನೃಪ ಚಕ್ರವ ಮುರಿದ ಮುನಿಚಕ್ರರಕ್ಷಕ ರಾಮ 6 ತ್ರಿದಿವೇಶರದೊಡ್ಡ ದೂರಕೇಳುತ ಮನುಜಾಕಾರವ ಧರಿಸಿ ದೈತ್ಯ ವೀರರ ಮಡುಹಿದ ಶ್ರೀ ರಾಮ ಮೂರುತಿ 7 ನೇಗಿಲುಗಳನು ಹಸ್ತದಿಪಿಡಿದು ಬಲವಂತರಾದ ದೈತ್ಯಕುಲವತರಿದು ದಿವಿಜ ಕುಲವ ಸಂರಕ್ಷಿಸಿದ ಜಲಧರ ನಿಭಚೇಲ 8 ಭಾರ ತಾಳದೆ-ಧರಣೀ-ಸೃಷ್ಟೀಶನಲ್ಲಿದೂರಿಡೆ ವೈರಿ ಪುಟ್ಟಿಸಿ ಭೂಭಾರ ಮಟ್ಟುಮಾಡಿದ ಕೃಷ್ಣ9 ವ್ಯಾಪಿಸೆಲೋಕವು ಆಗ ಲಲಿತತೇಜಿಯನೇರಿ ಕಲುಷಾತ್ಮಕರಕೊಂದು ವಿಲಸಿತ ಧರ್ಮವನ್ನು ಸಲಹಿದ ಕಲ್ಕಿರೂಪ 10 ಮುನಿಗೈದಲುಬೇಗ ವರವ್ಯಾಘ್ರಗಿರೀಶನೆ ಶರಣೆಂದಮುನಿಪಗೆ ವರವಿತ್ತು ಸಲಹಿದ ವರದ ವಿಠಲ ಹರಿ11
--------------
ಸರಗೂರು ವೆಂಕಟವರದಾರ್ಯರು