ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿವಾಸರದ ಮಹಿಮೆಯೆನು ಅರಿತಷ್ಟು ಪೇಳುವೆನು ತರಳರಾಡುವ ನುಡಿಯೆಂದು ಗುರುಜನರು ಮನ್ನಿಸಿರಿನ್ನು ಪ. ಹಿಂದೆ ತಾನಜಾಮಿಳನು ಮಂದಮತಿಯಾಗಿ ಜಗದಿ ನಿಂದಿತಾಚಾರದಲಿ ಮನವಿರಿಸಿ ನಲಿದು ಬಂಧುಮಿತ್ರರ ನುಡಿಗೊಂದಿಷ್ಟು ಕಿವಿಗೊಡದೆ ಮನ ಬಂದಂತೆ ಚರಿಸಿದರನು ಮದಮೋಹದಿಂದ 1 ಮಂದಿರವ ನೊಳಪುಗಲು ಗಂಗೆಯಂತು ದಂದುಗದಿನೊಂದು ಮಡದಿ ಮಕ್ಕಳಿಗಾಗಿ ನಿಂದಂತೆ ತಾನುಪವಾಸ ಜಾಗರದಿ ಕಳೆದು ಮರುದಿನ ದ್ವಾದಶೀ2 ಮರಣದಾಹದಿ ಹರಿವ ನೀರ ಕುಡಿಯೇ ಹರಿಗರ್ಪಿಸಿದ ತುಳಸಿದಳವೊಂದದರೊಳಿರೆ ದುರಿತಕೋಟಿಗಳೆಲ್ಲ ದೂರಸಾರೆ 3 ಅಂತ್ಯಕಾಲದೊಳೈತಂದ ಅಂತಕನದೂತರಂ ಕಂಡು ಇಂದಿರೇಶನಾಣತಿಯಂತೆ ಕಿಂಕರರು 4 ಅರಿಯದಾಚರಿಸಿದೊಡಂ ಹರಿವಾಸರದ ಮಹಿಮೆ ಪರಮಪದನಾಥನೇ ವಶನಪ್ಪನಯ್ಯಾ 5 ಹರಿಭಕ್ತ ರುಕ್ಮಾಂಗದನ ಪರಿಭವಿಸೆ ಬರೆ ಮೋಹಿನಿ ತರಳ ಧರ್ಮಾಂಗದನ ಶಿರವತೆಗೆಯೆಂದೆನಲು ವರಧರ್ಮದೇವನೇ ಕರವಿಡಿದು ಪೊರೆದಂ6 ದಶಮಿ ದ್ವಾದಶೀ ದಿನದಲ್ಲಿ ಅಶನವೊಂದೇಸಾರಿ ಏಕಾ ಕುಸುಮನಾಭನಾ ಶೇಷಗಿರಿವಾಸ ಕೈಬಿಡನೊ 7
--------------
ನಂಜನಗೂಡು ತಿರುಮಲಾಂಬಾ