ಅಂದೇನಿಂದೆನುತಾ ಪ
ಒಂದು ಮನದಿ ನಿಂದು ನಂಬ ಬಲ್ಲಡೆ ಸಾಕು|ತನ್ನ|
ಹೊಂದಿದವರ ಕಾವಾ ಇಂದಿರೇಯರಸನು ಅ.ಪ.
ಸಗರ ಕಾರ್ತೀಕನು ಭಗೀರಥ ಮೊದಲಾದಾ|
ಸುಗುಣ ರಾಯರನುಧ್ಧರಿಸಿಹ|
ಜಗದೊಳೀ ಪಾಮರ ಲೋಕದ ಕುಂದವ|
ಬಗೆಯದೇಪಾವನ ಮಾಡುವ ಗಂಗೆಗೆ 1
ರನ್ನಗಣಕು ಪರೀಕ್ಷೆ ಮುಖ್ಯರಾಗಿಹ|
ಮನ್ನೆಣೆಯವರನು ಎಚ್ಚರಿಸಿ|
ಮುನ್ನಿನ ಬೋಧಧಿ ಭಾವಿಕ ಸಾಧಕ|
ರನ್ನು ತಾರಿಸುವ ಸತ್ಸಂಗ ಮಹಿಮೆಗೆ 2
ಹಿಂದಿನ ಶರಣರ ಸಲಹಿದ ದೇವರಿ|
ಗಿಂದೇನು ಮಹಿಮೆಗೆ ಬಲ್ಲವಿಲ್ಲದೇ|
ತಂದೆ ಮಹಿಪತಿ ಸ್ವಾಮಿಯ ನಾಮವ|
ಛಂದದಿ ನೆನೆಯುತ ಇಹಪರ ಪಡೆವುದಕ 3