ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುಮ್ಮ ದುಮ್ಮೆನ್ನಿ ದುಮ್ಮ ಸಾಲವೆನ್ನಿ ಪ ನರಜನ್ಮ ಫಾಲ್ಗುಣ ಪೌರ್ಣಿಮೆ ಬಂದಿದೆ | ಮರಿಯ ಬ್ಯಾಡಿ ತನು ಧನ ಮನದೀ | ಹರಿದಾಸ ರಾಹವರೆಲ್ಲರು ಹೋಳಿಯ | ಪರಮಾನಂದದ ಲ್ಯಾಡುವ ಬನ್ನಿರಣ್ಣಾ 1 ಜ್ಞಾನಾಗ್ನಿಯ ಪ್ರಜ್ವಲದಿಂದಾ | ಹಮ್ಮೆಂಬ ಕಾಮನ ಹೋಳಿಯದಹಿಸಿ | ಒಮ್ಮನದಿ ನಲಿದಾಡಿರಣ್ಣಾ 2 ಹರಿನಾಮ ಕುಂಕುಮ ಸಾರಿ ಚಲ್ಯಾಡುತ | ಧರಿಸುತ ಹೃದಯ ಶಿರಸದಲಿ | ಕರದಲಿ ವಿಚಾರ ಬೆತ್ತ ಹೊಯ್ದಾಡುತ | ಹರುಷದಿಂದಲಿ ಕುಣಿದಾಡಿರಣ್ಣಾ 3 ಪರಿ ಪರಿ ಸಾಧನ ದೋರಿಸುತಾ | ಕರುಣದಿ ಆಡಿಸುತಿಲ್ಲಿ ನಿಂದಿರಲು | ದುರಿತಭಯಕ ಅಂಜ ಬ್ಯಾಡಿರಣ್ಣಾ 4 ಸಂಚಿತ ಬೂದಿಯ ಚಲ್ಲಿ ಪರಮಾ | ರ್ಥದ ಗಂಗಿಯೊಳು ಮಿಂದು ಶುಚಿಯಾಗಿ | ಪದುಮಾಶ್ರಯದಿಂದ ಗತಿಪಡಿರಣ್ಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಜ್ಜನರ ಸಂಗ ಸ್ವಹಿತಕೆ ಸುಖಸನ್ಮತ ಅಮೃತ ಧ್ರುವ ಗಂಗಿಯೊಳು ಮುಳಗಿ ತಾ ಮಿಂದರ್ಹೋಗದು ಪಾಪ ಹಾಂಗೆಂದಿಗಲ್ಲ ಸಜ್ಜನರ ಪ್ರತಾಪ ಕಂಗಳಲಿ ಕಂಡರ್ಹೋಗುವುದು ತಾಪಾಪ ಸಂಗ ಸುಖದಲಿ ಸರ್ವಪುಣ್ಯ ಮೋಪ 1 ಚಂದ್ರ ಶೀತಳದೊಳು ನಿಂದರ್ಹೋಗುದು ತಾಪ ಎಂದೆಂದಿಗ್ಹಾಂಗಲ್ಲ ಸಜ್ಜನ ಸಮೀಪ ಒಂದೆ ಮನದಲಿ ನೆನೆದರ್ಹಿಂಗಿ ಹೋಗುದು ತಾಪ ವಂದಿಸೀದವಾ ಮೂರು ಲೋಕ ತಾಪಾ 2 ಕಲ್ಪತರುವಿಗೆ ಕಲ್ಪಿಸಿದರ್ಹೋಗುದು ದೈನ್ಯ ಒಲಮಿಂದ್ಹಾಗಲ್ಲ ಸದ್ಗುರು ಸುಪುಣ್ಯ ಕಲ್ಪಿಸದೆ ಕುಡುವದಿದು ನೋಡಿ ಘನ ತಾರ್ಕಣ್ಯ ಸಲಹುತೀಹ್ಯ ಮಹಿಪತಿಗಿದೆವೆ ಧನ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು